ನಾನ್ಹೇಗೆ ಪೌರತ್ವ ಸಾಬೀತುಪಡಿಸಲಿ: ದಿಯಾ ಮಿರ್ಜಾ ಅಳಲು ಕೇಳಿಸಲಿ!

By Suvarna NewsFirst Published Dec 18, 2019, 6:57 PM IST
Highlights

ಪೌರತ್ವ ತಿದ್ದುಪಡಿ ಮಸೂದೆ ಜಾರಿ ಹಿನ್ನೆಲೆ| ದೇಶಾದ್ಯಂತ ಶೀಘ್ರವೇ NRC ಜಾರಿ ಸಾಧ್ಯತೆ| ಬಾಲಿವುಡ್ ನಟಿ ದಿಯಾ ಮಿರ್ಜಾ ಟ್ವಿಟ್| 'ನಾನು ಭಾರತೀಯಳೆಂದು ಸಾಬೀತುಪಡಿಸಲು ಧರ್ಮ ಎಂದೂ ಪರಿಗಣನೆಗೆ ಬಂದಿಲ್ಲ'| 'ನನ್ನ ಎಲ್ಲ ದಾಖಲಾತಿಗಳಲ್ಲಿ ಧರ್ಮದ ಕಾಲಂನ್ನು ಖಾಲಿ ಬಿಡಲಾಗಿದೆ'| ಭಾರತೀಯತೆಯ ಸಾಬೀತಿಗೆ ಧರ್ಮ ಪರಿಗಣನೆಯಾಗಬಾರದು ಎಂದ ದಿಯಾ ಮಿರ್ಜಾ|

ನವದೆಹಲಿ(ಡಿ.18): ಪೌರತ್ವ ತಿದ್ದುಪಡಿ ಕಾಯ್ದೆ ಬೆನ್ನಲ್ಲೇ, ದೇಶಾದ್ಯಂತ NRC ಜಾರಿಯಾಗುವ ನಿರೀಕ್ಷೆ ಇದ್ದು, ಬಾಲಿವುಡ್ ನಟಿ ದಿಯಾ ಮಿರ್ಜಾ ಈ ಕುರಿತು ತಮ್ಮ ಅಭಿಪ್ರಾಯ ಹೊರಗೆಡವಿದ್ದಾರೆ.

CAA ಜಾರಿಗೆ ಭಾರತೀಯ ಮುಸ್ಲಿಮರು ಹೆದರಬೇಕಿಲ್ಲ: ಅಹ್ಮದ್ ಬುಖಾರಿ!

ನನ್ನ ತಾಯಿ ಹಿಂದುವಾಗಿದ್ದು ನನ್ನ ಹೆತ್ತ ತಂದೆ ಕ್ರಿಶ್ಚಿಯನ್. ನನ್ನ ಸಾಕು ತಂದೆ ಓರ್ವ ಮುಸ್ಲಿಂ ಆಗಿದ್ದು, ನನ್ನ ಎಲ್ಲ ದಾಖಲಾತಿಗಳಲ್ಲಿ ಧರ್ಮದ ಕಾಲಂನ್ನು ಖಾಲಿ ಬಿಡಲಾಗಿದೆ ಎಂದು ದಿಯಾ ಮಿರ್ಜಾ ಹೇಳಿದ್ದಾರೆ.

My mother is a Hindu, my biological father was a Christian, my adopted father - a Muslim. In all official documents, my religion status stays blank. Does religion determine I am an Indian? It never did and I hope it never does.

— Dia Mirza (@deespeak)

ನಾನು ಭಾರತೀಯಳೆಂದು ಸಾಬೀತುಪಡಿಸಲು ಧರ್ಮ ಎಂದೂ ಪರಿಗಣನೆಗೆ ಬಂದಿಲ್ಲ. ಮುಂದೆಯೂ ಬರದಿರಲಿ ಎಂಬುದು ನನ್ನ ಆಶಯ ಎಂದು ದಿಯಾ ಮಿರ್ಜಾ ಟ್ವಿಟ್ ಮಾಡಿದ್ದಾರೆ.

‘ಕೈ’ಗೆ ಮೋದಿ ಸವಾಲ್‌!: ಎರಡು ಪಂಥಾಹ್ವಾನ ನೀಡಿದ ಪ್ರಧಾನಿ!

ಬಾಲಿವುಡ್ ನಟಿಯಾಗಿರುವ ದಿಯಾ ಮಿರ್ಜಾ, ರೆಹನಾ ಹೈ ತೇರೆ ದಿಲ್ ಮೈ' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು, 2000ರಲ್ಲಿ ಮಿಸ್ ಏಶಿಯಾ ಪೆಸಿಫಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

11 ವರ್ಷಗಳ ನಂತರ ಮುರಿದು ಬಿತ್ತು ದಿಯಾ ಮಿರ್ಜಾ ದಾಂಪತ್ಯ

ಬಾಲಿವುಡ್ ನಟಿಯಾಗಿರುವ ದಿಯಾ ಮಿರ್ಜಾ, ರೆಹನಾ ಹೈ ತೇರೆ ದಿಲ್ ಮೈ' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು, 2000ರಲ್ಲಿ ಮಿಸ್ ಏಶಿಯಾ ಪೆಸಿಫಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

For those who lead an honest life the truth is never inconvenient.

— Dia Mirza (@deespeak)

ಇಷ್ಟೇ ಅಲ್ಲದೇ ಹಲವು ಸಾಮಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ದಿಯಾ ಮಿರ್ಜಾ, ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಅಷ್ಟೇನೂ ಚಟುವಟಿಕೆಯಿಂದಿಲ್ಲ.

click me!