Published : Apr 01, 2026, 06:49 AM ISTUpdated : Apr 01, 2026, 11:11 PM IST

India Latest News Live: IPL 2026 - ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!

ಸಾರಾಂಶ

ಮುಂಬೈ: ಐಪಿಎಲ್‌ನಲ್ಲಿ ಬ್ರಾಡ್‌ಕಾಸ್ಟ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟನ್‌ನ ಜಾನ್‌ ವಿಲಿಯಮ್‌ ಲಾಂಗ್‌ಫೋರ್ಡ್‌(75) ಮುಂಬೈನ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ಬೆಳಗ್ಗೆ ಹೋಟೆಲ್‌ನಲ್ಲಿ ಲಾಂಗ್‌ಫೋರ್ಡ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಹೋಟೆಲ್‌ನವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರೊಳಗೆ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಜಾನ್‌ ಸಾವಿಗೆ ಐಪಿಎಲ್‌ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.

Delhi Capitals

11:11 PM (IST) Apr 01

IPL 2026 - ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!

142 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಇಂಪ್ಯಾಕ್ಟ್ ಆಟಗಾರ ಸಮೀರ್ ರಿಜ್ವಿ ಅವರ ಅಜೇಯ ಅರ್ಧಶತಕ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಅವರ ಸಮಯೋಚಿತ ಆಟದಿಂದ ಡೆಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಲಖನೌಗೆ ತವರಿನಲ್ಲೇ ಆಘಾತ ನೀಡಿತು.
Read Full Story

10:22 PM (IST) Apr 01

ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್ - ಹೆಲಿಕಾಪ್ಟರ್ ಖರೀದಿಸಿದ ರೈತ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಭಾರಿ  ಮೊತ್ತದ ಪರಿಹಾರ ದೊರೆತಿದೆ. ಇದರಿಂದಾಗಿ, ಭೂಮಿ ನೀಡಿದ ರೈತರೊಬ್ಬರು 15 ಕೋಟಿ ರೂ. ಪರಿಹಾರ ಪಡೆದು ಹೆಲಿಕಾಪ್ಟರ್ ಖರೀದಿಸಿದ ವಿಚಾರ ಈಗ ಭಾರಿ ಸುದ್ದಿಯಾಗುತ್ತಿದೆ.

Read Full Story

10:10 PM (IST) Apr 01

'ನೀನೇ ಹಿಂಗಿದ್ದೀಯಾ ಅಂದ್ಮೆಲೇ, ನಿನ್ನ ಮಗಳು ಹೇಗಿರಬೇಡ..10 ಸಾವಿರ ಕೊಡ್ತೆನೆ ಅವಳ ಕಳಿಸು' ASI ಕಾಮದಾಸೆಗೆ ಬೆಚ್ಚಿಬಿದ್ದ ಮಹಿಳೆ

ಮಹಾರಾಷ್ಟ್ರದ ಅಕೋಲಾದಲ್ಲಿ, ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಜಾಧವ್ ಅವರು ವಶದಲ್ಲಿದ್ದ ಮಹಿಳೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಘಟನೆಯ ನಂತರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. 

Read Full Story

09:48 PM (IST) Apr 01

ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾ ಮಿಸ್ ಮಾಡಿಕೊಂಡ ಟಬು - ಆ ಸ್ಟಾರ್ ನಟಿಯೇ ಕಾರಣವಾದ್ರಾ?

ನಟಿ ಟಬು ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗುವ ಅವಕಾಶವನ್ನು ಕಳೆದುಕೊಂಡರು. ಅದ್ರಲ್ಲೂ ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾವನ್ನು ಮಿಸ್ ಮಾಡಿಕೊಂಡರು.

Read Full Story

09:12 PM (IST) Apr 01

ಆ ಸಿನಿಮಾದಲ್ಲಿ ನಟಿಸಿದ್ದು ನನ್ನ ಕೆರಿಯರ್‌ನ ಅತಿದೊಡ್ಡ ತಪ್ಪು - ನಯನತಾರಾ ಓಪನ್ ಮಾತು

ತಮಿಳಿನ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಒಂದು ಸಿನಿಮಾದಲ್ಲಿ ನಟಿಸಿದ್ದು ನಾನು ಮಾಡಿದ ಅತಿದೊಡ್ಡ ತಪ್ಪು ಎಂದು ನಟಿ ನಯನತಾರಾ ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಯಾವುದು? ಇಲ್ಲಿದೆ ವಿವರ.

