ಏರ್‌ಫೋರ್ಸ್‌ನ ಸುಖೋಯ್ ಫೈಟರ್ ಜೆಟ್ ಪತನ: ಕೆಳಗೆ ಹಾರಿದ ಪೈಲಟ್‌ಗಳಿಗೆ ಗಾಯ

By Suvarna News  |  First Published Jun 4, 2024, 3:33 PM IST

ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್ ಯುದ್ಧ ವಿಮಾನವೊಂದು ಹಾರಾಟದ ವೇಳೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಹೊರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್ ಯುದ್ಧ ವಿಮಾನವೊಂದು ಹಾರಾಟದ ವೇಳೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಹೊರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ಘಟನೆ ನಡೆದಿದೆ. ಅವಳಿ ಎಂಜಿನ್ ಹೊಂದಿರುವ ಈ ಯುದ್ಧ ವಿಮಾನವು ರೈತರೊಬ್ಬರ ಹೊಲದಲ್ಲಿ ಪತನಗೊಂಡು ಬೆಂಕಿಗಾಹುತಿಯಾಗಿದೆ. ಪತನಗೊಂಡು ಹೊಗೆ ಹಾಗೂ ಬೆಂಕಿಯುಗುಳುತ್ತಿದ್ದ ಫೈಟರ್‌ ಜೆಟ್‌ನ್ನು ವೀಕ್ಷಿಸಿಲು ಸ್ಥಳೀಯ ಜನರು ರೈತನ ಹೊಲಕ್ಕೆ ಆಗಮಿಸಿದ್ದಾರೆ. 

ಪತನಗೊಳ್ಳುವ ಮೊದಲೇ ಅಪಾಯನವನ್ನರಿತು ಸುರಕ್ಷಿತವಾಗಿ ವಿಮಾನದಿಂದ ಜಂಪ್ ಆದ ಪೈಲಟ್ ಹಾಗೂ ಸಹ ಪೈಲಟ್‌ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸುಖೋಯ್ ಯುದ್ಧ ವಿಮಾನವು ಮಹಾರಾಷ್ಟ್ರದ ನಾಸಿಕ್‌ನ ಓಝಾರ್‌ನಿಂದ ಟೇಕಾಫ್ ಆಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಪರಿಷ್ಕರಿಸಿದ ನಂತರ ಪರೀಕ್ಷಾರ್ಥ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

Latest Videos

undefined

ಸುಖೋಯ್‌ ಯುದ್ಧ ವಿಮಾನದ ರಾಡಾರ್‌ಗೆ ಹಂಪಿ ವಿರೂಪಾಕ್ಷನ ಹೆಸರು

ಈ ಯುದ್ಧ ವಿಮಾನವೂ ಪ್ರಸ್ತುತ ಭಾರತದ ವಾಯುಸೇನೆಯ ದಾಸ್ತಾನಿನಲ್ಲಿ ಇಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತು ಸೇವೆಗಳ ತಂಡ ಆಗಮಿಸಿದ್ದು, ಗಾಯಗೊಂಡಿದ್ದ ಪೈಲಟ್‌ಗಳಿಗೆ ಚಿಕಿತ್ಸೆ ನೀಡಿದೆ. ರಷ್ಯಾ ನಿರ್ಮಿತವಾದ ಈ ಸುಖೋಯ್ ಯುದ್ಧ ವಿಮಾನದಲ್ಲಿ ಜಿರೋ ಜಿರೋ ಎನ್‌ಪಿಪಿ Zvezda K-36DM ಇಜೆಕ್ಷನ್ ಸಿಸ್ಟಂ  ಇದೆ. ಈ ಜಿರೋ ಜಿರೋ ಸಾಮರ್ಥ್ಯವನ್ನು, ಸಂಕೀರ್ಣ ಸ್ಥಿತಿಗಳಲ್ಲಿ ಪೈಲಟ್‌ಗಳು ಪಾರಾಗುವುದಕ್ಕೆ ಸಹಾಯ ಮಾಡುವುದಕ್ಕಾಗಿಯೇ ಅಭಿವೃದ್ಧಿಪಡಿಸಲಾಗಿದೆ. 

ಈ ಇಜೆಕ್ಷನ್ ಸೀಟ್ ಒಟ್ಟಾರೆ ನಿರ್ಗಮಿಸುವ ಮಾರ್ಗವಾಗಿದ್ದು, ಸೀಟಿನ ಕೆಳಗೆ ಸ್ಫೋಟಕಗಳನ್ನು ಹಾಗೂ ಪ್ಯಾರಾಚೂಟ್‌ಗಳನ್ನು ಹೊಂದಿದೆ.  ಹೊರಹಾರು ಕೋನವು ನಿರ್ಣಾಯಕವಾಗಿದ್ದು, ಫೈಟರ್ ಜೆಟ್ ಮುಂದಕ್ಕೆ ಚಲಿಸುತ್ತದೆ ಮತ್ತು ಪೈಲಟ್ ನನ್ನು ವಿಮಾನದಿಂದ ದೂರ ಸರಿಸಲು ಎಜೆಕ್ಷನ್ ರೇಖೆಯು ಅದಕ್ಕೆ ಲಂಬವಾಗಿರುತ್ತದೆ.

ಎಜೆಕ್ಷನ್ ಸಮಯದಲ್ಲಿ, ಪೈಲಟ್‌ಗಳು ಹೆಚ್ಚಿನ ಗುರುತ್ವಾಕರ್ಷಣ ಶಕ್ತಿಯನ್ನು ಅನುಭವಿಸುತ್ತಾರೆ. ಭೂಮಿಯ ಮೇಲೆ ಅನುಭವಿಸುವ ಜಿ ಪೋರ್ಸ್‌ಗಿಂತ 20 ಪಟ್ಟು ಹೆಚ್ಚು ಗುರುತ್ವಾಕರ್ಷಣ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಪೈಲಟ್‌ಗಳಿಗೆ ತೀವ್ರ ಗಾಯಗಳಾಗುತ್ತವೆ. ಆದರೆ ಇಂದಿನ ಈ ಅವಘಡದಲ್ಲಿ ಪೈಲಟ್‌ಗಳು ಎಷ್ಟು ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇಲ್ಲ. 

Droupadi Murmu: ಸುಖೋಯ್‌ ಯುದ್ಧವಿಮಾನದಲ್ಲಿ ಸುಪ್ರೀಂ ಕಮಾಂಡರ್‌ ಹಾರಾಟ!

ದೇಶದ ಹಲವಾರು ಸ್ಕ್ವಾಡ್ರನ್‌ಗಳಲ್ಲಿ 200 ಕ್ಕೂ ಹೆಚ್ಚು ಸುಖೋಯ್ ಯುದ್ಧ ವಿಮಾನಗಳು ಕಾರ್ಯನಿರ್ವಹಿಸುವುದರೊಂದಿಗೆ Su-30MKI ಭಾರತೀಯ ವಾಯುಪಡೆಯ ಮುಖ್ಯ ಆಧಾರವಾಗಿದೆ. ಸುಖೋಯ್ ಫೈಟರ್ ಜೆಟ್ ಒಂದು ಅವಳಿ ಎಂಜಿನ್, ಅವಳಿ ಆಸನಗಳನ್ನು ಹೊಂದಿರುವ ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು ಇದನ್ನು ರಷ್ಯಾ ನಿರ್ಮಿಸಿದೆ.  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದ್ದು 20 ವರ್ಷಗಳಿಂದ ಏರ್ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

click me!