ದೆಹಲಿ ಎನ್‌ಕೌಂಟರ್ 5 ಉಗ್ರರ ಅರೆಸ್ಟ್: ಪಾಕ್ ಸಂಚು ಬಯಲು!

By Suvarna NewsFirst Published Dec 8, 2020, 11:52 AM IST
Highlights

ಶೌರ್ಯಚಕ್ರ ವಿಜೇತ ಯೋಧ ಬಲ್ವಿಂದರ್ ಸಿಂಗ್ ಅವರ ಹತ್ಯೆ ಪ್ರಕರಣ| ಬಲ್ವಿಂದರ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಸೇರಿದಂತೆ ಐವರು ಶಂಕಿತ ಉಗ್ರರು ಅರೆಸ್ಟ್

ನವದೆಹಲಿ(ಡಿ.08): ಶೌರ್ಯಚಕ್ರ ವಿಜೇತ ಯೋಧ ಬಲ್ವಿಂದರ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಸೇರಿದಂತೆ ಐವರು ಶಂಕಿತ ಉಗ್ರರನ್ನು ಸೋಮವಾರ ಪೂರ್ವ ದಿಲ್ಲಿಯಲ್ಲಿ ನಡೆದ ಎನ್‌ಕೌಂಟರ್ ಬಳಿಕ ಬಂಧಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಹುಕ್ಕೇರಿ ಯೋಧ ಸಾವು

ಬಂಧಿತ ಶಂಕಿತರು ಸ್ಫೋಟಕ ಮಾಹಿತಿಯೊಂದನ್ನು ಬಯಲುಗೊಳಿಸಿದ್ದಾರೆ. ಕಾಶ್ಮೀರಿ ಉಗ್ರರು ಹಾಗೂ ಪಾಖಿಸ್ತಾನದಲ್ಲಿರುವ ಖಲಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಕಲ್ಪಿಸಲು ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‌ಐ ಯತ್ನಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಬಂಧಿತರ ಪೈಕಿ ಮೂವರು ಕಾಶ್ಮೀರದವರಾಗಿದ್ದು, ಇಬ್ಬರು ಪಂಜಾಬ್‌ನವರು ಬಲ್ವಿಂದರ್ ಹತ್ಯೆಯ ಆರೋಪಿಗಳು. ಬಲ್ವಿಂದರ್ ಅಕ್ಟೋಬರ್‌ನಲ್ಲಷ್ಟೇ ಗುಂಡೇಟಿಗೆ ಬಲಿಯಾಗಿದ್ದರು. ಉಗ್ರವಾದದ ವಿರುದ್ಧ ಹೋರಾಡಿದ್ದಕ್ಕೆ ಅವರಿಗೆ ಶೌರ್ಯಚಕ್ರ ಲಭಿಸಿತ್ತು. 

ಉಗ್ರರ ಹೆಡೆಮುರಿ ಕಟ್ಟಲು 200 ಮೀ. ಪಾಕಿಸ್ತಾನ ಗಡಿಯೊಳಕ್ಕೆ ಪ್ರವೇಶಿಸಿದ ಭಾರತೀಯ ಸೇನೆ!

ಸೋಮವಾರ ಮುಂಜಾನೆ ದೆಹಲಿಯ ಲಕ್ಷ್ಮೀನಗರ ಪ್ರದೇಶದಲ್ಲಿ ಪಂಜಾಬ್ ಮೂಲದ ಇಬ್ಬರು ಕಾಶ್ಮೀರದ ಮೂವರಿಂದ ಹಣ ಪಡೆಯುವ ನಿಖರ ಮಾಹಿತಿ ಆಧರಿಸಿ ಕಾಕೈರ್ಯಾಚರಣೆ ಕೈಗೊಳ್ಳಲಾಗಿತ್ತು. ಬಂಧಿತರಿಂದ ಮೂರು ಪಿಸ್ತೂಲ್, ಎರಡು ಕೆಜಿ ಹೆರಾಯಿನ್ ಹಾಗೂ ಒಂದು ಲಕ್ಷ ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ. 

click me!