Read Full Story

08:56 PM (IST) Apr 01

ಇರಾನ್‌ ಮುಂದೆ ಮಂಡಿಯೂರಿದ ಅಮೆರಿಕ? - ಶೀಘ್ರದಲ್ಲೇ ಕದನ ವಿರಾಮ, ಸಂಚಲನ ಮೂಡಿಸಿದ ಡೊನಾಲ್ಡ್ ಟ್ರಂಪ್ ಪೋಸ್ಟ್‌

ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇರಾನ್ ಕದನ ವಿರಾಮಕ್ಕಾಗಿ ಯಾಚಿಸುತ್ತಿದೆ ಎಂದು ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದೊಂದೇ ಕದನ ವಿರಾಮಕ್ಕೆ ಇರುವ ಏಕೈಕ ಷರತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

08:07 PM (IST) Apr 01

FASTag ವಾರ್ಷಿಕ ಪಾಸ್‌ ದರ ಹೆಚ್ಚಳ, ಈಗಾಗಲೇ ಪಾಸ್‌ ಖರೀದಿ ಮಾಡಿದವರಿಗೂ ತಟ್ಟುತ್ತಾ ಬೆಲೆ ಏರಿಕೆ ಬಿಸಿ, ಇಲ್ಲಿದೆ ಡೀಟೇಲ್ಸ್‌..

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಖಾಸಗಿ ವಾಹನಗಳ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆಯನ್ನು ಏಪ್ರಿಲ್ 1 ರಿಂದ ₹3,075 ಕ್ಕೆ ಹೆಚ್ಚಿಸಿದೆ. ಈ ಹೊಸ ದರವು, ಹೊಸದಾಗಿ ಪಾಸ್ ಖರೀದಿಸುವವರಿಗೆ ಅಥವಾ ನವೀಕರಿಸುವವರಿಗೆ ಮಾತ್ರ ಅನ್ವಯಿಸುತ್ತದೆ.

Read Full Story

07:51 PM (IST) Apr 01

ವೈರಲ್ ಆಯ್ತು ಗ್ಲೋಬಲ್ ಸ್ಟಾರ್ ಅಧ್ಯಾತ್ಮಿಕ ಪಯಣ; ಸುವರ್ಣ ಮಂದಿರದಲ್ಲಿ 'ಸೇವೆ' ಮಾಡ್ತಿರೋ ಪ್ರಿಯಾಂಕಾ ಚೋಪ್ರಾ!

ಈ ಹಿಂದೆ ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ ನೀಡಿದ್ದ ಪ್ರಿಯಾಂಕಾ, ಈಗ ಸುವರ್ಣ ಮಂದಿರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಅಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಕೇವಲ ಗ್ಲಾಮರ್ ಲೋಕಕ್ಕೆ ಸೀಮಿತವಾಗದೆ, ಪೂಜೆ, ಪುನಸ್ಕಾರ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

Read Full Story

07:22 PM (IST) Apr 01

ಆಹಾರ ಕದ್ದಿದ್ದಕ್ಕಾಗಿ ಪುಟ್ಟ ಹುಡುಗನನ್ನು 5 ಗಂಟೆಗಳ ಕಾಲ ಡೀಪ್‌ ಫ್ರೀಜರ್‌ನಲ್ಲಿ ಲಾಕ್‌ ಮಾಡಿದ ಅಂಗಡಿ ಮಾಲೀಕ!

ಉತ್ತರ ಪ್ರದೇಶದ ಹಾಪುರ್‌ನಲ್ಲಿ, ಆಹಾರ ಕಳ್ಳತನದ ಆರೋಪದ ಮೇಲೆ 7 ವರ್ಷದ ಬಾಲಕನನ್ನು ಅಂಗಡಿ ಮಾಲೀಕನೊಬ್ಬ ಐದು ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಕೂಡಿಹಾಕಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆದ ನಂತರ, ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.

Read Full Story

06:52 PM (IST) Apr 01

ಪಶ್ಚಿಮ ಏಷ್ಯಾದಿಂದ ಶುಭಸುದ್ದಿ - ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

Iran Sends Crude Oil to India After 7 Years Amid Middle East War ಯುದ್ಧದ ಉದ್ವಿಗ್ನತೆಯ ನಡುವೆಯೂ, ಇರಾನ್ ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತ ಹಡಗನ್ನು ಕಳುಹಿಸಿದೆ. 'ಪಿಂಗ್ ಶುನ್' ಹೆಸರಿನ ಈ ಹಡಗು ಸುಮಾರು 5 ಲಕ್ಷ ಬ್ಯಾರಲ್ ತೈಲವನ್ನು ತರುತ್ತಿದೆ.

