ನವದೆಹಲಿ: 234 ಸಂಖ್ಯಾಬಲವಿರುವ ತಮಿಳುನಾಡಿನ ವಿಧಾನಸಭೆಯ ಮ್ಯಾಜಿಕ್ ನಂಬರ್ 118. ಈಗಾಗಲೇ ವಿಜಯ್ ನೇತೃತ್ವದ ಟಿವಿಕೆ109 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ವಿಜಯ್ ಮುಖ್ಯಮಂತ್ರಿ ಗಾದಿ ಏರುವುದು ಬಹುತೇಕ ಖಚಿತವಾಗಿದೆ. ವಿಜಯ್ ಶೇ.37ರಷ್ಟು ಮತ ಪಡೆದಿದ್ದಾರೆ.
294 ಸಂಖ್ಯಾಬಲವಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ 148 ಮ್ಯಾಜಿಕ್ ನಂಬರ್. ಆಡಳಿತಾರೂಢ ಟಿಎಂಸಿ ಈ ರಾಜ್ಯದಲ್ಲಿ ಕೇವಲ 93 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 195 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬೇಸತ್ತ ಜನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.
ಕೇರಳಂನಲ್ಲಿ 140 ಸಂಖ್ಯಾಬಲವಿದ್ದು, 71 ಮ್ಯಾಜಿಕ್ ನಂಬರ್. ಈಗಾಗಲೇ ಯುಡಿಎಫ್ 90 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ 30 ಸಂಖ್ಯಾಬಲವಿದ್ದು, 16 ಮ್ಯಾಜಿಕ್ ನಂಬರ್. ಬಿಜೆಪಿ ಈಗಾಗಲೇ 16 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸೂಚನೆ ಸಕ್ಕಿದೆ.
ಅಸ್ಸಾಂನಲ್ಲಿ 126 ಸಂಖ್ಯಾಬಲವಿದ್ದು , 64 ಮ್ಯಾಜಿಕ್ ನಂಬರ್ ಆಗಿದೆ. ಈಗಾಗಲೇ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರೋದು ಖಚಿತ. ಸುಮಾರು 99 ಕ್ಷೇತ್ರದಲ್ಲಿ ಕೇಸರಿ ಪಾಳಯ ಮುನ್ನಡೆ ಸಾಧಿಸಿದೆ.
11:17 PM (IST) May 04
10:52 PM (IST) May 04
10:27 PM (IST) May 04
2024ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್, ರಾಜಕೀಯ ಪ್ರವೇಶಿಸಿ ಬಿಜೆಪಿ ಅಭ್ಯರ್ಥಿಯಾಗಿ ಪಾನಿಹಟಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಅವರ ನ್ಯಾಯಕ್ಕಾಗಿನ ಹೋರಾಟದ ಹೊಸ ಅಧ್ಯಾಯವಾಗಿದೆ.
09:56 PM (IST) May 04
08:02 PM (IST) May 04
ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ, ಈ ಹಿಂದೆ ತಾನು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದ ತ್ರಿಷಾ ಕೃಷ್ಣನ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
05:59 PM (IST) May 04
ಆರಂಭದ ದಿನಗಳಲ್ಲಿ ಮದ್ರಾಸ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಪತ್ಯವಿತ್ತು. 1952ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ, ಚಾಣಕ್ಯ ರಾಜಾಜಿ (ಸಿ. ರಾಜಗೋಪಾಲಚಾರಿ) ಸಿಎಂ ಆದರು. ಆದರೆ, ಅವರ 'ಕುಲ ಕಲ್ವಿತ್' ಯೋಜನೆಗೆ ಭಾರಿ ವಿರೋಧ ವ್ಯಕ್ತವಾದಾಗ, ಅಧಿಕಾರ ಬಿಟ್ಟುಕೊಡಬೇಕಾಯಿತು. ಅಲ್ಲಿಗೆ ಶುರುವಾಗಿದ್ದೇ ಕೆ. ಕಾಮರಾಜ್ ಯುಗ! ಮುಂದೇನಾಯ್ತು ನೋಡಿ..
