ಹೈದ್ರಾಬಾದ್ ಅತ್ಯಾಚಾರ ಪ್ರಕರಣ : ಆರೋಪಿ ಪತ್ನಿಗೆ ಹೆಣ್ಣು ಮಗು ಜನನ

By Kannadaprabha NewsFirst Published Mar 7, 2020, 1:34 PM IST
Highlights

ಹೈದ್ರಾಬಾದ್ ಅತ್ಯಾಚಾರ ಪ್ರಕರಣ ಆರೋಪಿಯಾಗಿದ್ದ ಚೆನ್ನಕೇಶವುಲು ಪತ್ನಿಗೆ ಹೆಣ್ಣು ಮಗು ಜನಿಸಿದೆ. ಬಾಲಿವುಡ್ ನಿರ್ಮಾಪ ಆರ್‌ಜಿವಿ ನೆರವು ಕೋರಿದ್ದಾರೆ. 

ತೆಲಂಗಾಣ [ಮಾ.07]: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಎನ್ ಕೌಂಟರ್ ಆಗಿದ್ದ ಓರ್ವನ ಪತ್ನಿಗೆ ಈಗ ಹೆಣ್ಣು ಮಗು ಜನಿಸಿದೆ. 

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅತ್ಯಾಚಾರ, ಕೊಲೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದರು. 

ಈ ವೇಳೆ 6 ತಿಂಗಳ ಗರ್ಭಿಣಿಯಾಗಿದ್ದ ಆರೋಪಿ ಚೆನ್ನಕೇಶವುಲು ಎಂಬಾತನ 14 ವರ್ಷದ ಪ್ರಾಪ್ತ ಪತ್ನಿ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ.

ಹೈದ್ರಾಬಾದ್‌ ಕೀಚಕರಿಂದ ರಾಜ್ಯದಲ್ಲೂ 6 ರೇಪ್‌...

ಡಿಸೆಂಬರ್  6 ರಂದು ಎನ್ಕೌಂಟರ್ ನಡೆದಿದ್ದು,  ಈ ವೇಳೆ ಹತನಾದ ಚೆನ್ನಕೇಶವುಲು ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!...

ತಾಯಿ ಮಗು ಆರೋಗ್ಯವಾಗಿದ್ದು, ಈ ಸಂಬಂಧ ಬಾಲಿವುಡ್ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿ ಸಹಾಯ ಕೋರಿದ್ದಾರೆ. 

ಚೆನ್ನಕೇಶವುಲು ಪತ್ನಿ ಮಗು ಆರೋಗ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಧನಸಹಾಯ ಮಾಡುವವರು ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್ ಶೇರ್ ಮಾಡಿದ್ದಾರೆ. 

 

Chenna Keshavlu wife Renuka gave birth to baby girl and both are fine .What won’t be fine is their future becos of rapists ugly shadow ..Please donate whatever u can for them Account: Action Aid for societal Advancement AASA,
918010050607980
AXIS BANK
IFSC code: UTIB0001454 pic.twitter.com/FzsLsRGHwd

— Ram Gopal Varma (@RGVzoomin)
click me!