ಬಾಂಗ್ಲಾ ಅಕ್ರಮ ವಲಸಿಗರಿಂದಲೇ ಭಾರತದಲ್ಲಿ ಬಾಂಗ್ಲಾದೇಶದ ಸಂಸದನ ಕೊಲೆ: ಸಿಐಡಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

By Anusha Kb  |  First Published May 24, 2024, 10:16 AM IST

ಕೋಲ್ಕತ್ತಾ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾದ ಬಾಂಗ್ಲಾದೇಶದ ಸಂಸದನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಬಾಂಗ್ಲಾ ವಲಸಿಗರಿಂದಲೇ ಈ ಹತ್ಯೆ ನಡೆದಿದೆ ಎಂದು ಮೂಲವೊಂದು ವರದಿ ಮಾಡಿದೆ.


ಕೋಲ್ಕತ್ತಾ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾದ ಬಾಂಗ್ಲಾದೇಶದ ಸಂಸದನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಬಾಂಗ್ಲಾ ವಲಸಿಗರಿಂದಲೇ ಈ ಹತ್ಯೆ ನಡೆದಿದೆ ಎಂದು ಮೂಲವೊಂದು ವರದಿ ಮಾಡಿದೆ. ಚಿಕಿತ್ಸೆಗಾಗಿ ಮೇ 12 ರಂದು ಭಾರತಕ್ಕೆ ಬಂದಿದ್ದ  ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಜಿಮ್ ಅನರ್  ಅವರು ಮೇ 13ರ ನಂತರ ಯಾರ ಕಣ್ಣಿಗೂ ಕಾಣಲು ಸಿಗದೇ ನಾಪತ್ತೆಯಾಗಿದ್ದರು. ಇದಾಗಿ 9 ದಿನಗಳ ನಂತರ ಅವರ ಶವ  ಫ್ಲಾಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹೈ ಪ್ರೊಫೈಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮಬಂಗಾಳ ಸಿಐಡಿ ತನಿಖೆ ನಡೆಸುತ್ತಿದ್ದು, ಮಹತ್ವದ ಅಂಶವೊಂದನ್ನು ಬಯಲು ಮಾಡಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಿಹಾದ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ್ದು, ಈತ ಬಾಂಗ್ಲಾದೇಶದಿಂದ ಅಕ್ರಮ ವಲಸೆ ಬಂದು ಭಾರತದಲ್ಲಿ ವಾಸ ಮಾಡುತ್ತಿದ್ದು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದ. ಈತ ಈ ಬರ್ಬರವಾಗಿ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ಮಾಹಿತಿ  ನೀಡಿವೆ.  ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ  ಅನ್ವರುಲ್ ಅಜಿಮ್ ಅನರ್ ಅವರನ್ನು ಕತ್ತು ಹಿಸುಕಿ, ಚರ್ಮ ಸುಲಿದು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

Latest Videos

undefined

ನಾಪತ್ತೆಯಾದ ಬಾಂಗ್ಲಾದೇಶದ ಸಂಸದ ಕೋಲ್ಕತಾದಲ್ಲಿ ಶವವಾಗಿ ಪತ್ತೆ: ಕೊಲೆ ಎಂದ ಬಾಂಗ್ಲಾ ಗೃಹ ಸಚಿವ

ಸಿಐಡಿ ಮೂಲಗಳ ಪ್ರಕಾರ, ಅಕ್ರಮ ವಲಸಿಗನಾಗಿರುವ ಜಿಹಾದ್ ಹವಾಲ್ದಾರ್ ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಫ್ಲಾಟ್‌ನಲ್ಲಿ ಸಂಸದನ ಕೊಲೆ ಮಾಡಿ ದೇಹವನ್ನು ತುಂಡು ಮಾಡುವುದರಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಕೃತ್ಯವನ್ನು ಹೇಗೆ ನಿಖರವಾಗಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಯ್ತು ಎಂಬ ಬೆಚ್ಚಿ ಬೀಳಿಸು ವಿವರಗಳನ್ನು ಸಿಐಡಿ ತನಿಖೆ ಬಹಿರಂಗಪಡಿಸಿದೆ ಎಂದು ವರದಿ ಆಗಿದೆ. ಅಲ್ಲದೇ ಈ ಹೇಯ ಕೃತ್ಯದ ಮಾಸ್ಟರ್ ಮೈಂಡ್‌ ಬಾಂಗ್ಲಾದೇಶ ಮೂಲದ ಅಮೆರಿಕಾ ಪ್ರಜೆ ಅಖ್ತರುಝಾಮಾನ್ ಎಂದು ಈಗ ಸಿಕ್ಕಿಬಿದ್ದಿರುವ ಆರೋಪಿ ಜಿಹಾದ್ ಹವಾಲ್ದಾರ್ ಬಹಿರಂಗಪಡಿಸಿದ್ದಾರೆ. ಈತ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ನ್ಯೂಟೌನ್‌ ಅಪಾರ್ಟ್‌ಮೆಂಟ್‌ನಲ್ಲಿ ಸಂಸದ ಅನ್ವರುಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.