05:58 PM (IST) May 04
ಪಂಚರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ನಿಷೇಧಿತ ಪಾಲಿಮಾರ್ಕೆಟ್ ವೇದಿಕೆಯಲ್ಲಿ ಕ್ರಿಪ್ಟೋ ಮೂಲಕ ₹242.8 ಕೋಟಿಗೂ ಹೆಚ್ಚು ಬೆಟ್ಟಿಂಗ್ ನಡೆದಿದೆ. ತಮಿಳುನಾಡಿನಲ್ಲಿ ಬೆಟ್ಟಿಂಗ್ ನಿರೀಕ್ಷೆಗಳು ತಲೆಕೆಳಗಾಗಿದ್ದರೆ, ಕೇರಳದ ಬಿಜೆಪಿ ಅಭ್ಯರ್ಥಿಯೊಬ್ಬರು ತಮ್ಮ ಗೆಲುವಿನ ಮೇಲೆ ಕಟ್ಟಿದ್ದ 1 ಕೋಟಿ ರೂ. ಪಣವನ್ನು ಸೋತಿದ್ದಾರೆ.
04:42 PM (IST) May 04
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಜಯ್ ಅವರ ಜನಪ್ರಿಯತೆ, ಯುವಜನರ ಬೆಂಬಲ, ಮತ್ತು ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ನೀಡಿದ ಭರವಸೆಗಳು ಈ ಐತಿಹಾಸಿಕ ಮುನ್ನಡೆಗೆ ಕಾರಣವಾಗಿವೆ.
04:27 PM (IST) May 04
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನವದೆಹಲಿಯಲ್ಲಿ ಹೇಳಿಕೆ,
ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಫಲಿತಾಂಶ ಎನ್‌ಡಿಎ ಮತ್ತು ಬಿಜೆಪಿ ಗೆ ಬಹುದೊಡ್ಡ ಗೆಲುವು ತಂದುಕೊಟ್ಟಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 12 ವರ್ಷ ಗಳು ಆದ್ರೂ ಜನರ ಬೆಂಬಲ ಈ ಗೆಲುವು ಕೊಟ್ಟಿದ್ದಾರೆ. ಕೇರಳ ಬಿಟ್ರೆ ಕಾಂಗ್ರೆಸ್ ಹುಡುಕುವಂತಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಕಾಂಗ್ರೆಸ್ ಝಿರೋ ಆಗಿದೆ. ಪಶ್ಚಿಮ ಬಂಗಾಳದ ಫಲಿತಾಂಶ ಇಂಡಿ ಘಟಬಂಧನ್‌ಗೆ ದೊಡ್ಡ ಸಂದೇಶ ಕೊಟ್ಟಿದೆ. ತುಷ್ಟೀಕರಣ ರಾಜಕಾರಣ, ಬಹುಸಂಖ್ಯಾತ ತಿರಸ್ಕರಿಸಿದ್ದಕ್ಕೆ ಜನ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಎಡಪಕ್ಷಗಳು ಕೇರಳದಲ್ಲಿ ಸೋತಿದೆ.. ಕೇವಲ ಜೆಎನ್‌ಯು ಗೆ ಸೀಮಿತವಾಗಿದೆ. ದೇಶ ಕಮ್ಯುನಿಸ್ಟ್ ಮುಕ್ತ ಆಗಿದೆ. ಕೇರಳದಲ್ಲಿ ಮೂರು ಸ್ಥಾನ ಬಿಜೆಪಿ ಗೆದ್ದಿದೆ. ಕೇರಳದಲ್ಲೂ ಕಾಂಗ್ರೆಸ್ ಸ್ವಂತವಾಗಿ ಬಂದಿಲ್ಲ.. ಮೈತ್ರಿಯಿಂದ ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳ ದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು.. ಹಲವು ಕಡೆ ಮತದಾನ ಮಾಡುವುದಕ್ಕೆ ಕಳೆದ ಬಾರಿ ಬಿಟ್ಟಿರಲಿಲ್ಲ.
04:10 PM (IST) May 04
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ...
