ದೀಪಾವಳಿ ಡಿಸ್ಕೌಂಟ್ ಆಫರ್, ಸ್ಕೋಡಾ ಕಾರುಗಳ ಮೇಲೆ ಗರಿಷ್ಠ 4.5 ಲಕ್ಷ ರೂ ಡಿಸ್ಕೌಂಟ್
ದೀಪಾವಳಿ ಡಿಸ್ಕೌಂಟ್ ಆಫರ್, ಸ್ಕೋಡಾ ಕಾರುಗಳ ಮೇಲೆ ಗರಿಷ್ಠ 4.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದೆ. 7 ಲಕ್ಷ ರೂಪಾಯಿ ಇದ್ದ ಕೈಲಾಖ್ ಕಾರು ಡಿಸ್ಕೌಂಟ್ ಬಳಿಕ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ. ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್?

ಸ್ಕೋಡಾ ಹಬ್ಬದ ಆಫರ್
ಸ್ಕೋಡಾ ಹಬ್ಬದ ಆಫರ್
ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ತಯಾರಿಗಳು ಜೋರಾಗಿದೆ.ನಗರಗಳಿಂದ ಹಲವರು ಕುಟುಂಬದ ಜೊತೆ ಹಬ್ಬ ಆಚರಿಸಲು ಊರು ಸೇರುತ್ತಿದ್ದಾರೆ. ಇದೇ ವೇಳೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಸ್ಕೋಡಾ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 4.5 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. ಇದರ ಪರಿಣಾಮ ಸ್ಕೋಡಾ ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ
ಅತೀ ಕಡಿಮೆ ಬೆಲೆಯಲ್ಲಿ ಕೈಲಾಖ್
ಅತೀ ಕಡಿಮೆ ಬೆಲೆಯಲ್ಲಿ ಕೈಲಾಖ್
ಸ್ಕೋಡಾದ ಕೈಲಾಖ್ ಕಾರಿನ ಮೇಲೆ ಗರಿಷ್ಠ 65,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 1.0 ಲೀಟರ್ ಎಂಜಿನ್ ಹೊಂದಿರುವ ಕೈಲಾಖ್ ಕಾರು ಆರಂಭಿಕ 7.55 ಲಕ್ಷ ರೂಪಾಯಿ ಇದೀಗ 6.90 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇತ್ತ ಸ್ಕೋಡಾ ಕುಶಾಖ್ ಕಾರಿನ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. 10.61 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿರುವ ಈ ಕಾರು ಇದೀಗ ಅತೀ ಕಡಿಮೆ ಬೆಲೆಗೆ ಲಭ್ಯವಾಗಿದೆ.
ಸ್ಕೋಡಾ ಕೋಡಿಯಾಖ್ ಮೇಲೆ 4.5 ಲಕ್ಷ ರೂ ಆಫರ್
ಸ್ಕೋಡಾ ಕೋಡಿಯಾಖ್ ಮೇಲೆ 4.5 ಲಕ್ಷ ರೂ ಆಫರ್
ಸ್ಕೋಡಾ ಕಾರುಗಳ ಪೈಕಿ ಸ್ಕೋಡಾ ಸ್ಲಾವಿಯಾ ಕಾರಿನ ಮೇಲೆ 2.5 ಲಕ್ಷ ರೂಪಾಯಿ ಗರಿಷ್ಠ ಆಫರ್ ನೀಡಲಾಗಿದೆ. ಸ್ಲಾವಿಯಾ ಕಾರು 10 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 17.70 ಲಕ್ಷ ರೂಪಾಯಿ.ಇನ್ನು ಕೋಡಿಯಾಖ್ ಕಾರಿನ ಮೇಲೆ ಬರೋಬ್ಬರಿ 4.5 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ.
ಸ್ಕೋಡಾ ದೀಪಾವಳಿ ಆಫರ್
ಸ್ಕೋಡಾ ದೀಪಾವಳಿ ಆಫರ್
ಸ್ಕೋಡಾ ಕೈಲಾಖ್ : ಆಫರ್ 65,000 ರೂಪಾಯಿ
ಸ್ಕೋಡಾ ಸ್ಲಾವಿಯಾ : ಆಫರ್ 2.25 ಲಕ್ಷ ರೂಪಾಯಿ
ಸ್ಕೋಡಾ ಕುಶಾಖ್ : ಆಫರ್ 2.5 ಲಕ್ಷ ರೂಪಾಯಿ
ಸ್ಕೋಡಾ ಕೋಡಿಯಾಖ್ : ಆಫರ್ 4.5 ಲಕ್ಷ ರೂಪಾಯಿ
ಸೂಚನೆ: ಹತ್ತಿರದ ಡೀಲರ್ ಬಳಿ ಸಂಪರ್ಕಿಸಿ ಡಿಸ್ಕೌಂಟ್ ಆಫರ್ ಖಚಿತಪಡಿಸಿಕೊಳ್ಳಿ, ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಆಫರ್, ಡಿಸ್ಕೌಂಟ್ ವ್ಯತ್ಯಾಸವಾಗಬಹುದು.
ದೀಪಾವಳಿ ಧಮಾಕ
ದೀಪಾವಳಿ ಧಮಾಕ
ದೀಪಾವಳಿ ಆಫರ್ ಘೋಷಿಸಿರುವ ಸ್ಕೋಡಾ ಅವಧಿ ಪ್ರಕಟಿಸಿಲ್ಲ. ಎಲ್ಲಿಯವರೆಗೆ ಈ ಆಫರ್ ಇರಲಿದೆ ಅನ್ನೋ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ. ಸದ್ಯ ದೀಪಾವಳಿಗೆ ಆಫರ್ ಘೋಷಿಸಲಾಗಿದೆ. ಹೀಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಫರ್ ಇರುವ ಸಾಧ್ಯತೆ ಇದೆ.