Weight Loss Diet Plan: ಫಿಟ್ ಆಗಿರೋಕೆ ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ..!

By Suvarna News  |  First Published Dec 15, 2021, 5:41 PM IST

ಬೇಕಾಬಿಟ್ಟಿ ಜಂಕ್‌ಫುಡ್ (Junkfood) ತಿನ್ನೋದು, ಮೈ ಕರಗಿಸಿಕೊಳ್ಳೋಕೆ ಜಿಮ್, ಡಯೆಟ್ (Diet)ಅಂತ ಸರ್ಕಸ್ ಮಾಡೋದು ಈಗಿನ ಜನರೇಷನ್‌ನ ಲೈಫ್ ಸ್ಟೈಲ್. ಸಣ್ಣಗಾಗ್ಬೇಕು ಅನ್ನೋ ಹಂಬಲದಲ್ಲಿ ಕೆಲವರು ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಡಯೆಟ್ ಮಾಡ್ತಾರೆ. ಆದ್ರೆ ಸಣ್ಣಗಾಗೋಕೆ ನೀವು ಫುಡ್ ಸ್ಕಿಪ್ ಮಾಡ್ಬೇಕಾಗಿಲ್ಲ. ಮತ್ತೇನಿದೆ ಉಪಾಯ..ಇಲ್ಲಿದೆ ಮಾಹಿತಿ.


ಇವತ್ತಿನ ದಿನಗಳಲ್ಲಿ ಆಧುನಿಕ ಜೀವನಶೈಲಿ (Lifestyle) ಹಲವು ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೈಹಿಕ ಚಟುವಟಿಕೆಯಿಲ್ಲದೆ ಬರೀ ಮೆದುಳಿಗೆ ಒತ್ತಡ ಹಾಕಿ ಮಾಡುವ ಕೆಲಸ, ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಆಹಾರ ಸೇವನೆ, ಅದರಲ್ಲೂ ಪಿಜ್ಜಾ, ಬರ್ಗರ್ ಮೊದಲಾದ ಅತಿಯಾದ ಜಂಕ್ ಫುಡ್ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳು ಒಂದಾ ಎರಡಾ. ಸ್ಥೂಲಕಾಯ ಇಂದಿನ ದಿನಗಳಲ್ಲಿ ಹಲವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ. ಸಣ್ಣಗಾಗಬೇಕು ಅನ್ನೋ ಹಂಬಲದಲ್ಲಿ ಬೇರೆ ಬೇರೆ ರೀತಿಯಲ್ಲಿ ಡಯೆಟ್ ಮಾಡಿ ಟ್ರೈ ಮಾಡ್ತಾರೆ. ಫುಡ್ ಸ್ಕಿಪ್ ಮಾಡೋದು, ತಿನ್ನೋ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು ಹೀಗೆ ನಾನಾ ರೀತಿಯ ಸರ್ಕಸ್ ಮಾಡ್ತಾರೆ. 

ಜನರ ಇಂಥಹಾ ಜೀವನಶೈಲಿಯನ್ನು ಬಂಡವಾಳವಾಗಿಟ್ಟುಕೊಂಡೇ ಅಲ್ಲಲ್ಲಿ ಓಪನ್ ಆಗುವ ಜಿಮ್‌ಗಳು, ಯೋಗ ಕ್ಲಾಸ್‌ಗಳು ಜನರಿಂದ ತುಂಬಿರುತ್ತದೆ. ಇವಿಷ್ಟೇ ಸಾಲ್ದೂ ಅಂತ ಬೆಳಗ್ಗೆ, ಸಂಜೆ ಬರೀ ಜ್ಯೂಸ್ ಕುಡಿಯವುದನ್ನು ಸಲಹೆ ನೀಡಲು ನ್ಯೂಟ್ರಿಷಿಯನ್ ಸೆಂಟರ್‌ಗಳು. ಬೆಳ್ಳಂಬೆಳಗ್ಗೆ ಎದ್ದು ಡ್ಯಾನ್ಸ್ ಮಾಡಲು ಜುಂಬಾ ಡ್ಯಾನ್ಸ್ ಸೆಂಟರ್‌ಗಳು ಸಹ ಇರುತ್ತವೆ. ಇದಕ್ಕೆಲ್ಲಾ ಯಾಕೆ ದುಡ್ಡು ವೇಸ್ಟ್ ಮಾಡೋದು ಅಂತ ಒಂದಷ್ಟು ಮಂದಿ ತಾವೇ ಡಾಕ್ಟರ್ ಆಗಿ ಫುಡ್ ಸ್ಕಿಪ್ ಮಾಡ್ಕೊಂಡು ಸಣ್ಣಗಾಗೋಕೆ ಟ್ರೈ ಮಾಡ್ತಾರೆ. ಆದರೆ, ನಿಮಗೆ ಗೊತ್ತಿರಲಿ ಈ ರೀತಿ ನ್ಯೂಟ್ರಿಷಿಯನ್ಸ್ ಅಥವಾ ತಜ್ಞರ ಸಲಹೆಯಿಲ್ಲದೆ ಆಹಾರಕ್ರಮವನ್ನು ಬದಲಾಯಿಸುವುದು ಅಪಾಯಕಾರಿ.