Read Full Story

06:49 PM (IST) Apr 01

ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಧೂಳೆಬ್ಬಿಸಿದೆ - 800 ಕೋಟಿ ದಾಟಿದ ಚಿತ್ರಕ್ಕೆ ವಿಕ್ಕಿ ಕೌಶಲ್ ಫಿದಾ!

ಧುರಂಧರ್ 2 ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಈ ಸಾಲಿಗೆ ಈಗ ನಟ ವಿಕ್ಕಿ ಕೌಶಲ್ ಕೂಡ ಸೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡವನ್ನು ಮನಸಾರೆ ಹೊಗಳಿದ್ದಾರೆ.

Read Full Story

06:39 PM (IST) Apr 01

'ಧುರಂಧರ್' ಎರಡೂ ಭಾಗಗಳನ್ನೂ ಒಟ್ಟಿಗೇ ನೋಡುವ ಚಾನ್ಸ್.. 9 ಗಂಟೆಗಳನ್ನು ಥಿಯೇಟರ್‌ನಲ್ಲಿ ಕಳೆಯಲು ನೀವು ರೆಡಿನಾ?

ಹಿಂದೆ 'ಬಾಹುಬಲಿ' ಸಿನಿಮಾವನ್ನು 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಸೇರಿಸಿ ರಿಲೀಸ್ ಮಾಡಲಾಗಿತ್ತು. ಈಗ ರಣವೀರ್ ಅಭಿಮಾನಿಗಳು ಕೂಡ ಅದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕಂತೂ ಹಾಂಕಾಂಗ್ ಸಿನಿಪ್ರಿಯರಿಗೆ ಈ 'ಧುರಂಧರ್ ಮ್ಯಾರಾಥಾನ್' ಮಸ್ತ್ ಮನರಂಜನೆ ನೀಡಲು ಸಜ್ಜಾಗಿದೆ. ಭಾರತದಲ್ಲೂ ಇಂಥದ್ದೊಂದು ಪ್ರದರ್ಶನ ನಡೆಯುತ್ತಾ?

Read Full Story

06:21 PM (IST) Apr 01

ಕೇರಳ ಸಮೀಕ್ಷೆ - 'ದೇವರ ನಾಡಲ್ಲಿ' ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ

ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಲಿದೆ ಎಂದು ಮನೋರಮಾ ನ್ಯೂಸ್ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. 140 ಸ್ಥಾನಗಳ ಪೈಕಿ ಯುಡಿಎಫ್ 69-81 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಆಡಳಿತಾರೂಢ ಎಲ್‌ಡಿಎಫ್ 57-69 ಸ್ಥಾನಗಳಿಗೆ ಸೀಮಿತವಾಗಲಿದೆ. 

Read Full Story

06:20 PM (IST) Apr 01

ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್

ಏಪ್ರಿಲ್ ಫೂಲ್ ದಿನದಂದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮಂತೆಯೇ ಕಾಣುವ ವ್ಯಕ್ತಿಯನ್ನು ಬಳಸಿ ಆತ್ಮೀಯ ಸ್ನೇಹಿತನಿಗೆ ಪ್ರಾಂಕ್ ಮಾಡಿದ್ದಾರೆ. ಸಚಿನ್ ಎಂದು ಭಾವಿಸಿ ಸ್ನೇಹಿತ ಅವರನ್ನು ತಬ್ಬಿಕೊಂಡಾಗ, ನಡೆದ ಘಟನೆಯನ್ನು ಸಚಿನ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Read Full Story

06:01 PM (IST) Apr 01

ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್ - ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ

ನಟ ಶಾರುಖ್ ಖಾನ್ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಒಂದರಲ್ಲಿ ಅವರು 26/11ರ ಮುಂಬೈ ದಾಳಿಯ ಉಗ್ರ ಕಸಬ್‌ನನ್ನು 'ಜಂಟಲ್‌ಮನ್' ಎಂದು ಕರೆದಿದ್ದರೆ, ಮತ್ತೊಂದರಲ್ಲಿ ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
Read Full Story