ಪಶ್ಚಿಮ ಬಂಗಾಳಕ್ಕೆ ನಾಡಿದ್ದು ರೆಮಲ್‌ ಚಂಡಮಾರುತ? 

ಮೇ 13 ರಂದು ನಾಪತ್ತೆಯಾಗಿದ್ದ ಸಂಸದ ಅನ್ವರುಲ್ ಮೇ 22 ರಂದು ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಬಾಂಗ್ಲಾದೇಶ ಪ್ರಜೆಗಳನ್ನೇ ಬಂಧಿಸಲಾಗಿತ್ತು. ಜೊತೆಗೆ ತನಿಖೆಗಿಳಿದ ಸಿಐಡಿ ಪೊಲೀಸರಿಗೆ ಕೋಲ್ಕತ್ತಾದ ನ್ಯೂ ಟೌನ್ ಫ್ಲಾಟ್‌ನಲ್ಲಿ ರಕ್ತದ ಕಲೆಗಳು ಹಾಗೂ ಹಲವು ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿದ್ದವು. ಬಹುಶಃ ದೇಹದ ಭಾಗಗಳನ್ನು ಎಸೆಯುವುದಕ್ಕೆ  ಪ್ಲಾಸ್ಟಿಕ್ ಚೀಲಗಳನ್ನು ಬಳಸಿದ ಶಂಕೆ ಮೂಡಿತ್ತು. ಸಾಂದರ್ಭಿಕ ಪುರಾವೆಗಳು ಸೂಚಿಸುವಂತೆ ಮೊದಲಿಗೆ ಸಂಸದನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ವರದಿಗಳ ಪ್ರಕಾರ ಬಾಂಗ್ಲಾದೇಶದ ಸಂಸದ ಅನ್ವರುಲ್  ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ಆಗಮಿಸಿದ ಎರಡೇ ದಿನಕ್ಕೆ ಅವರು ನಾಪತ್ತೆಯಾಗಿದ್ದರು.  ಇದಾದ ನಂತರ ಕೋಲ್ಕತ್ತಾ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು.  ಮೇ 13ರಂದು ಅವರು ಕೊನೆಯದಾಗಿ ಸ್ನೇಹಿತರ ಜೊತೆ ಬಿಧನ್‌ನಗರದ ಮನೆಯಲ್ಲಿ ಕಾಣಿಸಿಕೊಂಡಿದ್ದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಧನ್‌ನಗರದಲ್ಲಿ ವಾಸವಾಗಿರುವ  ಸಂಸದರ ಕುಟುಂಬ ಸ್ನೇಹಿತರೊಬ್ಬರು ಪ್ರತಿಕ್ರಿಯಿಸಿದ್ದು, ಸಂಸದ ಅನ್ವರುಲ್ ದೆಹಲಿಗೆ ಹೋಗುವುದಾಗಿ ಹೇಳಿದ್ದರು. ಆದರೆ ಮೇ 13ರಿಂದ ಅವರು ನೋಡುವುದಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಿದ್ದರು. ಅನ್ವರುಲ್ ಅವರು ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಶೇಕ್ ಹಸೀನಾ ಅವರ  ಬಾಂಗ್ಲಾದೇಶ್ ಅವಾಮಿ ಲೀಗ್‌ನ ಸದಸ್ಯರಾಗಿದ್ದರು.

click me!