Tap to resize

Latest Videos

undefined

Isabgol Benefits: ಡಯಟ್ ಮಾಡಿ ಬೇಜಾರು ಬಂತಾ, ಇಸಾಬ್‌ಗೋಲ್ ಟ್ರೈ ಮಾಡಿ ನೋಡಿ

ಆರೋಗ್ಯವಾಗಿರಲು ಸಮತೋಲಿತ ಆಹಾರವು ಅತೀ ಮುಖ್ಯ. ಸಮತೋಲಿತ ಆಹಾರವು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಸ್ಥೂಲಕಾಯವನ್ನು ಕರಗಿಸಿ ಸಣ್ಣಗಾಗೋಕೆ ನೀವು ಫುಡ್ (Food) ಸ್ಕಿಪ್ ಮಾಡಬೇಕಾಗಿಲ್ಲ. ಬದಲಾಗಿ ಈ ಕೆಳಗಿನ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ ನಿಮ್ಮ ಸ್ಥೂಲಕಾಯ ಇಲ್ಲವಾಗೋದು ಖಂಡಿತ.

ಕಾರ್ಬೋಹೈಡ್ರೇಟ್‌ಗಳಿರುವ ಆಹಾರ:

ಹೆಸರಾಂತ ಪೌಷ್ಟಿಕತಜ್ಞರಾದ ಶೋನಾಲಿ ಸಬರ್‌ವಾಲ್ ಅವರ ಪ್ರಕಾರ, ಹಲವಾರು ಆಹಾರಗಳು ಪೌಷ್ಟಿಕಾಂಶವನ್ನು ಹೊಂದಿವೆ. ಈ ಆಹಾರಗಳು ದೀರ್ಘಕಾಲದ ವರೆಗೆ ಹಸಿವು ಇಲ್ಲದಾಗಿಸಿ ದಿನವಿಡೀ ಕೆಲಸ ಮಾಡುವ ಚೈತನ್ಯ ನೀಡುತ್ತದೆ. ಕಂದು ಅಕ್ಕಿ, ರಾಗಿ ಮೊದಲಾದ ಧಾನ್ಯಗಳಲ್ಲಿರುವ ಕಾರ್ಬೋಹೈಡ್ರೇಟ್‌ ಅಂಶ ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕರುಳಿನ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಆಲೂಗಡ್ಡೆ, ಸಿಹಿ ಗೆಣಸುಗಳಲ್ಲಿ ಪಿಷ್ಟ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಕರುಳಿನಲ್ಲಿರುವ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ಮೂಲಕ ಕರುಳಿನ ಕ್ಯಾನ್ಸರ್ ಅನ್ನು ತಡೆಯುತ್ತದೆ. 

ತರಕಾರಿಗಳ ಸೇವನೆ:

ಸಾಕಷ್ಟು ಪ್ರಮಾಣದ ತರಕಾರಿ (Vegetable)ಗಳನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ತರಕಾರಿಗಳು ಪೊಟ್ಯಾಸಿಯಮ್, ಡಯೆಟರಿ ಫೈಬರ್, ಫೋಲೇಟ್, ವಿಟಮಿನ್ ಎ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳ ಮೂಲವಾಗಿದೆ. ಅವು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಹೆಚ್ಚೆಚ್ಚು ತರಕಾರಿ ಸೇವನೆ ಒಳ್ಳೆಯದು.

Fat-To-Fit Transformation: ಎಲ್ಲ ಹುಬ್ಬೇರಿಸುವಂತೆ ತೂಕ ಇಳಿಸಿದ ಬಿ ಟೌನ್ ಬೆಡಗಿಯರು, ಗುಟ್ಟೇನು ಗೊತ್ತಾ?

ಕಾಳುಗಳ ಸೇವನೆ:

ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಕೊಬ್ಬಿನಂಶವಿರುತ್ತದೆ. ಹೀಗಾಗಿ ಹಸಿವಾದಾಗಲೆಲ್ಲಾ ಜಂಕ್ ಫುಡ್‌ಗಳನ್ನು ತಿನ್ನುವ ಬದಲು ಕಾಳುಗಳನ್ನು ಸೇವಿಸುವುದು ಉತ್ತಮ. ಟೈಪ್ 2 ಡಯಾಬಿಟಿಸ್ ಮತ್ತು ಮೆಟಬಾಲಿಕ್ ಸಿಂಡ್ರೋಮ್ ಅನ್ನು ನಿಯಂತ್ರಿಸುವಲ್ಲಿ ಕಾಳುಗಳು ಪ್ರಯೋಜನಕಾರಿಯಾಗಿವೆ.

ಹಣ್ಣುಗಳ ಸೇವನೆ:

ಹಣ್ಣಿನ ಜ್ಯೂಸ್ ಹಣ್ಣಿನ ರಸಗಳಿಗಿಂತ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ ತಾಜಾ ಹಣ್ಣು (Fruit)ಗಳನ್ನು ತೊಳೆದು ಜ್ಯೂಸ್ ಮಾಡದೆ ಹಾಗೆಯೇ ತಿನ್ನುವುದು ಒಳ್ಳೆಯ ಅಭ್ಯಾಸ. ಹಣ್ಣುಗಳನ್ನು ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಅನಗತ್ಯವಾಗಿ ಜಂಕ್ ಫುಡ್ ತಿನ್ನುವುದು ತಪ್ಪುತ್ತದೆ. ತೂಕ ಇಳಿಸಬೇಕೆಂಬ ಕಾರಣಕ್ಕೆ ದ್ರವ ರೂಪದ ಆಹಾರ ಸೇವನೆ ಮಾಡುವುದು ಉತ್ತಮವಲ್ಲ. ಇದು ಕೆಲವರಲ್ಲಿ ಬಹುಬೇಗನೇ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

click me!