ಪಂಚ ಫಲಿತಾಂಶ ಜನ ಮೋದಿಯವರ ಮೇಲೆ ಇಟ್ಟಿರುವ ನಂಬಿಕೆ ಮತ್ತಷ್ಟು ದೃಢ ಪಡಿಸಿದೆ. ಉಚಿತ ಘೋಷಣೆಗಳಿಂದ ಜನರನ್ನು ಹೆಚ್ಚು ದಿನ ಮರುಳು ಮಾಡಲು ಆಗಲ್ಲ ಅನ್ನೋದನ್ನು ಫಲಿತಾಂಶ ತೋರಿಸಿದೆ. ನಾನು ಮೋದಿ, ಅಮಿತ್ ಷಾ ನಮ್ಮ ಎಲ್ಲ ನಾಯಕರಿಗೆ ಅಭಿನಂದನೆ ತಿಳಿಸ್ತೇನೆ.
ದಾವಣಗೆರೆ ಸೋಲು ನೋವಾಗಿದೆ. ದಾವಣಗೆರೆ ಗೆದ್ದೆ ಗೆಲ್ಲುತ್ತೇವೆ ಎಂದು ಕೊಂಡಿದ್ದೆವು. ಆದರೆ ಕೊನೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಮುಂದಿನ ದಿನಗಳಲ್ಲಿ ಇದೆಲ್ಲಾ ಸರಿ ಪಡಿಸಿಕೊಂಡು ಹೋಗುತ್ತೇವೆ ನಾನು ಮುಂದಿನ ದಿನಗಳಲ್ಲಿ ಜಿಲ್ಲಾ ಪ್ರವಾಸ ಮಾಡುತ್ತೇನೆ ವಾರಕ್ಕೊಂದು ಜಿಲ್ಲೆಗೆ ಹೋಗುತ್ತೇನೆಂದರು.
03:59 PM (IST) May 04
03:04 PM (IST) May 04
ನಿಖಿಲ್ ಕುಮಾರಸ್ವಾಮಿ ಟ್ವೀಟ್
02:41 PM (IST) May 04
ಬಹು ವರ್ಷಗಳ ಎಲ್‌ಡಿಎಫ್ ಆಡಳಿತಕ್ಕೆ ಕೇರಳಂನಲ್ಲಿ ಬ್ರೇಕ್ ಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ಜಯಭೇರಿ ಸಾಧಿಸಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದ್ದು, ಯುವಕರ ಕೆಲಸಕ್ಕಾಿ ರಾಜ್ಯವನ್ನು ತೊರೆಯುತ್ತಿದ್ದಾರೆ. ಅವರೆಲ್ಲರೂ ಸಿಟ್ಟಾಗಿದ್ದು ಕಾಂಗ್ರೆಸ್ಸಿನ ಗೆಲುವಿಗೆ ಮುಖ್ಯ ಕಾರಣವೆಂದು ಕಾಂಗ್ರೆಸ್ ಎಂಪಿ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
#WATCH | Thiruvananthapuram | On UDF leading in Keralam, Congress MP Shashi Tharoor says, "There are many factors and the anti-incumbency against the 10-year tenure of the LDF. What is happening in Keralam is that youth from the state are migrating to other states and abroad… pic.twitter.com/U6JP6emPqs
— ANI (@ANI) May 4, 2026
02:39 PM (IST) May 04
ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಬಾಲನಟನಾಗಿ ಮಿಂಚಿದ ಹಲವು ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ವಿಜಯ್ ಅವರನ್ನು ನಾಯಕನನ್ನಾಗಿ ಮಾಡಿ 'ನಾಲಯ ತೀರ್ಪು' ಚಿತ್ರದ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡಿದರು. ಕನ್ನಡದ ಜೊತೆ ನಂಟೇನು?
02:29 PM (IST) May 04
ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಒಂದೇ ಒಂದು ಪದದಿಂದ ಜನರ ಮತವನ್ನು ತಮ್ಮತ್ತ ಸೆಳೆಯುವ ಹಾಗೆ ಮಾಡಿದ್ದರು. ವಿಜಯ್ ಅವರ ಈ ಸೌಮ್ಯ ನಡೆ ಎಲ್ಲರನ್ನು ಆಕರ್ಷಿಸಿದ್ದು, ಡಿಎಂಕೆಯ ಆಕ್ರಮಣಕಾರಿ ರಾಜಕೀಯ ಶೈಲಿಗೆ ತಣ್ಣೀರೆರಚಿದೆ.
