ಸಾಲು ಸಾಲು ಹಬ್ಬಕ್ಕೆ ಕೇಂದ್ರದಿಂದ ಬಂಪರ್ ಕೊಡುಗೆ; ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ!

By Suvarna NewsFirst Published Sep 11, 2021, 7:21 PM IST
Highlights
  • ಖಾದ್ಯ ತೈಲ ಬೆಲೆ ಇಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ
  • ಪಾಮ್, ಸೋಯಾಬೀನ್ , ಸೂರ್ಯಕಾಂತಿ ಎಣ್ಣೆ ಮೇಲಿನ ದರ ಕಡಿತ
  • ಆಮದು ಸುಂಕ ಕಡಿತದಿಂದ ಅಗ್ಗದಲ್ಲಿ ಸಿಗಲಿದೆ ಅಡುಗೆ ಎಣ್ಣೆ

ನವದೆಹಲಿ(ಸೆ.11):  ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನತೆಗೆ ಕೇಂದ್ರ ಸರ್ಕಾರ ಕೊಂಚ ನೆಮ್ಮದಿ ನೀಡಿದೆ. ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬ ಜನರಿಗೆ ದುಬಾರಿಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಇದೀಗ ಖಾದ್ಯ ಎಣ್ಣೆ ಮೇಲಿನ ಪ್ರಮಾಣಿತ ದರ ಕಡಿಮೆ ಮಾಡಿದೆ. ಇದರಿಂದ ಪಾಮ್, ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಬೆಲೆ ಕಡಿಮೆಯಾಗಲಿದೆ.

ಖಾದ್ಯ ತೈಲ ದರ ಇಳಿಸಲು 11,040 ಕೋಟಿ ಹೂಡಿಕೆ!

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಖಾದ್ಯ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡಾ 30.25 ರಿಂದ ಶೇಕಡಾ 24.75ಕ್ಕೆ ಅಂದರೆ ಶೇಕಡಾ 5.5ರಷ್ಟು ಇಳಿಕೆ ಮಾಡಲಾಗಿದೆ.

ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ 7.5  ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಶೇಕಡಾ 37.5% ಕ್ಕೆ ಇಳಿಸಿದೆ. ಭಾರತ ಸರ್ಕಾರದ ಅಧಿಸೂಚನೆಯಲ್ಲಿನ ತಿದ್ದುಪಡಿಗಳ ಮೂಲಕ ಮಾಡಲಾಗಿದೆ.

ಪಕ್ಕಾ ದುಷ್ಮನಿ: ಮೋದಿ ಬಿಟ್ಟ ‘ಎಣ್ಣೆ’ಗಾಗಿ ನಾನಿದ್ದೇನೆ ಎಂದ ಪಾಕ್ ಪ್ರಧಾನಿ!

ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಪ್ರಮಾಣಿತ ದರವನ್ನು ಶೇಕಡಾ 2.5 ರಷ್ಟು ಕಡಿಮೆ ಮಾಡಿದೆ. ಇನ್ನು ಸಂಸ್ಕರಿಸಿದ ಪಾಮ್ ಎಣ್ಣೆಗಳು, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಪ್ರಮಾಣಿತ ದರವನ್ನು ಶೇಕಡಾ 32.5 ರಷ್ಟು ಕಡಿಮೆ ಮಾಡಿದೆ. ಕಚ್ಚಾ ಪಾಮ್ ಎಣ್ಣೆಯ ಪ್ರಮಾಣಿತ ದರವನ್ನು ಶೇಕಡಾ 10% ಕ್ಕೆ ಇಳಿಸಲಾಗಿದೆ.  ಕಚ್ಚಾ ಪಾಮ್ ಎಣ್ಣೆಯ ಕೃಷಿ ಸೆಸ್ ಅನ್ನು 17.5% ರಿಂದ 20% ಕ್ಕೆ ಹೆಚ್ಚಿಸಲಾಗಿದೆ. 

2021-22ರ ಅವಧಿಯಲ್ಲಿ ಅಂತರರಾಷ್ಟ್ರೀಯ ಖಾದ್ಯ ತೈಲಗಳ  ಬೆಲೆಗಳು ಗಗನಕ್ಕೇರಿದ್ದು, ಆ ಮೂಲಕ ಖಾದ್ಯ ತೈಲಗಳ ದೇಶೀಯ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಿದ್ದು ಗಮನಾರ್ಹ. ಇದು ಹಣದುಬ್ಬರ ಮತ್ತು ಗ್ರಾಹಕರ ದೃಷ್ಟಿಕೋನದಿಂದ ಗಂಭೀರ ಕಳವಳಕ್ಕೆ ಕಾರಣವಾಯಿತು. ಖಾದ್ಯ ತೈಲಗಳ ಮೇಲಿನ ಆಮದು ಸುಂಕವು ಖಾದ್ಯ ತೈಲಗಳ ವೆಚ್ಚದ ಮೇಲೆ ಮತ್ತು ಆ ಮೂಲಕ ಮೂಲಕ ದೇಶೀಯ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

 

ಈ ಬೆಲೆಗಳ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ, ಭಾರತ ಸರಕಾರವು ಫೆಬ್ರವರಿ 2021 ಮತ್ತು ಆಗಸ್ಟ್ 2021ರ ನಡುವೆ ಸರಣಿ ಕ್ರಮಗಳನ್ನು ಕೈಗೊಂಡಿತ್ತು. ಅವುಗಳಲ್ಲಿ ಈ ಕೆಲವು ಸೇರಿವೆ:

