ಸಾಕುಪ್ರಾಣಿಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮನೆಯಲ್ಲಿ ನಾಯಿ (Dog), ಬೆಕ್ಕು (Cat) ಅಂತ ಒಂದಿಷ್ಟು ಪೆಟ್ಸ್‌ಗಳನ್ನು ತಂದು ಸಾಕಿಕೊಳ್ಳುತ್ತಾರೆ. ಆದರೆ ಇವುಗಳ ಆರೈಕೆ ಹೇಗೆ ಅನ್ನೋದು ಹಲವರಿಗೆ ತಿಳಿದಿರದ ವಿಷಯ. ಅದರಲ್ಲೂ ಸಾಕುಪ್ರಾಣಿಗಳ ಆರೋಗ್ಯ (Health) ಕಾಪಾಡಲು ಆರ್ಯುವೇದದ ಮೂಲಿಕೆಗಳು ಉತ್ತಮ ಅನ್ನೋದು ನಿಮಗೆ ಗೊತ್ತಾ..?
ಶ್ವಾನ (Dog)ದಷ್ಟು ನಂಬಿಕೆ, ನಿಷ್ಠೆ ಹೊಂದಿರುವ ಪ್ರಾಣಿ ಬೇರೊಂದಿಲ್ಲ. ಹೀಗಾಗಿ ಹಲವು ಮನೆಗಳಲ್ಲಿ ಶ್ವಾನಗಳನ್ನು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅವುಗಳ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸುವ ಮತ್ತು ಆರೋಗ್ಯಕರವಾಗಿರಲು ಮನೆ ಮಂದಿ ಯತ್ನಿಸುತ್ತಾರೆ. ಆದರೆ ಪ್ರಾಣಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಏನು ಮಾಡಬೇಕೆಂದು ಹಲವರಿಗೆ ತಿಳಿದಿರದ ವಿಷಯ. ಸೂಕ್ತ ವೈದ್ಯರಲ್ಲಿ ಕೊಂಡೊಯ್ಯಬಹುದಾದರೂ ಕೆಲವೊಂದು ಆರ್ಯುವೇದ ಮೂಲಿಕೆಗಳು ಸಹ ಪ್ರಾಣಿಗಳ ಆರೈಕೆಗೆ ನೆರವಾಗುತ್ತವೆ. ಅಶ್ವಗಂಧ, ಬೇವು ಮೊದಲಾದವುಗಳು ಸಾಕುಪ್ರಾಣಿಗಳ ಆರೈಕೆಗೆ ರಾಮಬಾಣಬಾಣವಾಗಿದೆ. ಅಶ್ವಗಂಧ (Ashwagandha) ಮತ್ತು ಬೇವು (Neem)ನಾಯಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ತಿಳಿಯೋಣ..
ಅಶ್ವಗಂಧ ಆರ್ಯುವೇದ (Ayurveda)ದಲ್ಲಿಯೇ ಉನ್ನತ ಸ್ಥಾನವನ್ನು ಹೊಂದಿರುವ ಸಸ್ಯ. ಮನುಷ್ಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳಲ್ಲಿ ಅಶ್ವಗಂಧವನ್ನು ಬಳಸಲಾಗುತ್ತದೆ. ಅಶ್ವಗಂಧ ಸೇವಿಸುವುದರಿಂದ ಮಾನಸಿಕ ಒತ್ತಡ ನಿವಾರಣೆ, ಮೆದುಳಿನ ಸವೆತ, ನಿದ್ದೆ (Sleep)ಯ ಕೊರತೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗೆಯೇ ಶ್ವಾನಗಳ ಆರೋಗ್ಯಕ್ಕೂ ಅಶ್ವಗಂಧವನ್ನು ಬಳಸಬಹುದಾಗಿದೆ. ಅಶ್ವಗಂಧವು ಬ್ಯಾಕ್ಟೀರಿಯಾ (Bacteria) ವಿರೋಧಿ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಶ್ವಾನದ ದೇಹದಲ್ಲಿರುವ ಉಣ್ಣಿ ಮತ್ತು ಜಿಗಣೆಗಳನ್ನು ನೈಸರ್ಗಿಕ ಮತ್ತು ಸುರಕ್ಷಿತ ರೀತಿಯಲ್ಲಿ ಹಿಮ್ಮೆಟ್ಟಿಸುತ್ತದೆ.