01:53 PM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಡಿಎಂಕೆಗಿಂತ ಮುನ್ನಡೆ ಸಾಧಿಸುತ್ತಿದ್ದಂತೆ, ಡಿಎಂಕೆ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವ ಸನ್ ಟಿವಿ ಷೇರುಗಳು ತೀವ್ರ ಕುಸಿತ ಕಂಡಿವೆ. ಈ ರಾಜಕೀಯ ಬದಲಾವಣೆಯು ಷೇರು ಮಾರುಕಟ್ಟೆಯ ಮೇಲೆ ಬೀರಿದ ಪರಿಣಾಮ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹಿನ್ನಡೆಯನ್ನು ಈ ಲೇಖನ ವಿವರಿಸುತ್ತದೆ.
01:26 PM (IST) May 04
ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸಲು ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
01:03 PM (IST) May 04
ಪಂಚ ರಾಜ್ಯಗಳ ಚುನಾವಣೆ ಹಿನ್ನಲೆ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್
ದೇಶದ ಅಭಿವೃದ್ಧಿ ಮತ್ತು 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಭಾರತದ ಜನತೆ ಮತ್ತೊಮ್ಮೆ ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಮಂತ್ರಕ್ಕೆ ಜನತೆ ಮನ್ನಣೆ ನೀಡಿದ್ದಾರೆ. ಚುನಾವಣಾ ಜಯವಲ್ಲ, ಇದು ಬದಲಾಗಿ ದೇಶದ ಜನರ ಅಚಲ ನಂಬಿಕೆಯ ಪ್ರತೀಕವಾಗಿದೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಸಂಘಟನಾತ್ಮಕ ಕೌಶಲ ಮತ್ತು ಕಾರ್ಯತಂತ್ರವು ಎನ್‌ಡಿಎ ಮೈತ್ರಿಕೂಟದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಿಜಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ತೋರಿದ ಶ್ರಮ ಹಾಗೂ ಸಂಘಟನಾ ಶಕ್ತಿ ಈ ಐತಿಹಾಸಿಕ ಫಲಿತಾಂಶಕ್ಕೆ ಮುನ್ನುಡಿ ಬರೆದಿದೆ.
12:56 PM (IST) May 04
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಟಿಎಂಸಿ ಕಾರ್ಯಕರ್ತರಿಗೆ ಮತ ಎಣಿಕೆ ಕೇಂದ್ರಗಳ ಬಳಿಯೇ ಇರಲು ಕರೆ ನೀಡಿದ್ದು, ಸೂರ್ಯಾಸ್ತದ ವೇಳೆ ಎಲ್ಲವೂ ಬದಲಾಗಲಿದೆ ಎಂದಿದ್ದಾರೆ. ಬಿಜೆಪಿ ತನ್ನ ಪ್ರಭಾವ ಬೀರಿ, ಮತಗಳನ್ನು ತಿರುಚಲಾಗಿದ್ದು, ಹಲವೆಡೆ ಮತ ಎಣಿಕೆಯೇ ನಡೆಯುತ್ತಿಲ್ಲವೆಂದು ಮಮತಾ ಆರೋಪಿಸಿದ್ದಾರೆ.
ಸೋಲು ಒಪ್ಪಿಕೊಳ್ಳಲು ತಯಾರಿಲ್ಲದ ಟಿಎಂಸಿ ಅಭ್ಯರ್ಥಿಗಳು.
12:53 PM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸೋಲುತ್ತಾರೆ ಎಂಬ ವದಂತಿ ಕೇಳಿ ಮನನೊಂದ ಅವರ ಕಟ್ಟಾ ಅಭಿಮಾನಿಯೊಬ್ಬರು ಕೃಷ್ಣಗಿರಿಯಲ್ಲಿ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಕೆ. ಮಹೇಂದ್ರನ್ ಎಂಬ ಯುವಕ ಚೂಪಾದ ವಸ್ತುವಿನಿಂದ ಕುತ್ತಿಗೆ ಕುಯ್ದುಕೊಂಡಿದ್ದಾನೆ.
