Covid 19 Vaccination : ಜನವರಿ 3 ರಿಂದ ಮಕ್ಕಳಿಗೆ ಲಸಿಕೆ, 10ರ ಬಳಿಕ ಬೂಸ್ಟರ್ ಡೋಸ್!

By Suvarna NewsFirst Published Jan 1, 2022, 4:43 PM IST
Highlights

2007  ಅಥವಾ ಅದಕ್ಕಿಂತ ಮುನ್ನ ಜನಿಸಿದ ಎಲ್ಲಾ ಮಕ್ಕಳಿಗೆ ಲಸಿಕೆ
ಎರಡು ಡೋಸ್ ಪಡೆದು 9 ತಿಂಗಳು ಪುರೈಸಿದ 60 ವರ್ಷ ಮೇಲ್ಪಟ್ಟ ವಯಸ್ಕರರಿಗೂ ಲಸಿಕೆ
ಈಗಾಗಲೇ ಸ್ಥಾಪನೆಯಾಗಿರುವ ಲಸಿಕಾ ಕೇಂದ್ರಗಳಲ್ಲಿಯೇ ಉಚಿತ ಬೂಸ್ಟರ್ ಡೋಸ್

ಬೆಂಗಳೂರು (ಜ.1): ದೇಶದಲ್ಲಿ ಕೋವಿಡ್-19 (Covid 19 ) ಮೂರನೇ ಅಲೆಯ (Third Wave) ಆತಂಕ ಹೆಚ್ಚಿರುವಾಗಲೇ ಕೇಂದ್ರ ಸರ್ಕಾರ (Central Governament), ಮಕ್ಕಳಿಗೆ ಕೋವಿಡ್--19 ಲಸಿಕೆ (Covid 19 vaccine) ಹಾಗೂ ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ (Booster Dose) ನೀಡುವ ಮಹತ್ವದ ಘೋಷಣೆಯನ್ನು ಮಾಡಿತ್ತು. ಅದರಂತೆ ಜನವರಿ 3 ರಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದು, ಜನವರಿ 10 ರಿಂದ ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಬೂಸ್ಟರ್ ಡೋಸ್ ಪಡೆಯಲು ವ್ಯಕ್ತಿಗೆ ಮುಖ್ಯವಾಗಿ 60 ವರ್ಷ ಮೇಲ್ಪಟ್ಟಿರಬೇಕು ಹಾಗೂ ಎರಡು ಡೋಸ್ ಗಳ ಲಸಿಕೆ ಪಡೆದು ಕನಿಷ್ಠ 9 ತಿಂಗಳಾಗಿರಬೇಕು ಎಂದು ಸರ್ಕಾರ ಮಾಹಿತಿ ನೀಡಿದೆ. ಇನ್ನೂ 60 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವ ವಯಸ್ಕರು ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ. ಈಗಾಗಲೇ ದೇಶದಲ್ಲಿ ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಲಸಿಕಾ ಕೇಂದ್ರಗಳಲ್ಲಿಯೇ ಬೂಸ್ಟರ್ ಡೋಸ್ ನೀಡಲಿದ್ದು, ಸಂಪೂರ್ಣ ಉಚಿತವಾಗಿರಲಿದೆ (Free of Cost).  ಆರೋಗ್ಯ ಇಲಾಖೆ (Health Dept) ಹಾಗೂ ಕೋವಿಡ್-19 ಮುಂಚೂಣಿಯ ಕಾರ್ಯಕರ್ತರಿಗೂ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಉದ್ಯೋಗ ಪ್ರಮಾಣ ಪತ್ರ ಆಧಾರದ ಮೇರೆಗೆ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸರ್ ಡೋಸ್ ನೀಡಲಾಗುತ್ತದೆ. ಅದರೊಂದಿಗೆ 60 ವರ್ಷ ಮೇಲ್ಪಟ್ಟವರು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಾಗಿದ್ದಲ್ಲಿ ಅವರಿಗೂ ವಾಕ್ ಇನ್ ಲಸಿಕೆ ಲಭ್ಯವಾಗಲಿದೆ.

ಮಕ್ಕಳಿಗೆ ನೀಡುವ ಲಸಿಕೆ ಹೇಗೆ ಲಭ್ಯ: ಇನ್ನು ಮಕ್ಕಳಿಗೆ ನೀಡಲಾಗುವ ಲಸಿಕೆಗಳ ಬಗ್ಗೆಯೂ ಸರ್ಕಾರ ವಿವರವಾದ ಮಾಹಿತಿ ನೀಡಿದೆ. 2007 ರಲ್ಲಿ ಹಾಗೂ ಅದಕ್ಕಿಂತ ಮುನ್ನ ಜನಿಸಿದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಸರ್ಕಾರ ಲಸಿಕೆ ನೀಡಲಿದೆ. ಕೋವಿಡ್-19 ಅಪಾಯದೊಂದಿಗೆ ಅದರ ರೂಪಾಂತರಿ ವೈರಸ್ ಒಮಿಕ್ರಾನ್ (Omicron) ಕೂಡ ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಮಕ್ಕಳಿಗೂ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮವನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತಜ್ಞರು ಒತ್ತಾಯಿಸಿದ್ದರು.