undefined
#InternationalDogsDay: ನಟಿ ಮಣಿಯರ ನಾಯಿ ಪ್ರೀತಿ
ಅಶ್ವಗಂಧದಲ್ಲಿ ಪ್ರಾಣಿಗಳನ್ನು ಶಾಂತಗೊಳಿಸುವ ಗುಣಲಕ್ಷಣಗಳಿದ್ದು, ಇದು ವಿವಿಧ ಅನಾರೋಗ್ಯವನ್ನು ಹೋಗಲಾಡಿಸುತ್ತದೆ. ನಾಯಿಗಳಲ್ಲಿರುವ ಭಯ ಅಥವಾ ಆತಂಕವನ್ನು ಹೋಗಲಾಡಿಸಲು ಸಹಾಯ (Help) ಮಾಡುತ್ತದೆ. ಅಶ್ವಗಂಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸುತ್ತದೆ: ನಾಯಿಗಳ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಶ್ವಗಂಧ ಉರಿಯೂತದ ನೋವನ್ನು ನಿವಾರಿಸುತ್ತದೆ. ಸಾಕುಪ್ರಾಣಿಗಳಲ್ಲಿ ಕಂಡು ಬರುವ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳಲ್ಲಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಚರ್ಮದ ಸೋಂಕುಗಳು, ಅಲರ್ಜಿಗಳು, ಚರ್ಮದ ತುರಿಕೆಗಳನ್ನು ನೈಸರ್ಗಿಕವಾಗಿ ಹೋಗಲಾಡಿಸುತ್ತದೆ. ನರ ಮತ್ತು ಹೃದಯರಕ್ತನಾಳದ ವ್ಯವಸ್ಥೆಗಳ ಸಾಮಾನ್ಯ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ. ಒಟ್ಟಾರೆ ಆರ್ಯುವೇದದಲ್ಲಿ ಹೆಚ್ಚಿನ ಮಹತ್ವ ಹೊಂದಿರುವ ಅಶ್ವಗಂಧವು ನಾಯಿಯ ಒಟ್ಟಾರೆ ಆರೋಗ್ಯವನ್ನು ನಿಯಂತ್ರಣದಲ್ಲಿಡುತ್ತದೆ.
ಸುಶಾಂತ್ ಸಿಂಗ್ ಪ್ರೀತಿಯ ಶ್ವಾನ ಈಗ ಎಲ್ಲಿದೆ? ಏನು ಮಾಡುತ್ತಿದೆ?
ಆರ್ಯುವೇದ ಜಗತ್ತಿನಲ್ಲಿ, ಬೇವು ಒಂದು ಜನಪ್ರಿಯವಾಗಿರುವ ಔಷಧಿ ಸಸ್ಯವಾಗಿದೆ. ಇದು ಸುಮಾರು 5000 ವರ್ಷಗಳ ಹಿಂದಿನ ಸಾಂಪ್ರದಾಯಿಕ ಔಷಧಿಯಾಗಿದೆ. ಬೇವು ಪರಿಣಾಮಕಾರಿಯಾದ ಆ್ಯಂಟಿ ವೈರಲ್ ಮತ್ತು ಬ್ಯಾಕ್ಟಿರೀಯಾ ವಿರೋಧಿಯಾಗಿ ಕೆಲಸ ಮಾಡುತ್ತದೆ. ಶ್ವಾನಗಳಿಗೂ ಬೇವಿನ ರಸ, ಎಣ್ಣೆ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತದೆ. ಬೇವು ನೈಸರ್ಗಿಕ ಕೀಟನಾಶಕ ಮತ್ತು ಕೀಟ ನಿವಾರಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾನಗಳ ದೇಹದಲ್ಲಿರುವ ಉಣ್ಣಿ, ಜಿಗಣೆಗಳು, ಸೊಳ್ಳೆಗಳು ಮತ್ತು ಇತರ ಕೀಟಗಳ ವಿರುದ್ಧ ಕೆಲಸ ಮಾಡುತ್ತದೆ.
ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶೀತ, ಡೆಂಗ್ಯೂ ಮತ್ತು ಮಲೇರಿಯಾದಂತಹ ವಿವಿಧ ರೋಗಗಳ ವಿರುದ್ಧ ಹೋರಾಡುತ್ತದೆ. ಇದಲ್ಲದೆ, ವಿವಿಧ ರೀತಿಯ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಅದರ ಸಾಮರ್ಥ್ಯವು ನಾಯಿಯನ್ನು ರೋಗಗಳಿಂದ ರಕ್ಷಿಸುತ್ತದೆ.
ಬೇವಿನ ಆ್ಯಂಟಿಫಂಗಲ್ ಗುಣಲಕ್ಷಣಗಳು, ನಾಯಿಯ ಚರ್ಮವನ್ನು ರಿಂಗ್ ವರ್ಮ್‌ಗಳು, ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಬೇವು ಉತ್ತಮ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಬೇವು ಸ್ವತಂತ್ರ ರಾಡಿಕಲ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಹಲವಾರು ಆ್ಯಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿದೆ. ಸ್ವತಂತ್ರ ರಾಡಿಕಲ್‌ಗಳು ಕಣ್ಣಿನ ಅಸ್ವಸ್ಥತೆಗಳು, ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್, ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.