12:46 PM (IST) May 04
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಬೀದಿ ಬದಿ ವ್ಯಾಪರಿಯಿಂದ ಪ್ರಧಾನಿ ನರೇಂದ್ರ ಮೋದಿ ಜಲಮುರಿ ತಿಂದಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇಲ್ಲಿಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲವು ಸಾಧಿಸಿದ್ದು, ಇದೀಗ ರಾಜ್ಯದಲ್ಲಿ ಎಲ್ಲೆಡೆ ಜಲಮುರಿ ಹಂಚಲಾಗುತ್ತಿದೆ.
12:24 PM (IST) May 04
ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಿದರೆ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದರು. ಚುನಾವಣಾ ಟ್ರೆಂಡ್‌ಗಳು ಟಿವಿಕೆ ಪಕ್ಷದ ಮುನ್ನಡೆಯನ್ನು ತೋರಿಸುತ್ತಿದ್ದು, ಕಿಶೋರ್ ಅವರ ತಂತ್ರಗಾರಿಕೆ ನಿಜವಾಗುವ ಸೂಚನೆ ನೀಡಿವೆ.
12:13 PM (IST) May 04
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ.
ಸಮಗ್ರ ಪಂಚರಾಜ್ಯ ಚುನಾವಣೆ ನೋಡಿದಾಗ ಒಂದು ಸಂದೇಶ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಆಗ್ತಾ ಇದೆ.ಉತ್ತರ ಪೂರ್ವ ರಾಜ್ಯಗಳಲ್ಲಿ ಅಂದರೆ ಅಸ್ಸಾಂ ನಲ್ಲಿ ಎಸ್‌ಐಆರ್ ಮಾಡಿ ಚುನಾವಣೆ ನಡೆಸಿದ್ದಾರೆ. ಪ. ಬಂಗಾಳದಲ್ಲಿ ಪೋಲೀಸ್, ಮಿಲಿಟರಿ ಇಟ್ಟು 93 ಲಕ್ಷ ಜನರನ್ನ ಮತದಾರರ ಪಟ್ಟಿಯಿಂದ ತೆಗೆದಿದ್ದಾರೆ. ಇಷ್ಟು ಮತ ಹೋದರೆ ಏನಾಗುತ್ತದೆ ಅಂತ ತಿಳಿದುಕೊಳ್ಳಿ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗ್ತಾ ಇದೆ. ನಮ್ಮ ಅಭ್ಯರ್ಥಿಗಳದ್ದೇ ವೋಟರ್ ಲಿಸ್ಟ್‌ನಿಂದ ತೆಗೆದಿದ್ದಾರೆ. ಸರ್ಕಾರಿ ಯಂತ್ರ ತಂತ್ರ ಬಳಸಿ ಗೆದ್ದಿದ್ದಾರೆ. ಜನ ತಾವಗೇ ತಾವು ಚೇಂಜ್ ಬಳಸಿದ್ರೆ ಉತ್ತಮ. ಇಲ್ಯಾಕೆ ನಾವು ಸರ್ಕಾರಿ ಯಂತ್ರ ತಂತ್ರ ಬಳಸಲಿಲ್ಲ. ಬಿಜೆಪಿಯವರು ದಕ್ಷಿಣದಲ್ಲಿ ಬಾಲ ಬಿಚ್ಚಲಾಗೋಲ್ಲ ಅನ್ನೋದು ಗೊತ್ತಿದೆ. ಉತ್ತರ ಪೂರ್ವದಲ್ಲಿ ಸಾಂವಿಧಾನಿಕ ಹುದ್ದೆ ದುರುಪಯೋಗ ಆಗಿರೋದು ಸ್ಪಷ್ಟ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ತಮಿಳುನಾಡಿನಲ್ಲಿ ಜೆನ್ ಝೀ ಬಹಳಷ್ಟು ವರ್ಕ್ ಆಗಿದೆ. ಇಲ್ಲಿ ಪ್ರಭುದ್ಧರಾಗಿದ್ದಾರೆ. ಕೋಮುವಾದ, ಹಿಂದಿ ಹೇರಿಕೆ ಇಲ್ಲಿ ಆಗೋದಿಲ್ಲ ಅಂತ ಸರಿಯಾಗಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಯಾವುದಾದ್ರೂ ಪಕ್ಷ ಉಳಿದಿದೆ ಅಂದರೆ ಅದು ಕಾಂಗ್ರೆಸ್. ಇದನ್ನ ಯಾರೂ ಅಂಡರ್ ಎಸ್ಟಿಮೇಟ್ ಮಾಡಲಿಲ್ಲ. 24-30 ಪರ್ಸೆಂಟ್ ವೋಟ್ ಟಿವಿಕೆದು ಇತ್ತು.
