
ಹೈದರಾಬಾದ್(ಮೇ.30): ಕೊರೋನಾ ವೈರಸ್ ನಡವೆ ಇದೀಗ ಭಾರತಕ್ಕೆ ಫಂಗಸ್ ಚಿಕಿತ್ಸೆ ಸವಾಲಾಗಿ ಪರಿಣಿಸಿದೆ. ಬ್ಲಾಕ್ ಫಂಗಸ್, ವೈಟ್ ಹಾಗೂ ಯಲ್ಲೋ ಫಂಗಸ್ ಸೋಂಕಿತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬ್ಲಾಕ್ ಫಂಗಸ್ ಚಿಕಿತ್ಸೆ ಲಸಿಕೆ ಒದಗಿಸುವದೇ ಕೇಂದ್ರಕ್ಕೆ ತಲೆನೋವಾಗಿದೆ. ಇದರ ನಡುವೆ ಐಐಟಿ ಹೈದರಾಬಾದ್ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಆ್ಯಂಫೊಟೆರಿಸಿನ್ B ಮಾತ್ರೆ ಅಭಿವೃದ್ಧಿ ಪಡಿಸಿದೆ.
ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್ ಪತ್ತೆ!.
ಇದೀಗ ಐಐಟಿ ಹೈದರಾಬಾದ್ ಈ ಔಷಧಿಯನ್ನು ಉತ್ಪಾದನೆ ಮಾಡಬಲ್ಲ ಫಾರ್ಮಾ ಕಂಪನಿಯನ್ನು ಹುಡುಕುತ್ತಿದೆ. ಈ ಮೂಲಕ ಭಾರತಕ್ಕೆ ಸವಾಲಾಗಿರುವ ಬ್ಲಾಕ್ ಫಂಗಸ್‌ಗೆ ಸುಲಭ ರೀತಿಯಲ್ಲಿ ಚಿಕಿತ್ಸೆ ನೀಡಲು ಬಹುದೊಡ್ಡ ಯೋಜನೆ ರೂಪಿಸಿದೆ.
2019ರ ಬ್ಯಾಚ್ ಕೆಮಿಕಲ್ ಎಂಜಿನೀಯರಿಂಗ್ ವಿಭಾಗದ ಸಂಶೋಧಕರಾದ ಸಪ್ತರ್ಶಿ ಮುಜುಂದಾರ್ ಹಾಗೂ ಚಂದ್ರಶೇಖರ್ ಶರ್ಮಾ ನಡೆಸಿದ ಸತತ ಅಧ್ಯಯನದ ಫಲ ಇದಾಗಿದೆ. ನ್ಯಾನೊಮೆಟಿರಿಯಲ್ಸ್ (ಕಾರ್ಬನ್) ಲ್ಯಾಬ್ ಜೆಲಾಟಿನ್ ನ್ಯಾನೊ ಫೈಬರ್‌ಗಳನ್ನು ಬಳಸಿಕೊಂಡು ಆಂಫೊಟೆರಿಸಿನ್ ಬಿ ಟ್ಯಾಬ್ಲೆಟ್ ಅಭಿವೃದ್ಧಿ ಪಡಿಸಲಾಗಿದೆ.
ಬ್ಲ್ಯಾಕ್ ಫಂಗಸ್ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ!.
ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ಸೇರಿದಂತೆ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿರುವ ವಿಶ್ವದಾದ್ಯಂತದ ಸಾವಿರಾರು ರೋಗಿಗಳಿಗೆ ಆಂಫೊಟೆರಿಸಿನ್ ಬಿ ಜೀವನಾಡಿಯಾಗಿದೆ ಎಂದು ಐಐಟಿ ಹೈದರಾಬಾದ್ ಹೇಳಿದೆ.
ಜ್ವರ, ಪಿತ್ತಜನಕಾಂಗ ಸಮಸ್ಯೆ, ತೂಕ ಕಡಿಮೆಯಾಗುವಿಕೆ, ಕೈ ಮತ್ತು ಕಾಲುಗಳ ಮೇಲೆ ಚರ್ಮದ ಬಣ್ಣ ಬದಲಾಗುವಿಕೆ , ರಕ್ತಹೀನತೆ ಸೇರಿದಂತೆ ಕೆಲವು ರೋಗಗಳಿಗೆ ಪರಿಣಾಮಕಾರಿಯಾದ ಔಷಧ ಪತ್ತೆಗೆ 2019ರಿಂದ ಸತತ ಪ್ರಯತ್ನ ನಡೆಯುತ್ತಿತ್ತು. ಶೀಲಿಂದ್ರಗಳ ಸಮಸ್ಯೆ ನಿವಾರಣೆಗೆ ನಡೆಸಿದ ಈ ಪ್ರಯತ್ನ ಇದೀಗ ಸಂಕಷ್ಟದ ಸಮಯದಲ್ಲೇ ನೆರವಾಗಿದೆ.
ಬ್ಲ್ಯಾಕ್ ಫಂಗಸ್ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಸರ್ಕಾರದ ಈ ನಿರ್ಧಾರ!
ಆಂಫೊಟೆರಿಸಿನ್-ಬಿ ಅನ್ನು ಪ್ರಸ್ತುತ ಕೆಲವು ಔಷಧೀಯ ಕಂಪನಿಗಳು ಚುಚ್ಚುಮದ್ದಿನ ರೂಪದಲ್ಲಿ ತಯಾರಿಸುತ್ತಿವೆ. ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಈ ಇಂಜೆಕ್ಷನ್ ಬಳಕೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. 50 ಮಿ.ಗ್ರಾಂ ಬಾಟಲಿಯ ಬೆಲೆ 4,000 ರೂ.ಗೆ ಹತ್ತಿರ, ಮತ್ತು 60-100 ಬಾಟಲುಗಳು ಒಂದು ರೋಗಿಗೆ ಅಗತ್ಯವಿದೆ.
ಆಂಫೊಟೆರಿಸಿನ್ ಬಿ ಮಾತ್ರೆಗಳು ಚುಚ್ಚುಮದ್ದಿಗಿಂತ ಕಡಿಮೆ ವೆಚ್ಚವಾಗಿದೆ. 60 ಮಿ.ಗ್ರಾಂ ಡೋಸ್‌ನ ಟ್ಯಾಬ್ಲೆಟ್‌ಗೆ ಸುಮಾರು 200 ರೂ. ವೆಚ್ಚವಾಗುತ್ತದೆ ಎಂದು ಐಐಟಿ-ಹೈದರಾಬಾದ್‌ನ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರ ಶೇಖರ್ ಶರ್ಮಾ ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