05:28 PM (IST) Apr 01

ಹೆಣ ಹೊರುವುದೇ ಮಕ್ಕಳಿಗೆ ಆಟ - ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆನಿಸುವ ವಿಡಿಯೋ

ಮೂರು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್-ಗಾಜಾ ಯುದ್ಧವು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹುಟ್ಟಿನಿಂದಲೇ ಹಿಂಸೆ ಮತ್ತು ಸಾವನ್ನು ನೋಡುತ್ತಿರುವ ಈ ಮಕ್ಕಳಿಗೆ, ಯುದ್ಧವೇ ಸಾಮಾನ್ಯ ಜೀವನವಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ, ಮಕ್ಕಳು ಗೊಂಬೆಯನ್ನು ಹೆಣದಂತೆ ಹೊತ್ತು ಸಾಗಿಸುವ ಆಟವಾಡುತ್ತಿರುವುದು ಯುದ್ಧದ ಕರಾಳತೆಯನ್ನು ಮತ್ತು ಕಳೆದುಹೋದ ಮುಗ್ಧತೆಯನ್ನು ತೋರಿಸುತ್ತದೆ.
Read Full Story

05:28 PM (IST) Apr 01

ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ದಿನೇಶ್ ಕಾರ್ತಿಕ್ ಐಕಾನಿಕ್ ಜರ್ಸಿ ನಂ.19

ಗ್ರಾಂಡ್ 7 ಸ್ಪೋರ್ಟ್ಸ್ ಮೀಟ್‌ನ ಅಧ್ಯಕ್ಷತೆ ವಹಿಸಿದ್ದ ಚೆನ್ನೈಸ್ ಅಮಿರ್ತಾ ಗ್ರೂಪ್‌ನ ಅಧ್ಯಕ್ಷರಾದ ಆರ್.ಬೂಮೀನಾಥನ್ ಅವರು ಮಾತಾಡಿ ದಿನೇಶ್ ಕಾರ್ತಿಕ್ ಈ ದಾಖಲೆಯು ವಿದ್ಯಾರ್ಥಿಗಳಲ್ಲಿ ದೃಢತೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೌಲ್ಯಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದಿದ್ದಾರೆ. ಏನಿದು ಜರ್ಸಿ ನಂ.19 ಸ್ಪೆಷಾಲಿಟಿ? ನೋಡಿ..

Read Full Story

05:12 PM (IST) Apr 01

ಮದುವೆ ಇಲ್ಲ ಮಲೆಯಾಳಂ ಚಿತ್ರರಂಗವೇ ನನಗೆಲ್ಲಾ! ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಗುಡ್ ನ್ಯೂಸ್

ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, 'ಕಥನಾರ್ - ದಿ ವೈಲ್ಡ್ ಸೋರ್ಸೆರರ್' ಎಂಬ ಮಲಯಾಳಂ ಚಿತ್ರದ ಮೂಲಕ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಹಾರರ್-ಫ್ಯಾಂಟಸಿ ಚಿತ್ರದ ಟ್ರೈಲರ್, ಅನುಷ್ಕಾ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದ್ದು, ಚಿತ್ರವು 15 ಭಾಷೆಗಳಲ್ಲಿ ತೆರೆಕಾಣಲಿದೆ.
Read Full Story

05:05 PM (IST) Apr 01

ನಿನ್ನ ರಸಗುಲ್ಲಾಕ್ಕೆ ಬೆಂಕಿ ಹಾಕಾ ಎಂದ ವಧು- ವರ ಕಿಡಿಕಿಡಿ - ಆಮೇಲೆ ಆಗಿದ್ದೇನು? ವಿಡಿಯೋ ವೈರಲ್​

ವಧುವೊಬ್ಬಳು ವರನಿಗೆ ರಸಗುಲ್ಲಾ ತಿನ್ನಿಸಲು ಮುಂದಾದಾಗ ಆತ ನಿರಾಕರಿಸುತ್ತಾನೆ. ನಂತರ ವರನು ತಿನ್ನಿಸಲು ಬಂದಾಗ ವಧು ಮುಖ ತಿರುಗಿಸುತ್ತಾಳೆ. ಇದರಿಂದ ಕೋಪಗೊಂಡ ವರನು ರಸಗುಲ್ಲಾಗಳನ್ನು ಎಸೆದು ಹೋಗುವ ಫನ್ನಿ ವಿಡಿಯೋವೊಂದು ವೈರಲ್ ಆಗಿದೆ.
Read Full Story

04:57 PM (IST) Apr 01

ಕೆಜಿಎಫ್ ಬಾಕ್ಸಾಫೀಸ್​ ಕೋಟೆ ಕೆಡವಿದ ರಣ್ವೀರ್ ಸಿಂಗ್! ಧುರಂಧರ್ 2 ಮುಂದೆ ಬಾಹುಬಲಿ, ಪುಷ್ಪ ರೆಕಾರ್ಡ್ ನುಚ್ಚುನೂರು!