11:58 AM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ, ಆಡಳಿತಾರೂಢ ಡಿಎಂಕೆ ಪಕ್ಷವು ಅನಿರೀಕ್ಷಿತ ಹಿನ್ನಡೆ ಅನುಭವಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ. ನಟ ವಿಜಯ್ ಅವರ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಡಿಎಂಕೆ ಕಚೇರಿಯಲ್ಲಿದ್ದ ವಿಜಯೋತ್ಸವದ ಸಿದ್ಧತೆಗಳನ್ನು ತೆರವುಗೊಳಿಸಲಾಗಿದೆ.
11:52 AM (IST) May 04
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಿದ್ದು, ಬಂಗಾಳಿಗರ ಗೆಲುವಲ್ಲ. ಇಡೀ ರಾಷ್ಟ್ರದ ಗೆಲವು. ಧಮನಕಾರಿ ನೀತಿಯನ್ನು ಪಾಲಿಸುತ್ತಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಜನರು ಕಲಿಸಿರುವ ಪಾಠ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಾಕಷ್ಟು ಶ್ರಮವಹಿಸಿ, ಈ ಗೆಲವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹೇಗಿತ್ತು ಎಂದು ಎಲ್ಲರೂ ಊಹಿಸುವಂತಿತ್ತು. ಅದಕ್ಕೆ ಬಂಗಾಳಿಗರು ತಕ್ಕ ಪಾಠ ಕಲಿಸಿದ್ದಾರೆ, ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
11:43 AM (IST) May 04
ಬಿಜೆಪಿ ಮಲ್ಲೇಶ್ವರ ಜಗನ್ನಾಥ ಭವನ ಕಚೇರಿಯಲ್ಲಿ ಆರ್. ಅಶೋಕ್ ಹೇಳಿಕೆ.
ಬಿಜೆಪಿ ಗೆ ಇಂದು ಸುದಿನ. ಪ್ರಮುಖವಾಗಿ ದೇಶದ ಗಮನ ಸೆಳೆದ ಪಶ್ಚಿಮ ಬಂಗಾಳ ಚುನಾವಣೆ. ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಅಘಾತ. ಅಸ್ಸಾಂ ಮತ್ತು ಪುದುಚೇರಿ, ಬಂಗಾಳದಲ್ಲಿ ಬಿಜೆಪಿ ಲೀಡ್ ಇದೆ. ಬಿಜೆಪಿ ದೊಡ್ಡ ಮಟ್ಟದಲ್ಲಿ ಬಹುಮತ ಬರುತ್ತಿದೆ. ಡಿಎಂಕೆ ಹತಾಶ ಮನೋಭಾವದಲ್ಲಿ ಗೂಡು ಸೇರಿದ್ದಾರೆ. ಕೇರಳದಲ್ಲಿ ಬಿಜೆಪಿ ತನ್ನ ಖಾತೆ ಪ್ರಾರಂಭ ಮಾಡಲಿದೆ. ತಮಗೆ ತುಂಬಾ ಪ್ರಾಮುಖ್ಯ ಅಸ್ಸಾಂ ಮತ್ತು ವೆಸ್ಟ್ ಬೆಂಗಾಲ್. ಮಮತಾ ಬ್ಯಾನರ್ಜಿ ದೇಶ ದ್ರೋಹ ಮಾಡವವರಿಗೆ ಬಾಗಿಲು ತೆಗೆದಿದ್ರು. ದೇಶದ ಭದ್ರತೆಗೆ ಸುವರ್ಣ ಹಾದಿ ಮಾಡಿಕೊಟ್ಟಿದೆ. ಬಿಜೆಪಿ ದೊಡ್ಡ ಅಲೆ ದೇಶದಲ್ಲಿದೆ ಅನ್ನೋದು ಸಾಬೀತಾಗಿದೆ.
