ಮದ್ರಸಾ ಶಿಕ್ಷಣದಲ್ಲಿ ಸಂಸ್ಕೃತ ಕಡ್ಡಾಯಕ್ಕೆ ಚಿಂತನೆ

By Kannadaprabha News  |  First Published Oct 18, 2024, 8:40 AM IST

ಉತ್ತರಾಖಂಡದ ಮದರಸಾ ಮಂಡಳಿಯು, ರಾಜ್ಯದಲ್ಲಿರುವ ಸುಮಾರು 400 ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಂಸ್ಕೃತ ಶಿಕ್ಷಣವನ್ನು ಕಲಿಸಲು ಮುಂದಾಗಿದೆ.


ಡೆಹ್ರಾಡೂನ್: ಉತ್ತರಾಖಂಡದ ಮದರಸಾ ಮಂಡಳಿಯು, ರಾಜ್ಯದಲ್ಲಿರುವ ಸುಮಾರು 400 ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಂಸ್ಕೃತ ಶಿಕ್ಷಣವನ್ನು ಕಲಿಸಲು ಮುಂದಾಗಿದೆ. ಈ ಯೋಜನೆಗೆ ರಾಜ್ಯ ಸಂಸ್ಕೃತ ಇಲಾಖೆಯೊಂದಿಗೆ ತಿಳಿವಳಿಗೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಯನ್ನಿಟ್ಟಿದೆ. 

'ನಾವು ಕೆಲವು ಸಮಯದಿಂದ ಈ ಯೋಜನೆ ಜಾರಿಗೆ ಯೋಚಿಸುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ನಮಗೆ ಅನುಮೋದನೆ ದೊರೆತರೆ ನಾವು ಅದನ್ನು ಕಾರ್ಯಗತಗೊಳಿಸುತ್ತೇವೆ. ಅರೇಬಿಕ್, ಸಂಸ್ಕೃತ ಎರಡೂ ಪ್ರಾಚೀನ ಭಾಷೆ ಗಳು. ಮದರಸಾದಲ್ಲಿ ಅರೇಬಿಕ್ ಜೊತೆಗೆ ಸಂಸ್ಕೃತ ಕಲಿಯುವ ಆಯ್ಕೆ ನೀಡಿದರೆ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ' ಎಂದು ಉತ್ತರಾಖಂಡದ ಮದರಸಾ ಮಂಡಳಿ ಅಧ್ಯಕ್ಷ ಮುಪ್ತಿ ಶಾಮೂನ್ ಖಾಸ್ಮಿ ಹೇಳಿದ್ದಾರೆ.

Tap to resize

Latest Videos

ಸಂಸ್ಕೃತ ಕಲಿಯೋಕೆ ಇಸ್ರೇಲ್‌ನಿಂದ ಚಿಕ್ಕಮಗಳೂರಿಗೆ ಬಂದ ವಿದೇಶಿ ಟೀಮ್: ರಾಮಾಯಣದ ಈ ಶ್ಲೋಕಗಳನ್ನು ಕಲಿಯುತ್ತಿದ್ದಾರೆ!

ಮದರಸಾ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಸರಿಸಮಾನ ಮಾಡುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಉದ್ದೇಶದ ಅನ್ವಯ ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ ಎಂದು ಖಾಸ್ಮಿ ಹೇಳಿದ್ದಾರೆ. ಮೂಲಗಳ ಪ್ರಕಾರ ಸಂಸ್ಕೃತದ ಜೊತೆಗೆ ಕಂಪ್ಯೂಟರ್ ಶಿಕ್ಷಣವನ್ನು ಕೂಡ ಮದರಸಾಗಳಲ್ಲಿ ಕಲಿಸಲು ಚಿಂತನೆ ನಡೆದಿದೆ.

ಸ್ಕೋಡಾ ಹೊಸ ಕಾರ್‌ಗೆ ಸಂಸ್ಕೃತದ ಹೆಸರು ಸೂಚಿಸಿ SUV ಗಿಫ್ಟ್‌ ಪಡೆದ ಮದ್ರಸಾ ಶಿಕ್ಷಕ!

 

click me!