ಯುವ ವೈದ್ಯನ 27 ಗಂಟೆಗಳ ಕೊರೋನಾ ಶಿಫ್ಟ್..!

Published : May 06, 2021, 10:43 AM ISTUpdated : May 06, 2021, 05:51 PM IST
ಯುವ ವೈದ್ಯನ 27 ಗಂಟೆಗಳ ಕೊರೋನಾ ಶಿಫ್ಟ್..!

ಸಾರಾಂಶ

26 ವರ್ಷದ ವೈದ್ಯನ 27 ಗಂಟೆಯ ಕೊರೋನಾ ಶಿಫ್ಟ್ | ಯಾರು ಬದುಕಬೇಕು, ಬೇಡ ಎಂದು ನಿರ್ಧರಿಸುವುದು ಇದೇ ಯಂಗ್ ಡಾಕ್ಟರ್

ನವದೆಹಲಿ(ಮೇ.06): ರೋಹನ್ ಅಗರ್ವಾಲ್ 26 ವರ್ಷದ ಯುವಕ. ಈತನ ವೈದ್ಯಕೀಯ ಶಿಕ್ಷಣ ತರಬೇತಿ ಇನ್ನೂ ಮುಗಿದಿಲ್ಲ. ಆದರೆ ಭಾರತದ ಉತ್ತಮ ಆಸ್ಪತ್ರೆಗಳಲ್ಲಿ ಒಂದರಲ್ಲಿ ಜನರು ಉಸಿರಾಡಲಾಗದೆ ಓಡೋಡಿ ಬಂದಾಗ ಯಾರು ಬದುಕಬೇಕು, ಬೇಡ ಎಂದು ನಿರ್ಧರಿಸುವುದು ಇದೇ ಯಂಗ್ ಡಾಕ್ಟರ್.

ಕೊರೋನವೈರಸ್‌ನ ಕ್ರೂರವಾದ ಎರಡನೇ ಅಲೆಯಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯು ಕುಸಿತದ ಅಂಚಿನಲ್ಲಿರುವಾಗ, ಅಗರ್ವಾಲ್ ಅವರು 27 ಗಂಟೆ ಕೆಲಸ ಮಾಡೋ ದಿನಗಳಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನವದೆಹಲಿ ಆಸ್ಪತ್ರೆಯಲ್ಲಿ ತುರ್ತು ಕೋಣೆಯ ಉಸ್ತುವಾರಿಯನ್ನೂ ನಿರ್ವಹಿಸುತ್ತಾರೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿರುವ ಪ್ರತಿಯೊಬ್ಬರೂ-ರೋಗಿಗಳು, ಸಂಬಂಧಿಕರು ಮತ್ತು ಸಿಬ್ಬಂದಿಗಳಿಗೆ ಸಾಕಷ್ಟು ಹಾಸಿಗೆಗಳಿಲ್ಲ, ಆಸ್ಪತ್ರೆಯ ಮುಂಭಾಗದ ಗೇಟ್‌ಗಳಿಗೆ ಬರುವ ಪ್ರತಿಯೊಬ್ಬರನ್ನು ಜೀವಂತವಾಗಿಡಲು ಸಾಕಷ್ಟು ಆಮ್ಲಜನಕ ಅಥವಾ ವೆಂಟಿಲೇಟರ್‌ಗಳೂ ಇಲ್ಲ.

ಕೊರೋನಾದಿಂದ ಮಗನ ಕೆಲ್ಸ ಹೋಯ್ತು: ತುತ್ತು ಅನ್ನಕ್ಕಾಗಿ ಮತ್ತೆ ಕೆಲಸಕ್ಕೆ ಬಂದ 73ರ ವೃದ್ಧ

ಯಾರನ್ನು ಉಳಿಸಬೇಕು, ಯಾರನ್ನು ಉಳಿಸಬಾರದು ಎಂಬುದನ್ನು ದೇವರು ನಿರ್ಧರಿಸಬೇಕು ಎಂದು ಹೇಳುತ್ತಾರೆ ಅಗರ್ವಾಲ್. ನಾವಿರುವುದು ಅನ್ನು ಹೆಳುವುದಕ್ಕಲ್ಲ. ನಾವು ಕೇವಲ ಮನುಷ್ಯರು. ಆದರೆ ಈ ಸಮಯದಲ್ಲಿ ನಾವೂ ಇದನ್ನು ಮಾಡಬೇಕಾಗಿದೆ ಎಂದಿದ್ದಾರೆ.