ಮಾನ್ಯ ಮೋದಿಜಿ ಅವ್ರು, ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಷಾ ಅವರಿಗೆ ಧನ್ಯವಾದ. ಕಾಂಗ್ರೆಸ್ ಮುಸ್ಲಿಂಮರಿಗೆ ದ್ರೋಹ ಮಾಡಿದೆ. ಮುಸ್ಲಿಂಮರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ. ಮೋದಿ ಮೂರು ಬಾರಿ ಪ್ರಧಾನಿ ಆಗಿದ್ದಾರೆ. ಮುಸ್ಲಿಂಮರ ಎಚ್ಚರಿಕೆ ಗಂಟೆ ಕಾಂಗ್ರೆಸ್‌ಗೆ. ಬಾಗಲಕೋಟೆ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಆಗಿದೆ. ಕಾಂಗ್ರೆಸ್ ಹಣ ಹಂಚಿರುವ ದಾಖಲೆ ಸಂಗ್ರಹಿಸ್ತಿದ್ದೇವೆ. ರೆಸಾರ್ಟ್‌ಗಳಲ್ಲಿ ಹಣ ಹಂಚಿದ್ದಾರೆ. ಡಿಕೆಶಿ ಅಸ್ಸಾಂ ರೆಸಾರ್ಟ್ ರಾಜಕೀಯ ಲೆಕ್ಕಾಚಾರ ನೋಡಿದರೆ, ಡಿಕೆ ಶಿವಕುಮಾರ್ ಇಲ್ಲಿಯೇ ರೆಸಾರ್ಟ್ ಮಾಡಿದ್ದರು. ಅದೀಗ ಅಗತ್ಯವಿದೆ.
11:35 AM (IST) May 04
ಕೇರಳಂನಲ್ಲಿ ಕಾಂಗ್ರೆಸ್ ಬಹುಮತದತ್ತ ಹಿನ್ನೆಲೆ. ದೆಹಲಿಯ ಎಐಸಿಸಿ ಬಳಿ ಸಂಭ್ರಮಾಚರಣೆ ಶುರು. ಅಚ್ಚೇದಿನ್ ಕಾಂಗ್ರೆಸ್ ಮಾತ್ರ ತರಲಿದೆ ಎಂದು ನಾಮಫಲಕ ಹಿಡಿದು ಸಂಭ್ರಮಾಚರಣೆ ಮಾಡುತ್ತಿರುವ ಕಾರ್ಯಕರ್ತರು.
ಕೇರಳಂ ಚುನಾವಣಾ ಫಲಿತಾಂಶಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ. ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮುನ್ನಡೆಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ.
11:33 AM (IST) May 04
ಕರ್ನಾಟಕ ಗಡಿಭಾಗ ಕಾಸರಗೋಡಿನಲ್ಲಿ ಮೊದಲ ಹಂತದ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ. ಕೇರಳದ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಮುನ್ನಡೆ. ಯುಡಿಎಫ್ ಅಭ್ಯರ್ಥಿಯಿಂದ 1226 ಮತಗಳ ಮುನ್ನಡೆ. ಬಿಜೆಪಿ ಅಭ್ಯರ್ಥಿ ಅಶ್ವಿನಿಗೆ 34022 ಮತಗಳು. ಯುಡಿಎಫ್ ನ ಮುಸ್ಲಿಂ ಲೀಗ್ ಅಭ್ಯರ್ಥಿ ಗೆ 32796 ಮತಗಳು. ಇಡೀ ಕೇರಳದಲ್ಲಿ ಕಾಸರಗೋಡು ಸೇರಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿರೋ ಬಿಜೆಪಿ.
11:26 AM (IST) May 04
ಭಾರತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದ ನಂತರ, ಕಮ್ಯುನಿಸ್ಟರ ಕೊನೆಯ ಭದ್ರಕೋಟೆಯಾದ ಕೇರಳದಲ್ಲೂ ಎಡಪಕ್ಷಗಳು ಅಧಿಕಾರ ಕಳೆದುಕೊಳ್ಳುವ ಹಂತ ತಲುಪಿವೆ.
11:22 AM (IST) May 04
11:16 AM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದು, ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ವಿಜಯ್ ಅವರ ಪ್ರವೇಶವು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಫಲಿತಾಂಶದ ನಿರೀಕ್ಷೆ ಹೆಚ್ಚಾಗಿದೆ.
