ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಯಾದವ ಗ್ಯಾಂಗ್‌ಸ್ಟಾರ್‌ ಗೋಲ್ಡಿ ಬ್ರಾರ್ ಅಲ್ಲ: ಯುಎಸ್ ಪೊಲೀಸರ ಸ್ಪಷ್ಟನೆ

By Anusha KbFirst Published May 2, 2024, 11:58 AM IST
Highlights

ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್, ಗ್ಯಾಂಗ್‌ಸ್ಟಾರ್ ಗೋಲ್ಡಿ ಬ್ರಾರ್‌ ನಿನ್ನೆ ಅಮೆರಿಕಾದಲ್ಲಿ ಹತ್ಯೆಯಾಗಿದ್ದಾನೆ. ಅಪರಿಚಿತ ಗುಂಡೇಟಿಗೆ ಆತ ಬಲಿಯಾಗಿದ್ದಾನೆ ಎಂದು ಕೆಲ ಅಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ಅಮೆರಿಕಾ ಪೊಲೀಸರು ಆ ವಿಚಾರವನ್ನು ಅಲ್ಲಗಳೆದಿದ್ದಾರೆ.

ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್, ಗ್ಯಾಂಗ್‌ಸ್ಟಾರ್ ಗೋಲ್ಡಿ ಬ್ರಾರ್‌ ನಿನ್ನೆ ಅಮೆರಿಕಾದಲ್ಲಿ ಹತ್ಯೆಯಾಗಿದ್ದಾನೆ. ಅಪರಿಚಿತ ಗುಂಡೇಟಿಗೆ ಆತ ಬಲಿಯಾಗಿದ್ದಾನೆ ಎಂದು ಕೆಲ ಅಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ಅಮೆರಿಕಾ ಪೊಲೀಸರು ಆ ವಿಚಾರವನ್ನು ಅಲ್ಲಗಳೆದಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾದ ವ್ಯಕ್ತಿ ಭಾರತದ ಪೊಲೀಸರಿಗೆ ಬೇಕಾಗಿರುವ ಗ್ಯಾಂಗ್‌ಸ್ಟಾರ್‌ ಗೋಲ್ಡಿ ಬ್ರಾರ್ ಅಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದ್ದು, ಆತ ಗ್ಯಾಂಗ್‌ಸ್ಟಾರ್ ಗೋಲ್ಡಿಬ್ರಾರ್ ಅಲ್ಲ, ಆತನನ್ನು 37 ವರ್ಷ ಕ್ಸೇವಿಯರ್  ಗಾಲ್ಡ್ನಿ ಎಂದು ಗುರುತಿಸಲಾಗಿದೆ. ಅಮೆರಿಕಾದ ಮಾಧ್ಯಮವೊಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಫೇರ್‌ಮಾಂಟ್ ಮತ್ತು ಹಾಲ್ಟ್ ಅವೆನ್ಯೂ ಮಧ್ಯೆ ಮಂಗಳವಾರ ಸಂಜೆ 5.30ರ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ ಗೋಲ್ಡ್‌ಬ್ರಾರ್‌ ಹತ್ಯೆಯಾಗಿದ್ದಾನೆ ಎಂದು ವರದಿ ಮಾಡಿತ್ತು. ಆತ ತನ್ನ ಸ್ನೇಹಿತನ ಜೊತೆ ಬೀದಿಯೊಂದರಲ್ಲಿ ನಿಂತಿದ್ದಾಗ ಕೆಲವು ಅಪರಿಚಿತರು ಸಮೀಪ ಬಂದು ಗುಂಡು ಹಾರಿಸಿ ಹೊರಟು ಹೋಗಿದ್ದಾರೆ. ಇದರಿಂದ ಗೋಲ್ಡಿ ಬ್ರಾರ್ ಜೊತೆಗಿದ್ದವನು ಕೂಡ ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಮೆರಿಕಾದ ಮಾಧ್ಯಮವೊಂದು ವರದಿ ಮಾಡಿತ್ತು. ಇದರ ಜೊತೆಗೆ ಈತನ ಈ ಸಾವಿನ ಹೊಣೆಯನ್ನು ಗೋಲ್ಡಿ ಬ್ರಾರ್‌ನ ವಿರೋಧಿ ಬಣವಾದ  ದಲ್ಲಾ ಲಕ್ಬೀರ್ ಗ್ಯಾಂಗ್‌ ಹೊತ್ತುಕೊಂಡಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೋಲ್ಡಿ ಬ್ರಾರ್ ಹತ್ಯೆ ನಡೆದಿದೆ ಎಂಬ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು. ಈ ಮಧ್ಯೆ ಅಮೆರಿಕಾ ಪೊಲೀಸರು ಆತ ನಿನ್ನೆಯ ಘಟನೆಯಲ್ಲಿ ಸಾವನ್ನಪ್ಪಿಲ್ಲ ಎಂದು ಹೇಳಿವೆ. 

ಗಾಯಕ ಸಿಧು ಮೂಸೆವಾಲ್ ಕಿಲ್ಲರ್ ಗೋಲ್ಡ್ ಬ್ರಾರ್ ಕತೆ ಫಿನಿಷ್: ಕ್ಯಾಲಿಫೋರ್ನಿಯಾದಲ್ಲಿ ಗುಂಡಿಕ್ಕಿ ಹತ್ಯೆ

ಫ್ರೆಸ್ನೊ ಪೊಲೀಸ್ ವಿಭಾಗವೂ ಈ ಊಹಾಪೋಹಾದ ವರದಿಗೆ ಈಗ ಪ್ರತಿಕ್ರಿಯಿಸಿದ್ದು, ಇದೊಂದು ಸುಳ್ಳು ವರದಿ ಎಂದು ಹೇಳಿದೆ. ಐಎನ್‌ಎಸ್ ಸುದ್ದಿಸಂಸ್ಥೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಲೆಫ್ಟಿನೆಂಟ್ ವಿಲಿಯಂ ಜೆ. ಡೂಲಿ ಮಾತನಾಡುತ್ತಾ, ಗುಂಡಿನ ದಾಳಿಯಲ್ಲಿ ಗೋಲ್ಡಿ ಬ್ರಾರ್ ಸಾವನ್ನಪ್ಪಿದ್ದಾರೆ ಎಂಬ ಆನ್‌ಲೈನ್ ಸುದ್ದಿಯನ್ನು ನೀವು ಕೇಳುತ್ತಿದ್ದರೆ ಅದು ಸಂಪೂರ್ಣ ನಿಜವಲ್ಲ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ. 

ಸಲ್ಮಾನ್‌ ಖಾನ್‌ ಕೊಲ್ಲೋದಾಗಿ ಬೆದರಿಕೆ ಹಾಕಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ಗೆ ಉಗ್ರಗಾಮಿ ಪಟ್ಟ

click me!