ನಿಜ್ಜರ್ ಹಂತಕರು ಶೀಘ್ರದಲ್ಲೇ ಕೆನಡಾದಲ್ಲಿ ಬಂಧನ ಸಾಧ್ಯತೆ

By Kannadaprabha NewsFirst Published Dec 29, 2023, 8:57 AM IST
Highlights

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದ್ದ ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಕೆನಡಾ ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಒಟ್ಟಾವ: ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದ್ದ ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಕೆನಡಾ ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಕೊಲೆ ಆರೋಪಿಗಳು ಕೆನಡಾ ಪೊಲೀಸರ ಸರ್ವೇಕ್ಷಣೆಯಲ್ಲಿ ಇದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಅವರ ಬಂಧನವಾಗಲಿದೆ. ನಿಜ್ಜರ್‌ ಹತ್ಯೆ ಬಳಿಕವೂ ಈ ಇಬ್ಬರು ಆರೋಪಿಗಳು ಕೆನಡಾದಿಂದ ಹೊರಗೆ ಹೋಗಿಲ್ಲ. ನಿರಂತರವಾಗಿ ಅವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ಮೂರು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಕೆನಡಾದ ‘ದ ಗ್ಲೋಬ್‌ ಅಂಡ್‌ ಮೇಲ್‌’ ಪತ್ರಿಕೆ ವರದಿಯನ್ನು ಪ್ರಕಟಿಸಿದೆ.

Latest Videos

ಅಮೆರಿಕಾದಲ್ಲೂ ಖಲಿಸ್ತಾನಿಗಳ ಉದ್ಧಟತನ: ಹಿಂದೂ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚು ಬರಹ

ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಹಾಗೂ ಅವರಿಗೆ ಭಾರತದ ಜತೆ ಇರುವ ನಂಟನ್ನು ಆರೋಪಪಟ್ಟಿಯಲ್ಲಿ ಪೊಲೀಸರು ಬಹಿರಂಗಪಡಿಸಲಿದ್ದಾರೆ ಎಂದು ವರದಿ ವಿವರಿಸಿದೆ.

ಬ್ರಿಟಿಷ್‌ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ ಜೂ.18ರಂದು ನಿಜ್ಜರ್‌ ಹತ್ಯೆಯಾಗಿತ್ತು. 2020ರಲ್ಲಿ ಈತನನ್ನು ಭಾರತ ಭಯೋತ್ಪಾದಕ ಎಂದು ಘೋಷಿಸಿತ್ತು. ಹತ್ಯೆ ಹಿಂದೆ ಭಾರತದ ಸಂಭಾವ್ಯ ಪಾತ್ರವಿದೆ ಎಂದು ಸೆಪ್ಟೆಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟೀನ್‌ ಟ್ರುಡೋ ಆರೋಪಿಸಿದ್ದರು. ಇದೊಂದು ಅಸಂಬದ್ಧ ಹಾಗೂ ಪ್ರೇರಿತ ಆರೋಪ ಎಂದು ಭಾರತ ತಿರಸ್ಕರಿಸಿತ್ತು. ಈ ಕೊಲೆ ಪ್ರಕರಣ ಎರಡೂ ದೇಶಗಳ ನಡುವೆ ಸಂಘರ್ಷ ಸೃಷ್ಟಿಸಿತ್ತು.

ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್‌ ಫ್ರಂಟ್‌ ಘೋಷಣೆ

click me!