1. ಆಮದು ಸುಂಕದ ಪುನರ್‌ವ್ಯವಸ್ಥೆ (ಸುಧಾರಣೆ)

• ಸರ್ಕಾರವು  ದಿನಾಂಕ 29 ಜೂನ್, 2021ರ ಅಧಿಸೂಚನೆ ಸಂಖ್ಯೆ 34/2021 (ಕಸ್ಟಮ್ಸ್) ಮೂಲಕ ಕಚ್ಚಾ ತಾಳೆ ಎಣ್ಣೆಯ ಮೇಲಿನ  ಸುಂಕವನ್ನು 30.06.2021ರಿಂದ 10%ಗೆ ಇಳಿಸಿದೆ . ಇದು 30 ಸೆಪ್ಟೆಂಬರ್, 2021ರವರೆಗೆ ಅನ್ವಯವಾಗಲಿದೆ.

2) ಸರಕಾರವು, 2021ರ ಜೂನ್ 30ರ  ʻಡಿಜಿಎಫ್‌ಟಿʼಯ ಅಧಿಸೂಚನೆ ಸಂಖ್ಯೆ 10/2015-2020 ಮೂಲಕ ಸಂಸ್ಕರಿತ ತಾಳೆ ಎಣ್ಣೆಯ ಆಮದು ನೀತಿಯನ್ನು ತಿದ್ದುಪಡಿ ಮಾಡಿತು. ತಕ್ಷಣದಿಂದ ಜಾರಿಗೆ  ಬರುವಂತೆ  ತಾಳೆ ಎಣ್ಣೆಯ ಆಮದನ್ನು "ನಿರ್ಬಂಧಿತ" ಸ್ಥಿತಿಯಿಂದ "ಮುಕ್ತ" ಸ್ಥಿತಿಗೆ ಬದಲಾಯಿಸಲಾಯಿತು. ಇದು 31.12.2021ರ ವರೆಗೆ ಜಾರಿಯಲ್ಲಿರಲಿದೆ.

ಇದಲ್ಲದೆ, ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಕೇರಳದ ಯಾವುದೇ ಬಂದರಿನ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

3) ಸರಕಾರವು ದಿನಾಂಕ 19 ಆಗಸ್ಟ್ 2021ರ ಅಧಿಸೂಚನೆ ಸಂಖ್ಯೆ 40/2021- (ಕಸ್ಟಮ್ಸ್) ಮೂಲಕ  ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ  ಸುಂಕವನ್ನು ಶೇ.7.5ಕ್ಕೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ

ಸುಂಕವನ್ನು20.08.2021ರಿಂದ ಜಾರಿಗೆ ಬರುವಂತೆ ಶೇ.37.5ಕ್ಕೆ ಇಳಿಸಿದೆ. ದಿನಾಂಕ ಜೂನ್ 29, 2021ರ  ಹಣಕಾಸು ಸಚಿವಾಲಯದ (ಕಂದಾಯ ಇಲಾಖೆ) ಅಧಿಸೂಚನೆಗೆ(ಸಂಖ್ಯೆ: 34/2021-ಕಸ್ಟಮ್ಸ್‌) ತಿದ್ದುಪಡಿ ಮೂಲಕ ಈ ಇಳಿಕೆ ಮಾಡಲಾಗಿದೆ.

4) ಅಬಕಾರಿ, ʻಎಫ್.ಎಸ್.ಎಸ್ʼ, ʻಎ.ಐ, ಪಿಪಿ&ಕ್ಯೂʼ, ʻಡಿ.ಎಫ್.ಪಿ.ಡಿʼ ಮತ್ತು ʻಡಿ.ಒ.ಸಿ.ಎʼಗಳಿಂದ ವಿವಿಧ ಬಂದರಿನಲ್ಲಿ ಹಲವು ಸೌಲಭ್ಯಗಳ ಒದಗಣೆ

5) ಕೋವಿಡ್-19  ಕಾರಣದಿಂದಾಗಿ  ಆಮದು ಮಾಡಿಕೊಂಡ ಖಾದ್ಯ ತೈಲಗಳ  ಸಾಗಣೆಯಲ್ಲಿಆಗಿರುವ ವಿಳಂಬವನ್ನು ಸರಿಪಡಿಸಿ, ಸರಬರಾಜು ತ್ವರಿತಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ), ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ʻಪ್ಲಾಂಟ್‌ ಕ್ವಾರಂಟೈನ್‌ʼ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಗ್ರಾಹಕ ವ್ಯವಹಾರಗಳು ಮತ್ತು ಅಬಕಾರಿ ಇಲಾಖೆಗಳು ಈ ಸಮಿತಿಯ ಭಾಗವಾಗಿವೆ. ಈ ಸಮಿತಿಯು ವಾರಕ್ಕೊಮ್ಮೆ ಆಮದು ಮಾಡಿದ ಖಾದ್ಯ ತೈಲಗಳ ಸರಕುಗಳನ್ನು ಪರಿಶೀಲಿಸಿ, ಕಾರ್ಯದರ್ಶಿ (ಆಹಾರ) ಅಧ್ಯಕ್ಷತೆಯ ʻಕೃಷಿ ಸರಕುಗಳ ಅಂತರ ಸಚಿವಾಲಯ ಸಮಿತಿʼಗೆ ವರದಿ ನೀಡುತ್ತದೆ.

 

click me!