ಕಳೆದ ಎರಡು ವಾರಗಳಿಂದ ಭಾರತವು ದಿನಕ್ಕೆ 300,000 ಕ್ಕೂ ಹೆಚ್ಚು ಪ್ರಕರಣಗಳ ಜಾಗತಿಕ ದಾಖಲೆಯನ್ನು ಕಂಡಿದೆ. ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಧಾವಿಸಿ, ಬೀದಿಯಲ್ಲಿ ಅಥವಾ ಮನೆಯಲ್ಲಿ ಸಾಯುತ್ತಿದ್ದರೆ, ಆಮ್ಲಜನಕ ಟ್ರಕ್‌ಗಳು ಸಶಸ್ತ್ರ ಕಾವಲಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಕಡಿಮೆ ಆಕ್ಸಿಜನ್ ದಾಸ್ತಾನು ಹೊಂದಿರುವ ಆಸ್ಪತ್ರೆಯತ್ತ ಸಾಗುತ್ತದೆ. ಸ್ಮಶಾನಗಳಲ್ಲಿ ದಿನಪೂರ್ತಿ ಕೆಲಸ.

ಈ ಆತಂಕಕಾರಿ ಸಮಯದಲ್ಲಿ ಅಗರ್ವಾಲ್ ಅವರು ತಾವು ಸೋಂಕಿಗೆ ಒಳಗಾದರೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮದೇ ಆಸ್ಪತ್ರೆ ತಮಗಾಗಿ ಬೆಡ್ ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಆರಂಭದಲ್ಲೇ ಸ್ಟಿರಾಯ್ಡ್ ಬಳಕೆಯಿಂದ ರೋಗಿಗಳಲ್ಲಿ ಆಕ್ಸಿಜನ್ ಕುಸಿತ: ಏಮ್ಸ್

ವ್ಯಾಕ್ಸೀನ್ ಆಗಿಲ್ಲ: ಜನವರಿಯಲ್ಲಿ ವೈದ್ಯಕೀಯ ವೃತ್ತಿಪರರಿಗಾಗಿ ವ್ಯಾಕ್ಸೀನ್ ಕೊಟ್ಟಾಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಫೆಬ್ರವರಿ ವೇಳೆಗೆ ಅವರು ವಿಶ್ರಾಂತಿ ಪಡೆಯಲು ಪ್ರಾರಂಭಿಸಿದರು. ನಾವೆಲ್ಲರೂ ವೈರಸ್ ಹೋಗಿದೆ ಎಂಬ ತಪ್ಪು ಕಲ್ಪನೆಯಲ್ಲಿದ್ದೆವು ಎಂದು ಹೇಳುತ್ತಾರೆ ಅವರು.

ಅಗರ್ವಾಲ್ ಅವರು ಬೆಳಗ್ಗೆ 9 ರ ಸುಮಾರಿಗೆ ತಮ್ಮ ಶಿಫ್ಟ್ ಪ್ರಾರಂಭಿಸಿದಾಗ, ಸಿಬ್ಬಂದಿ ತಮ್ಮ ಪಿಪಿಇ ಕಿಟ್ ತೆಗೆದುಹಾಕಬೇಕಾದ ಪ್ರದೇಶಗಳಲ್ಲಿ ನಾಲ್ಕು ಮೃತದೇಹ ಇರುತ್ತವೆ. ತುರ್ತು ಕೋಣೆಯಲ್ಲಿ, ಪರಿಸ್ಥಿತಿಗಳು ಇನ್ನಷ್ಟು ಇಕ್ಕಟ್ಟಾಗಿರುತ್ತದೆ. ರೋಗಿಗಳು ಮತ್ತು ಸಂಬಂಧಿಕರು ಲಭ್ಯವಿರುವ ಪ್ರತಿಯೊಂದು ಜಾಗದಲ್ಲಿ ಬಂದು ನಿಂತಿರುತ್ತಾರೆ. ಅವರಲ್ಲಿ ಹಲವರು ಬಟ್ಟೆ ಮಾಸ್ಕ್ ಹೊರತುಪಡಿಸಿ ಯಾವುದೇ ರಕ್ಷಣೆಯಲ್ಲಿರುವುದಿಲ್ಲ. ವೈದ್ಯರು ಮತ್ತು ದಾದಿಯರು ಸಹ ಸಂಪೂರ್ಣ ರಕ್ಷಣಾ ಸಾಧನಗಳನ್ನು ಧರಿಸುವುದನ್ನು ನಿಲ್ಲಿಸಿದ್ದಾರೆ. ಇದರಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ ಎನ್ನುತ್ತಾರವರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!