ವಾರ್ಡ್ ಮಟ್ಟದಲ್ಲಿ ಮಕ್ಕಳ ಪೋಷಕರಿಗೆ ಲಸಿಕೆ ಬಗ್ಗೆ ಮನವರಿಕೆ ಕಾರ್ಯಕ್ರಮವನ್ನೂ ಈ ವೇಳೆ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆಗ 0.05 ಎಂಎಲ್ ಅನ್ನು ಮಾತ್ರವೇ ಮಕ್ಕಳಿಗೆ ನೀಡಲಿದ್ದು, ಮೊದಲ ಡೋಸ್ ಪಡೆದ 28 ದಿನಗಳ ಬಳಿಕ 2ನೇ ಡೋಸ್ ಅನ್ನು ನೀಡಲಾಗುತ್ತದೆ. ಮಕ್ಕಳಿಗೆ ಮೊಬೈಲ್ ಸಂಖ್ಯೆ ಇದ್ದಲ್ಲಿ ಅವರ ನಂಬರ್ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ, ಪೋಷಕರು ಅಥವಾ ಶಾಲೆಯ ಮುಖ್ಯೋಪಾಧ್ಯಾಯರ ನಂಬರ್ ನೋಂದಣಿ ಮಾಡಿಕೊಂಡು ಲಸಿಕೆ ಹಾಕಲಾಗುತ್ತದೆ. ಅದರೊಂದಿಗೆ ಮಕ್ಕಳ ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತಿನ ಚೀಟಿಯನ್ನು ಲಗತ್ತಿಸಬೇಕಾಗಿರುತ್ತದೆ.

Covid 19 in Bengaluru: ಆರು ತಿಂಗಳ ನಂತರ ಗರಿಷ್ಠ ಕೇಸ್: 656 ಮಂದಿಗೆ ಸೋಂಕು, ಐದು ಸಾವು!
 15 ರಿಂದ 18 ವಯೋಮಾನದ ಮಕ್ಕಳು ಓದುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಂದೆ ನಿಂತು ಲಸಿಕಾ ಕ್ಯಾಂಪ್ ಆಯೋಜನೆ ಮಾಡಬೇಕು. ರಾಜ್ಯ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳೂ ತಮಗೆ ಬೇಕಾದ ಡೋಸ್ ಗಳ ಮಾಹಿತಿಯನ್ನು ಆಯಾ ಜಿಲ್ಲೆಯ ಡಿಎಚ್ಓ ಗೆ ತಿಳಿಸುವಂತೆ ಹೇಳಲಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಇದರ ನಿರ್ವಹಣೆಯನ್ನು ಆಯಾ ವಲಯದ ಜಂಟಿ ಆಯುಕ್ತರಿಗೆ ಸಲ್ಲಿಸಬೇಕಾಗಿರುತ್ತದೆ.

Coronavirus: ಮಂಡ್ಯದಲ್ಲಿ ಮತ್ತೆ ಕೊರೋನಾ ಅಟ್ಟಹಾಸ: ನಾಲ್ವರಿಗೆ ಸೋಂಕು
ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ ಪಡೆಯಬಹುದು:
ಇನ್ನು ಖಾಸಗಿ ಆಸ್ಪತ್ರೆಗಳಲ್ಲೂ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬಹುದು.  ಶಾಲಾ ಕಾಲೇಜುಗಳಿಂದ ಹೊರಗಿರುವ ಮಕ್ಕಳಿಗೆ ನಗರಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಇನ್ನು ಕಾಯಿಲೆ ಇರುವ ಮಕ್ಕಳಿಗೆ ಲಸಿಕೆ ನೀಡಬೇಕಿದ್ದಲ್ಲಿ ವೈದ್ಯರ ಪ್ರಮಾಣ ಪತ್ರ ಅಥವಾ ಪೋಷಕರ ಸಹಮತ ಪತ್ರ ಕಡ್ಡಾಯವಾಗಿದೆ. 15 ದಿನಗಳ ಒಳಗಾಗಿ ಟಿಟಿ ಅಥವಾ ಇನ್ನಿತರ ಲಸಿಕೆ ಪಡೆದಿದ್ದರೆ, ಅಂತಾ ಮಕ್ಕಳಿಗೆ 15 ದಿನಗಳ ನಂತರ ಲಸಿಕೆ ನೀಡಲಾಗುತ್ತದೆ.

click me!