'ಧುರಂಧರ್-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಎರಡು ಭಾಗಗಳಿಂದ ಒಟ್ಟು 2,700 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಚಿತ್ರವು 'ಬಾಹುಬಲಿ', 'ಪುಷ್ಪ', ಮತ್ತು 'ಕೆಜಿಎಫ್' ಸರಣಿಗಳ ಒಟ್ಟು ಗಳಿಕೆಯ ದಾಖಲೆಗಳನ್ನು ಮುರಿದುಹಾಕಿದೆ. ಭಾರತದ ಸ್ಪೈ ಏಜೆಂಟ್ ಕಥೆಯುಳ್ಳ ಈ ಸಿನಿಮಾ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ.
Read Full Story

04:46 PM (IST) Apr 01

ಬ್ಯಾಂಕ್ ಗ್ರಾಹಕರ ಗಮನಕ್ಕೆ - ಎಟಿಎಂ ನಿಯಮಗಳಲ್ಲಿ ಭಾರಿ ಬದಲಾವಣೆ; ಇಂದಿನಿಂದ ಹೊಸ ದರ ಅನ್ವಯ!

ಎಚ್‌ಡಿಎಫ್‌ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್‌ಗಳು ಏಪ್ರಿಲ್ 1, 2026 ರಿಂದ ತಮ್ಮ ಎಟಿಎಂ ವಹಿವಾಟು ನಿಯಮಗಳನ್ನು ಬದಲಾಯಿಸಿವೆ. ಈ ಹೊಸ ನಿಯಮಗಳು ನಗದು ವಿತ್‌ಡ್ರಾ ಮಿತಿ, ಯುಪಿಐ ವಹಿವಾಟುಗಳ ಲೆಕ್ಕಾಚಾರ ಮತ್ತು ಉಚಿತ ವಹಿವಾಟುಗಳ ನಂತರ ವಿಧಿಸುವ ಶುಲ್ಕಗಳ ಮೇಲೆ ಪರಿಣಾಮ ಬೀರುತ್ತವೆ.
Read Full Story

04:29 PM (IST) Apr 01

ಯುದ್ಧದ ಭೀತಿಯಿಂದ ಬದಲಾದ ಟ್ರೆಂಡ್ - ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಗಿಬಿದ್ದ ಜನ, ಹೊಸ ದಾಖಲೆ!

ಜಾಗತಿಕ ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ದಾಖಲೆಯ ಏರಿಕೆ ಕಂಡಿದೆ. ಈ ಮಹತ್ವದ ಬದಲಾವಣೆಯಲ್ಲಿ, ಟಿವಿಎಸ್ ಮತ್ತು ಬಜಾಜ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಗ್ರಸ್ಥಾನದಲ್ಲಿದ್ದ ಓಲಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

Read Full Story

04:27 PM (IST) Apr 01

ಸ್ವಲ್ಪ ರೆಕಾರ್ಡ್ ಮಾಡಿ ಅಂತ ಫೋನ್ ಕೊಟ್ಟು ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ

ಮಹಿಳೆಯೊಬ್ಬಳು ತಾನು ಮಾಡುತ್ತಿರುವ ಕೃತ್ಯವನ್ನು ವೀಡಿಯೋ ಮಾಡುವಂತೆ ಅಂಗಡಿ ಮಾಲೀಕರೊಬ್ಬರಿಗೆ ತಿಳಿಸಿ ಬಳಿಕ ಒಡಿಶಾದ ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಂತಹ ಘಟನೆ ನಡೆದಿದೆ.

Read Full Story

04:05 PM (IST) Apr 01

ಯಶ್‌ರನ್ನೇ ಕೈ ಬಿಟ್ಟು ಪ್ರಚಾರಕ್ಕಿಳಿದ ರಣಬೀರ್ ಕಪೂರ್​..! ರಾವಣನೇ ಇಲ್ಲದೇ ರಾಮಾಯಣ ಪ್ರಮೋಷನ್​ ಯಾಕೆ?

ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಪ್ರಚಾರ ಲಾಸ್ ಏಂಜಲೀಸ್‌ನಲ್ಲಿ ಆರಂಭವಾಗಿದ್ದು, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗವಹಿಸಿದ್ದಾರೆ. ಆದರೆ, ರಾವಣನ ಪಾತ್ರದಲ್ಲಿರುವ ಯಶ್ ಗೈರಾಗಿದ್ದು, ತಮ್ಮ 'ಟಾಕ್ಸಿಕ್' ಸಿನಿಮಾದ ರೀ-ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.
Read Full Story

03:35 PM (IST) Apr 01

ಹಾಸನ - ಮದುವೆ ಮಾಡಿಸಲಿಲ್ಲ ಎಂದು ಹೆತ್ತಮ್ಮನನ್ನೇ ಕೊಂದ ಪಾಪಿ ಮಗ

ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿದ್ದ ಮಗನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಜಗಳದ ವೇಳೆ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನ್ನಪ್ಪಿದ್ದಾರೆ.

Read Full Story

03:03 PM (IST) Apr 01

ಐಪಿಎಲ್ ಇತಿಹಾಸದಲ್ಲೇ ಮೊದಲ ಸಲ ತಂದೆ-ಮಗನ ಮುಖಾಮುಖಿಗೆ ವೇದಿಕೆ ರೆಡಿ! ಈ ದಿನದಂದು ನಡೆಯುತ್ತೆ ಹೈವೋಲ್ಟೇಜ್ ಮ್ಯಾಚ್

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ. ಇದರಿಂದಾಗಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ತಂದೆ-ಮಗ ಎದುರಾಳಿ ತಂಡಗಳಲ್ಲಿ ಮುಖಾಮುಖಿಯಾಗಲಿದ್ದು, ಮೇ 04 ರಂದು ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
Read Full Story

02:48 PM (IST) Apr 01

ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ - ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು

newborn baby found in train toilet : ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಪ್ರಯಾಣಿಕರೊಬ್ಬರು ಮಗುವನ್ನು ಕಂಡು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

Read Full Story

02:23 PM (IST) Apr 01

'ಬೇಜಾರಾದಾಗ ಆಟ ನಿಲ್ಲಿಸ್ತೀನಿ' ; ಭಾರತ ತಂಡದಿಂದ ಹೊರಗಿಟ್ಟ ಅಜಿತ್ ಅಗರ್ಕರ್‌ಗೆ ಖಡಕ್ ತಿರುಗೇಟು ಕೊಟ್ಟ ಮೊಹಮ್ಮದ್ ಶಮಿ

ಟಿ20 ಮಾದರಿಯಿಂದ ತಮ್ಮನ್ನು ಹೊರಗಿಟ್ಟಿರುವುದಕ್ಕೆ ವೇಗಿ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳ ಐಪಿಎಲ್ ಅಂಕಿಅಂಶಗಳನ್ನು ಉಲ್ಲೇಖಿಸಿ, ತಾನು ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ತನ್ನನ್ನು ಟಿ20 ಬೌಲರ್ ಅಲ್ಲ ಎಂದು ಪರಿಗಣಿಸುವುದನ್ನು ಅವರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲವೆಂದು ಶಮಿ ಸ್ಪಷ್ಟಪಡಿಸಿದ್ದಾರೆ.

Read Full Story

02:13 PM (IST) Apr 01

ನನ್ನ ಬಾಂಧವರೇ ಕೇಳಿಸಿಕೊಳ್ಳಿ, ಯಾರ ಬಗ್ಗೂ ಕೆಟ್ಟದ್ದಾಗಿ ಮಾತಾಡ್ಬೇಡಿ - ಅರೆಸ್ಟ್​ ಬಳಿಕ ಮೌಲ್ವಿಯಿಂದ ಸಂದೇಶ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಹಾರ ಮೂಲದ ಮೌಲ್ವಿ ಅಬ್ದುಲ್ ಸಲೀಂ ಚತುರ್ವೇದಿಯನ್ನು ಯುಪಿ ಎಸ್‌ಟಿಎಫ್ ಬಂಧಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೂ, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read Full Story

