ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್‌ ವಿರುದ್ಧ 'ಹತ್ಯೆ' ಆರೋಪ!

By Suvarna NewsFirst Published Sep 2, 2021, 4:13 PM IST
Highlights

* ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ

* ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಆಸ್ಪತ್ರೆ ವಿರುದ್ಧ ಸಿಡಿದೆದ್ದ ನೆಟ್ಟಿಗರು

* ಕೂಪರ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಮುಂಬೈ(ಸೆ.02): ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಲ್ವತ್ತು ವರ್ಷದ ಸಿದ್ಧಾರ್ಥ್ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಕೆಲ ಮಾಧ್ಯಮಗಳಲ್ಲಿ ಸಿದ್ಧಾರ್ಥ್‌ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೃತಪಟ್ಟಿದ್ದಾರೆಂದು ವರದಿ ಮಾಡಿವೆ. ಇವೆಲ್ಲದರ ನಡುವೆ ಟ್ವಿಟರ್‌ನಲ್ಲಿ ಸದ್ಯ ಕೂಪರ್ ಆಸ್ಪತ್ರೆ ವಿರುದ್ಧವೇ ಆಕ್ರೋಶ ವ್ಯಕ್ತವಾಗಿದೆ. ಅನೇಕ ಮಂದಿ ಈ ಆಸ್ಪತ್ರೆ ಹೆಸರು ಕೂಪರ್ ಅಲ್ಲ, ಹತ್ಯೆಗೈಯ್ಯುವ ಆಸ್ಪತ್ರೆ ಎಂದಿಡಬೇಕಿತ್ತು ಎಂದಿದ್ದಾರೆ.

ಕಾಕತಾಳೀಯ, 'ಬಾಲಿಕಾ ವಧು'ವಿನ ಇಬ್ಬರೂ ಲೀಡ್‌ ಆ್ಯಕ್ಟರ್ಸ್‌ ಈಗ ನೆನಪು ಮಾತ್ರ!

ಹೌದು ಸಿದ್ಧಾರ್ಥ್‌ ಶುಕ್ಲಾ ನಿಧನ ವಾರ್ತೆ ಅವರ ಅಭಿಮಾನಿಗಳಿಗೆ ಭಾರೀ ಆಘತ ಕೊಟ್ಟಿದೆ. ಕೆಲ ದಿನಗಳ ಹಿಂದಷ್ಟೇ ರಿಯಾಲಿಟಿ ಶೋಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಕಂಡು ಖುಷಿ ಪಡುತ್ತಿದ್ದ ಅಭಿಮಾನಿಗಳಿಗೆ ಏಕಾಏಕಿ ಅವರ ಸಾವಿನ ಸುದ್ದಿ ಅರಗಿಸಿಕೊಳ್ಳುವುದೇ ಅಸಾಧ್ಯವಾಗಿದೆ. ಹೀಗಿರುವಾಗ ಅವರ ನಿಧನದ ಬಗ್ಗೆ ಹಲವಾರು ವದಂತಿಗಳು ಹುಟ್ಟಿಕೊಳ್ಳಲಾರಂಭಿಸಿವೆ. ಕೆಲ ಮಾಧ್ಯಮಗಳಲ್ಲಿ ಸಿದ್ಧಾರ್ಥ್ ರಾತ್ರಿ ಮಲಗುವ ಮುನ್ನ ಔಷಧಿಯೊಂದನ್ನು ಸೇವಿಸಿ ನಿದ್ದೆಗೆ ಜಾರಿದ್ದರು. ಇದಾದ ಬಳಿಕ ಏಳಲೇ ಇಲ್ಲ ಎನ್ನಲಾಗಿದೆ.

ಸದ್ಯ ಈ ಬಗ್ಗೆ ಟ್ವಿಟರ್‌ನಲ್ಲೂ ಅನೇಕ ಚರ್ಚೆಗಳು ಆರಂಭವಾಗಿವೆ. ಸಿದ್ಧಾರ್ಥ್‌ರನ್ನು ಕರೆದೊಯ್ದಿದ್ದ ಕೂಪರ್ ಆಸ್ಪತ್ರೆ ಬಗ್ಗೆಯೂ ಅನೇಕ ಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಬಳಕೆದಾರನೊಬ್ಬ ಈ ಆಸ್ಪತ್ರೆ ಬಗ್ಗೆ ತನಿಖೆ ನಡೆಯಬೇಕು. ಇಲ್ಲಿ ಅಕ್ರಮ ನಡೆಯುತ್ತಿದೆ ಎಂದಿದ್ದಾರೆ. ಸಿದ್ಧಾರ್ಥ್ ನಿಧನ ಹೊಂದಿದ್ದಾರೆಂದು ಇದೇ ಆಸ್ಪತ್ರೆ ಘೋಷಿಸಿತ್ತೆಂಬುವುದು ಉಲ್ಲೇಖನೀಯ.

ಕೇಳಿ ಬಂತು ಬಾಲಿವುಡ್ ನಟ ಸುಶಾಂತ್ ರಜಪೂತ್ ಹೆಸರು

ಮತ್ತೊಬ್ಬ ವ್ಯಕ್ತಿ ಈ ಬಗ್ಗೆ ಟ್ವೀಟ್ ಮಾಡುತ್ತಾ, ಮೊದಲು ಸುಶಾಂತ್, ಈಗ ಸಿದ್ಧಾರ್ಥ್. ಇಬ್ಬರನ್ನೂ ಕರೆದೊಯ್ದಿಇದ್ದು ಕೂಪರ್ ಆಸ್ಪತ್ರೆಗೆ ನನಗ್ಯಾಕೋ ಇದು ಕೊಲೆ ಎಂದೇ ಅನಿಸುತ್ತದೆ ಎಂದಿದ್ದಾರೆ.

Bigg Boss 13 ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ!

ಮತ್ತೊಬ್ಬ ಬಳಕೆದಾರನೂ ಈ ಮಾತನ್ನು ಸಮರ್ಥಿಸಿದ್ದು, ಅಂದು ಸುಶಾಂತ್, ಇಂದು ಸಿದ್ಧಾರ್ಥ್ ಶುಕ್ಲಾ. ಅದೇ ಸರ್ಕಾರಿ ಆಸ್ಪತ್ರೆ. ಇದು ಕೂಡಾ ಒಂದು ಕೊಲೆ ಎಂಬ ವಿಶ್ವಾಸ ನನಗಿದೆ. ಈ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಅದೇನಿದ್ದರೂ ಕಿರುತೆರೆ ಧಾರವಾಹಿ 'ಬಾಲಿಕಾ ವಧು'ವಿನಲ್ಲಿ ತಮ್ಮ ಅದ್ಭುತ ನಟನೆ ಮೂಲಕ, ಮನೆ ಮಾತಾಗಿದ್ದ ಸಿದ್ಧಾರ್ಥ್ ಶುಕ್ಲಾ ಇನ್ನು ನೆನಪು ಮಾತ್ರ ಎಂಬುವುದು ಬಹಳ ದುಃಖದ ವಿಚಾರ. 

click me!