11:13 AM (IST) May 04
10:50 AM (IST) May 04
ತಮಿಳುನಾಡಿನಲ್ಲಿ ಅಚ್ಚರಿ ಎಂಬಂತೆ ನಟ ವಿಜಯ್ ಕಟ್ಟಿದ ಹೊಸ ಪಕ್ಷ ಟಿವಿಕೆ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದರೆ, ಪಕ್ಕದ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತವಾಗಿದೆ. ಮುಖ್ಯಮಂತ್ರಿ ಎನ್. ರಂಗಸ್ವಾಮಿ ತತ್ತಚಾವಡ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
10:43 AM (IST) May 04
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ಮೊದಲಿನಿಂದಲೂ ಇದೆ. ಎಂಜಿಆರ್, ಜಯಲಲಿತಾ ಯಶಸ್ಸು ಕಂಡರೆ, ಶಿವಾಜಿ, ಕಮಲ್, ರಜನಿ ವಿಫಲರಾದರು. ಇದೀಗ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ಚುನಾವಣಾ ಟ್ರೆಂಡ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಹೊಸ ರಾಜಕೀಯ ಶಕೆಯ ಸೂಚನೆ ನೀಡಿದೆ.
10:40 AM (IST) May 04
ಪಶ್ಚಿಮ ಬಂಗಾಳದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಬಹುಮತ ಸಾಧಿಸಿದ್ದು, ಈಗಾಗಲೇ 177 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಎಂಸ್ 110 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೆ, ಮಮತಾ ಬ್ಯಾನರ್ಜಿ ವಿರುದ್ಧ ಕಳೆದ ಚುನಾವಣೆಯಲ್ಲಿ ಗೆದ್ದಿರುವ, ಈ ಸಲವೂ ಮಮತಾ ವಿರುದ್ಧವೇ ಸ್ಪರ್ಧಿಸಿರುವ ಸುವೇಂದ್ರು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
10:37 AM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯ ಆರಂಭಿಕ ಎಣಿಕೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ದೊಡ್ಡ ಹಿನ್ನಡೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉದಯನಿಧಿ ಸೇರಿ 31 ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಸದ್ಯದ ಟ್ರೆಂಡ್ ಪ್ರಕಾರ, ಎಐಎಡಿಎಂಕೆ ಮತ್ತು ಟಿಡಿಪಿ ಮೈತ್ರಿಕೂಟಗಳು ಮುನ್ನಡೆ
10:32 AM (IST) May 04
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಅನಿರೀಕ್ಷಿತ ಮುನ್ನಡೆ ಸಾಧಿಸುವ ಸೂಚನೆ ನೀಡಿದೆ. ಸರ್ಕಾರ ರಚನೆಗೆ ಬೇಕಾದ 'ಮ್ಯಾಜಿಕ್ ಸಂಖ್ಯೆ' 118 ಆಗಿದ್ದು, ಈ ಬಹುಮತದ ಲೆಕ್ಕಾಚಾರ ಮತ್ತು ರಾಜಕೀಯ ಮಹತ್ವವನ್ನು ಈ ಲೇಖನ ವಿವರಿಸುತ್ತದೆ.
10:12 AM (IST) May 04
ಪಶ್ಚಿಮ ಬಂಗಾಳದ ಚುನಾವಣಾ ಮತ ಎಣಿಕೆಯಲ್ಲಿ, ಜಾರ್‌ಗ್ರಾಮ್ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಪ್ರಧಾನಿ ಮೋದಿ ಅವರ 'ಝಲ್ ಮುರಿ' ಸವಿದ ಘಟನೆಯು ಈ ಮುನ್ನಡೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
10:10 AM (IST) May 04
ತಮಿಳುನಾಡು ಚುನಾವಣಾ ಫಲಿತಾಂಶದಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ. ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಹಿನ್ನಡೆಯಲ್ಲಿದ್ದಾರೆ. ಸದ್ಯದ ಟ್ರೆಂಡ್ ಪ್ರಕಾರ, ಟಿವಿಕೆ 67, ಎಐಎಡಿಎಂಕೆ 52 ಮತ್ತು ಡಿಎಂಕೆ 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.