2 ಲಕ್ಷ ಸ್ಯಾಲರಿ ಇದ್ದವರು 80 ಲಕ್ಷ ಬೆಂಜ್ ಖರೀದಿ, ಚರ್ಚೆಗೆ ಗ್ರಾಸವಾದ ಕಾರು ಶೋ ಆಫ್ ಪೋಸ್ಟ್‌, ಈ ಪೋಸ್ಟ್‌ನಿಂದ ಇದೀಗ ಕಾರು ಖರೀದಿ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅವರವರ ಹಣದಲ್ಲಿ ಕಾರು ಖರೀದಿಸಿದರೆ ತಪ್ಪೇನು? ಪೋಸ್ಟ್ ಹೇಳುತ್ತಿರುವುದೇನು?

ಜಿಎಸ್‌ಟಿ ಕಡಿತದ ಬಳಿಕ ಭಾರತದಲ್ಲಿ ಕಾರು ಖರೀದಿ ಹೆಚ್ಚಾಗಿದೆ. ಹಲವರು ಕಾರು ಕನಸು ನನಸಾಗಿಸುತ್ತಿದ್ದಾರೆ. ಹಬ್ಬದ ಆಫರ್, ಜಿಎಸ್‌ಟಿ ಕಡಿತದಿಂದ ಹಲವರು ಕಾರು ಖರೀದಿಸಲು ಮುಂದಾಗುತ್ತಿದ್ದಾರೆ. ಇದರ ನಡುವೆ ಕಾರು ಒಂದು ಶೋ ಆಫ್ ವಸ್ತುವಾಗುತ್ತಿದೆ ಅನ್ನೋ ಚರ್ಚೆ ಜೋರಾಗುತ್ತಿದೆ. ರೆಡ್ಡಿಟ್ ಬಳಕೆದಾರ ಮಾಡಿರುವ ಪೋಸ್ಟ್ ಭಾರಿ ಚರ್ಚೆಯಾಗುತ್ತಿದೆ. ತಿಂಗಳಿಗೆ 1 ರಿಂದ 2 ಲಕ್ಷ ರೂಪಾಯಿ ವೇತನ ಪಡೆಯುವ ಮಂದಿ, 70 ರಿಂದ 80 ಲಕ್ಷ ರೂಪಾಯಿ ಮರ್ಸಿಡಿಸ್ ಬೆಂಜ್ ಕಾರು ಖರೀದಿಸುತ್ತಿದ್ದಾರೆ. ಇದು ಆರ್ಥಿಕ ಹೊರೆ ಮಾತ್ರವಲ್ಲ, ಸಂಕಷ್ಟಕ್ಕೆ ಸಿಲಿಕುವ ಸಾಧ್ಯತೆ ಇದೆ ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಕೆಲ ಘಟನೆ ಹಾಗೂ ಅಂಕಿ ಅಂಶಗಳ ವಿವರಣೆ ನೀಡಲಾಗಿದೆ.

ಏನಿದು ರೆಡ್ಡಿಟ್ ಪೋಸ್ಟ್?

ರೆಡ್ಡಿಟ್ ಪೋಸ್ಟ್‌ನಲ್ಲಿ ಮಹತ್ವದ ವಿಚಾರದ ಮೇಲೆ ಬೆಳಕು ಚೆಲ್ಲಲಾಗಿದೆ. ರೆಡ್ಡಿಟ್ ಬಳಕೆದಾರ ಮರ್ಸಡಿಸ್ ಬೆಂಜ್ ಶೋ ರೂಂಗೆ ತೆರಳಿದಾಗ ಅಲ್ಲಿ ಕಾರು ಖರೀದಿಸುವ ಟ್ರೆಂಡ್ ನೋಡಿ ಅಚ್ಚರಿಗೊಂಡಿದ್ದೇನೆ. ಬಹುತೇಕ ಕಾರು ಖರೀದಿಸುವ ಮಂದಿ ವೇತನ 1.4 ರಿಂದ 2 ಲಕ್ಷ ರೂಪಾಯಿ ಇದೆ. ಆದರೆ ಇವರು 60 ರಿಂದ 80 ಲಕ್ಷ ರೂಪಾಯಿ ಮರ್ಸಡೀಸ್ ಬೆಂಜ್ ಕಾರು ಖರೀದಿಸುತ್ತಿದ್ದಾರೆ. ಇವರು 7 ರಿಂದ 9 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುತ್ತಿದ್ದಾರೆ. ಇನ್ನುಳಿದ ಭಾರಿ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯುತ್ತಿದ್ದಾರೆ. 7 ವರ್ಷ, 10 ವರ್ಷಕ್ಕೆ ಸಾಲ ಪಡೆಯುತ್ತಿದ್ದಾರೆ. ಸ್ಯಾಲರಿ, ಆದಾಯಕ್ಕಿಂತ ಹೆಚ್ಚು ಅಂದರೆ ಅಸಾಧ್ಯ ಮೊತ್ತದ ಕಾರು ಖರೀದಿಸುತ್ತಿದ್ದಾರೆ. ಇಲ್ಲಿ ಕಾರು ಖರೀದಿ ವಿಚಾರವಲ್ಲ, ಸಾಲದ ಹೊರೆ ಹಾಗೂ ಮುಂಬರುವು ಸಂಕಷ್ಟ ಅತೀವ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರು ಇತರರಿಗೆ ತೋರಿಸುವ ಶೋಕಿ ವಸ್ತುವೇ?