01:44 PM (IST) Apr 01

ಉಗ್ರ ತಾಹಿರ್​ನನ್ನು ಮೇಲಕ್ಕೆ ಕಳಿಸಿದ್ದು ಈ ಮಹಿಳೆನಾ? ಸಾವಿನ ಹಿಂದಿದೆ 'ಮುಸುಕುಧಾರಿಣಿ' ರಹಸ್ಯ

ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ನಮಾಜ್ ಮುಗಿಸಿ ಬರುವಾಗ ಮುಸುಕುಧಾರಿಣಿಯೊಬ್ಬಳು ವಿಷದ ಪಿನ್‌ನಿಂದ ಚುಚ್ಚಿದ ಪರಿಣಾಮ 45 ದಿನಗಳ ಕಾಲ ನರಳಿ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಯು ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಮುಸುಕುಧಾರಿಗಳು ಹತ್ಯೆಗೈಯುತ್ತಿರುವ ಸರಣಿಗೆ ಹೊಸ ಸೇರ್ಪಡೆಯಾಗಿದೆ.
Read Full Story

01:28 PM (IST) Apr 01

Breaking & Shoking.. ಮಲಯಾಳಂ ನಿರ್ದೇಶಕ ರಂಜಿತ್‌ ಬಂಧನ; ಅರೆಸ್ಟ್‌ ಆಗಿದ್ದು ಎಲ್ಲಿ, ಹೇಗೆ?

2024ರಲ್ಲಿ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರ ಅವರು ರಂಜಿತ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಆ ವಿವಾದದ ಬೆನ್ನಲ್ಲೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಂದು ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಈಗ ಮತ್ತೆ ಬಂಧನವಾಗಿದೆ, ಏಕೆ?

Read Full Story

01:27 PM (IST) Apr 01

ಡೆಲ್ಲಿ ಕ್ಯಾಪಿಟಲ್ಸ್‌ಗಿಂದು ಲಖನೌ ಸೂಪರ್ ಜೈಂಟ್ಸ್ ಸವಾಲು! ಮೊದಲ ಪಂದ್ಯದಲ್ಲೇ ಮಿಂಚ್ತಾರಾ ರಾಹುಲ್?

ಐಪಿಎಲ್‌ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕೆ.ಎಲ್. ರಾಹುಲ್ ಇರುವ ಡೆಲ್ಲಿ ಹಾಗೂ ರಿಷಭ್ ಪಂತ್ ನಾಯಕತ್ವದ ಲಖನೌ ತಂಡಗಳು, ಕಳೆದ ಸೀಸನ್‌ನಲ್ಲಿ ಪ್ಲೇ-ಆಫ್‌ ತಲುಪದ ಕಾರಣ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿವೆ.
Read Full Story

12:47 PM (IST) Apr 01

ಪಂಜಾಬ್ ಕಿಂಗ್ಸ್ ರೋಚಕ ಗೆಲುವಿನ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್‌ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ!

ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಜಯ ಸಾಧಿಸಿತು. ಆದರೆ, ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಋತುವಿನಲ್ಲಿ ಇದು ಅವರ ಮೊದಲ ತಪ್ಪಾಗಿದೆ.
Read Full Story

12:44 PM (IST) Apr 01

ಜೇಬಿನಿಂದ ಮೆಲ್ಲನೆ ನೀಲಮಣಿ ತೆಗೆದು ಧರಿಸಿದ Salman Khan - ಇದಕ್ಕಿದೆ ಮಕರ-ಕುಂಭದ ರೋಚಕ ನಂಟು

ನಟ ಸಲ್ಮಾನ್ ಖಾನ್ ವೇದಿಕೆಯೊಂದರಲ್ಲಿ ನೀಲಮಣಿ ಧರಿಸುವ ವಿಡಿಯೋ ವೈರಲ್ ಆಗಿದೆ. ಜ್ಯೋತಿಷ್ಯದ ಪ್ರಕಾರ, ಶನಿ ಗ್ರಹದೊಂದಿಗೆ ಸಂಬಂಧ ಹೊಂದಿರುವ ಈ ಹರಳನ್ನು, ಮಕರ ಮತ್ತು ಕುಂಭ ರಾಶಿಯವರಾದ ಸಲ್ಲು, ಸಾಡೇಸಾಥಿಯ ಪ್ರಭಾವವನ್ನು ಕಡಿಮೆ ಮಾಡಲು ಧರಿಸುತ್ತಾರೆ ಎಂದು ನಂಬಲಾಗಿದೆ.
Read Full Story

12:27 PM (IST) Apr 01

ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ - ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಏಪ್ರಿಲ್ 1 ರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹಲವು ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ದರ ಏರಿಕೆಯು ಕಾರು, ಬಸ್, ಮತ್ತು ಲಘು ವಾಣಿಜ್ಯ ವಾಹನಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಯಾಣಿಕರ ಜೇಬಿಗೆ ಹೊರೆಯಾಗಲಿದೆ.

