
ಹೈದ್ರಾಬಾದ್: ಆಂಧ್ರಪ್ರದೇಶದಲ್ಲಿ ಈ ಬಾರಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದು ಹಲವು ಆಗರ್ಭ ಶ್ರೀಮಂತರು ಕಣಕ್ಕೆ ಇಳಿದಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಈ ಪೈಕಿ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉದ್ಯಮಿ ಡಾ.ಪಿ. ಚಂದ್ರಶೇಖರ್ ತಮ್ಮ ಕುಟುಂಬ 5785 ಕೋಟಿ ರು. ಆಸ್ತಿ ಹೊಂದಿದೆ ಎಂದು ಘೋಷಿಸಿದ್ದಾರೆ. ಈ ಪೈಕಿ ಚಂದ್ರಶೇಖರ್ 2316 ಕೋಟಿ ರು. ಮತ್ತು ಅವರ ಪತ್ನಿ ಶ್ರೀರತ್ನ ಬಳಿ 2280 ಕೋಟಿ ರು. ಆಸ್ತಿ ಇದೆ.
ಈ ಆಸ್ತಿಯಲ್ಲಿ 6 ಕೋಟಿ ಮೌಲ್ಯದ ಕಾರುಗಳು, ಬ್ಯಾಂಕಲ್ಲಿ 6 ಕೋಟಿ ರು.ನಗದು, 6.86 ಕೆಜಿ ಚಿನ್ನ, 34 ಕೋಟಿ ರು. ಮೌಲ್ಯದ ಜಮೀನು, ದೆಹಲಿಯಲ್ಲಿ 135 ಕೋಟಿ ರು.ಮೌಲ್ಯದ ಕಟ್ಟಡ, ಅಮೆರಿಕದಲ್ಲಿ 7 ಕೋಟಿ ಮೌಲ್ಯದ ಭೂಮಿ, 29 ಕೋಟಿ ರು. ಮೌಲ್ಯದ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.
622 ಕೋಟಿ ಆಸ್ತಿಯ ಒಡೆಯ ಮಂಡ್ಯ ಕೈ ಅಭ್ಯರ್ಥಿ ಕಣದಲ್ಲಿರುವ ಅತ್ಯಂತ ಶ್ರೀಮಂತ ಕುಳ, 2ನೇ ಸ್ಥಾನ ಯಾರಿಗೆ?
ಒಂದು ವೇಳೆ ಚಂದ್ರಶೇಖರ್ ಗೆದ್ದರೆ, ಅತ್ಯಂತ ಶ್ರೀಮಂತ ಸಂಸದರಾಗಿ ಹೊರಹೊಮ್ಮಲಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ 5600 ಕೋಟಿ ರು. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿ:
ಇನ್ನು ಚೆವೆಲ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ರೆಡ್ಡಿ ತಮ್ಮ ಕುಟುಂಬದ ಆಸ್ತಿ 4566 ಕೋಟಿ ರು. ಎಂದು ಘೋಷಿಸಿದ್ದಾರೆ. ಇನ್ನೊಂದೆಡೆ ನೆಲ್ಲೂರು ಕ್ಷೇತ್ರದ ಟಿಡಿಪಿ ಅಭ್ಯರ್ಥಿ ನಾರಾಯಣ ಪೊಂಗುರು 806 ಕೋಟಿ ರು., ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ 700 ಕೋಟಿ ರು. ಘೋಷಿಸಿಕೊಂಡಿದ್ದಾರೆ. ಇನ್ನು ಜಗನ್ ಸೋದರಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ 182 ಕೋಟಿ ರು. ಆಸ್ತಿ ಘೋಷಿಸಿದ್ದಾರೆ.
ಮತ್ತೊಂದೆಡೆ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನ.ರ.ಲೋಕೇಶ್ 542 ಕೋಟಿ ರು. ಆಸ್ತಿ ಘೋಷಿಸಿದ್ದಾರೆ. 2019ರಲ್ಲಿ ಇವರ ಆಸ್ತಿ 373 ಕೋಟಿ ರು.ನಷ್ಟಿತ್ತು.
ಸಂಸದರು, ಶಾಸಕರ ವಿರುದ್ಧ ದಾಖಲಾಗಿದ್ದ 2 ಸಾವಿರ ಕ್ರಿಮಿನಲ್ ದಾವೆಗಳು 2023ರಲ್ಲಿ ಇತ್ಯರ್ಥ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