ರೆಡ್ಡಿಟ್ ಪೋಸ್ಟ್‌ನಲ್ಲಿ ಕಾರು ಖರೀದಿ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಕಾರು ಶೋಕಿಯ ವಸ್ತುವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕಾರು ಖರೀದಿ ತಪ್ಪಲ್ಲ, ಆದರೆ ತಮ್ಮ ವೇತನ, ಆದಾಯಕ್ಕೆ ಸರಿಹೊಂದುವ ಕಾರು ಖರೀದಿಸಬೇಕು. ತುಸು ಆರ್ಥಿಕ ಭಾರವಾದರೂ ಹೊಂದಿಕೆ ಮಾಡುವ ಅಥವಾ ಸರಿದೂಗಿಸುವಂತಿರಬೇಕು. ಇತರರಿಗೆ ತಮ್ಮ ಸ್ಟೇಟಸ್ ತೋರಿಸಲು, ಇತರರ ಮುಂದೆ ತಮ್ಮ ಐಷಾರಾಮಿತನ ತೋರಿಸಲು ಕಾರು ಖರೀದಿಸಬಾರದು, ಪ್ರತಿಯೊಬ್ಬರಿಗೂ ಬೆಂಜ್ ಕಾರು ಇರಬೇಕು ಅನ್ನೋ ಆಸೆ ಇರುತ್ತದೆ. ಆದರೆ ಬೆಂಜ್ ಕಾರು ಖರೀದಿಸಿದ ಬಳಿಕವ ಆರ್ಥಿಕವಾಗಿ ಯಾವುದೇ ಹೊರೆಯಾಗುವುದಿಲ್ಲ ಎಂದಾದರೆ ಖಂಡಿತ ಖರೀದಿ ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ರೆಡ್ಡಿಟ್ ಪೋಸ್ಟ್‌ಗೆ ಹಲವರ ಪ್ರತಿಕ್ರಿಯೆ

ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಮನೆಕೆಲಸದಾಕೆ ಮಗ ಮೊದಲ 1 ಲಕ್ಷ ರೂಪಾಯಿ ಐಫೋನ್ ಖರೀದಿಸಿದ ಬಳಿಕ 2 ಲಕ್ಷ ರೂಪಾಯಿ ಬೈಕ್ ಖರೀದಿಸಿದ್ದಾನೆ. ಅವರ ವೇತನ, ಒಟ್ಟು ವಾರ್ಷಿಕ ಆದಾಯ ಎಲ್ಲಾ ಲೆಕ್ಕ ಹಾಕಿದರೂ ತಾಳೆಯಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಮತ್ತೊಬ್ಬ ತನ್ನದೇ ಕತೆ ಹೇಳಿದ್ದಾನೆ. 20,000 ರೂಪಾಯಿ ತಿಂಗಳ ವೇತನ ಪಡೆಯುವ ತಾನು ಎರಡೇ ತಿಂಗಳ ವೇತನದಲ್ಲಿ 15,000 ರೂಪಾಯಿ ಮುಂಗಡ ಪಾವತಿ ಮಾಡಿ ಬೈಕ್ ಖರೀದಿಸಿದ್ದೇನೆ ಎಂದಿದ್ದಾರೆ.