Read Full Story

12:16 PM (IST) Apr 01

ಇಲ್ಲಿಯ ಚಟ್ನಿ ಸವಿಯಲು ಕ್ಯೂ ನಿಲ್ತಾರೆ ಆಹಾರ ಪ್ರಿಯರು; 50 ವರ್ಷ ಹಳೆಯ ಲಿಂಗಯ್ಯ ಟಿಫಿನ್ ಸೆಂಟರ್

ಅಪರೂಪದ, 50 ವರ್ಷದ ಹಳೆಯ ಟಿಫಿನ್ ಸೆಂಟರ್‌ಗಳಲ್ಲಿ ಮಲ್ಲೇಪಲ್ಲಿಯಲ್ಲಿರುವ ‘ಲಿಂಗಯ್ಯ ಟಿಫಿನ್ ಸೆಂಟರ್ ನಲ್ಲಿ  ಇಡ್ಲಿ ಮತ್ತು ವಡೆ ಜೊತೆ ನೀಡಲಾಗುವ ಚಟ್ನಿಗಾಗಿ ಜನರು ಬೆಳಗ್ಗೆಯೇ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

Read Full Story

12:06 PM (IST) Apr 01

ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ' - ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 2012ರ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ MTR ಮ್ಯೂಸಿಕ್ ಸಂಸ್ಥೆಯ ಹಾಡನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅಸಲಿ ವಿಷ್ಯ ಇಲ್ಲಿದೆ!

Read Full Story

11:19 AM (IST) Apr 01

50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಮಾನವ; ನಾಲ್ವರನ್ನ ಹೊತ್ತ ಆರ್ಟೆಮಿಸ್‌ ನಾಳೆ ನಭಕ್ಕೆ

5 ದಶಕಗಳ ಬಳಿಕ, ನಾಸಾದ 'ಆರ್ಟೆಮಿಸ್‌ 2' ಯೋಜನೆಯಡಿ ನಾಲ್ವರು ಗಗನಯಾನಿಗಳು ಓರಯಾನ್‌ ನೌಕೆಯಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಈ 10 ದಿನಗಳ ಯಾನದಲ್ಲಿ ಚಂದ್ರನನ್ನು ಸುತ್ತು ಹಾಕಿ ಬರಲಿದ್ದು, ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ನಿಟ್ಟಿನಲ್ಲಿ ಓರಿಯನ್‌ ನೌಕೆಯ ಪರೀಕ್ಷೆ.

Read Full Story

10:50 AM (IST) Apr 01

ಮೇಘಾಲಯ ಹನಿಮೂನ್ ಕೊಲೆ ಕೇಸ್ - ಕಾಮಕ್ಯ ದೇಗುಲದ ಪುರೋಹಿತರ ಮಾತು ನಿಜವಾಯ್ತು - ರಾಜ ರಘುವಂಶಿ ಮನೆಗೆ ಹೊಸ ಸದಸ್ಯ

ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಸಾವಿಗೀಡಾದ ರಾಜ ರಘುವಂಶಿ ಕುಟುಂಬದಲ್ಲಿ ಇದೀಗ ಸಂತಸ ಮನೆಮಾಡಿದೆ. ರಾಜನ ಅಣ್ಣನಿಗೆ ಗಂಡು ಮಗು ಜನಿಸಿದ್ದು, ಆತನೇ ಮರುಹುಟ್ಟು ಪಡೆದು ಬಂದಿದ್ದಾನೆ ಎಂದು ಕುಟುಂಬಸ್ಥರು ನಂಬಿದ್ದಾರೆ. ದುರಂತ ನಡೆದ ಮನೆಯಲ್ಲಿ ಈಗ ಸಂಭ್ರಮ ಮನೆಮಾಡಿದೆ.

Read Full Story

09:53 AM (IST) Apr 01

ಇಂದಿನಿಂದ ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ - ಇರಾನ್ ಎಚ್ಚರಿಕೆ

ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ, ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್‌ನ ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ ನಡೆಸಿದೆ.

Read Full Story

More Trending News