ವಿಶ್ವ ತಂಬಾಕು ರಹಿತ ದಿನ: ಧೂಮಪಾನ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ? ಇಲ್ಲಿದೆ ಮಾಹಿತಿ

By Mahmad Rafik  |  First Published Jun 1, 2024, 3:46 PM IST

ಯುವಕರನ್ನು ಸಹ ತಂಬಾಕು ಉತ್ಪನ್ನ ಬಳಸದಂತೆ ಜಾಗೃತಗೊಳಿಸೋದು ಈ ದಿನದ ಉದ್ದೇಶವಾಗಿದೆ. ತಂಬಾಕು ಉದ್ಯಮದ ಮಾರುಕಟ್ಟೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. 


ಬೆಂಗಳೂರು: ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಣೆ ಮಾಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ಸೇವನೆಯ (World Health Organization) ಅಪಾಯವನ್ನು ಜಾಗೃತಗೊಳಿಸಲು ಮತ್ತು ಬಳಕೆ ಪ್ರಮಾಣ ತಗ್ಗಿಸುವ ಗುರಿಯೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಈ ದಿನ ಆಚರಣೆ ಮಾಡಲಾಗುತ್ತದೆ. ಈ ವರ್ಷ ಮಕ್ಕಳನ್ನು ತಂಬಾಕು ಉತ್ಪನ್ನಗಳಿಂದ ರಕ್ಷಣೆ ಮಾಡುವ ಥೀಮ್‌ (Protecting Children from Tobacco Industry Interference) ಅಡಿಯಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಣೆ ಮಾಡಲಾಗುತ್ತದೆ. ಯುವಕರನ್ನು ಸಹ ತಂಬಾಕು ಉತ್ಪನ್ನ ಬಳಸದಂತೆ ಜಾಗೃತಗೊಳಿಸೋದು ಈ ದಿನದ ಉದ್ದೇಶವಾಗಿದೆ. ತಂಬಾಕು ಉದ್ಯಮದ ಮಾರುಕಟ್ಟೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. 

ಆರೋಗ್ಯಕರ ಸಮಾಜದ ಸೃಷ್ಟಿಗೆ WHO ಕರೆ

Latest Videos

undefined

ಮನೆಯ ಸದಸ್ಯರು ಅಥವಾ ಸುತ್ತಮುತ್ತಲಿನ ಜನರು ಧೂಮಪಾನ ಮಾಡುತ್ತಿದ್ದರೆ ಇದು ಮಕ್ಕಳು ಮತ್ತು ಹದಿಹರೆಯದ ಯುವಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹದೊಂದು ವ್ಯವಸ್ಥೆ ಅಥವಾ ಸಮಾಜ ಧೂಮಪಾನಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದಂದು ಮಕ್ಕಳನ್ನು ವ್ಯಸನದಿಂದ ರಕ್ಷಿಸಿ ಆರೋಗ್ಯಕರ ಸಮಾಜವನ್ನು ಸೃಷ್ಟಿಸಲು ಕರೆ ನೀಡುವುದು ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶವಾಗಿದೆ. ಈ ಮೂಲಕ ಮಕ್ಕಳಿಗೆ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ವಿಶ್ವಸಂಸ್ಥೆ ಕರೆ ನೀಡಿದೆ. 

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಅವರಿಗಾಗಿ ಆರೋಗ್ಯಕರ ಭವಿಷ್ಯ ಮತ್ತು ಸಮಾಜ ಸೃಷ್ಟಿಸುವ ಅನಿವಾರ್ಯತೆ ಇದೆ. ಆರೋಗ್ಯಕರ ಸಮಾಜದ ಸೃಷ್ಟಿಸಬೇಕಾದ್ರೆ ಮಕ್ಕಳಿಗೆ ಧೂಮಪಾನ ಸೇವನೆಯಿಂದ ದೇಹದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಬೇಕು.  

ಧೂಮಪಾನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು

1.ಹೃದಯರಕ್ತನಾಳದ ವ್ಯವಸ್ಥೆ- Cardiovascular System: ಧೂಮಪಾನ ಸೇವನೆ ಹೃದಯಾಘಾತ, ಪಾರ್ಶ್ವವಾಯು ಅಪಾಯದಮಟ್ಟವನ್ನು ಹೆಚ್ಚಿಸುತ್ತದೆ. ಕಿರಿದಾದ ರಕ್ತನಾಳಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

2.ಜೀರ್ಣಾಂಗ ವ್ಯವಸ್ಥೆ- Digestive System: ಹೊಟ್ಟೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಧೂಮಪಾನ ಕಾರಣವಾಗಬಹುದು. ಕರುಳಿನ ಭಾಗದಲ್ಲಿ ಹುಣ್ಣುಗಳು ಉಂಟಾಗಿ ಇಡೀ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆಸಿಡ್ ರಿಫ್ಲಕ್ಸ್‌ನಂತಹ ಅಪಾಯಗಳು ಉಂಟಾಗಬಹುದು.

3.ಚರ್ಮದ ಆರೋಗ್ಯ- Skin Health: ಧೂಮಪಾನದ ಸೇವನೆ ಚರ್ಮದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಚರ್ಮ ಬೇಗೆ ಸುಕ್ಕುಗಟ್ಟುತ್ತದೆ. ಚರ್ಮ ಕಾಂತಿ ಕಳೆದುಕೊಂಡು ಬೇಗ ವಯಸ್ಸಾದವರಂತೆ ಕಾಣಿಸಬಹುದು. ಕೆಲವು ಪ್ರಕರಣಗಳಲ್ಲಿ ಚರ್ಮದ ಕ್ಯಾನ್ಸರ್‌  ಉಂಟಾಗುವ ಅಪಾಯ ಇರುತ್ತದೆ. 

4.ಸಂತಾನೋತ್ಪತ್ತಿ ವ್ಯವಸ್ಥೆ- Reproductive System: ಸಂತಾನೋತ್ಪತ್ತಿ ಫಲವತ್ತತೆ ಕ್ಷೀಣಿಸುವಿಕೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಗರ್ಭಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಅತಿಯಾದ ಧೂಮಪಾನದಿಂದ ಉದ್ಭವಿಸುತ್ತವೆ.

5.ಬಾಯಿಯ ಆರೋಗ್ಯ- Oral Health: ಧೂಮಪಾನ ಮಾಡೋರಲ್ಲಿ ಬಾಯಿಯ ಕ್ಯಾನ್ಸರ್, ವಸಡು ಕಾಯಿಲೆ, ಹಲ್ಲು ಉದುರುವಿಕೆ, ದುರ್ವಾಸನೆ, ಮತ್ತು ಹಲ್ಲುಗಳ ಕಲೆ ಅಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. 

6.ದೃಷ್ಟಿ- Vision: ಧೂಮಪಾನ ಚಟದಿಂದ ಕಣ್ಣಿನ ಪೊರೆಯುಂಟಾಗಿ ದೃಷ್ಟಿ ಸಸಮಸ್ಯೆ  ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನ ಹೆಚ್ಚಿದ ಅಪಾಯ ಉಂಟಾಗಬಹುದು. ಇದು ಕುರುಡುತನಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. 

7.ಪ್ರತಿರಕ್ಷಣಾ ವ್ಯವಸ್ಥೆ- Immune System: ಧೂಮಪಾನದಿಂದ ರೋಗ ನಿರೋಧಕ ಶಕ್ತಿ ಹಂತ ಹಂತವಾಗಿ ಕ್ಷೀಣಿಸುತ್ತಾ ಹೋಗುತ್ತದೆ. ಇದರಿಂದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಂಡ ಸೋಂಕುಗಳ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಸಣ್ಣ ಪುಟ್ಟ ಕಾಯಿಲೆಗಳು ಬೇಗ ಗುಣಮುಖವಾಗಲ್ಲ.

8.ಮಾನಸಿಕ ಆರೋಗ್ಯ- Mental Health:ಧೂಮಪಾನ ವ್ಯಸನಿಗಳಲ್ಲಿ ಮಾನಸಿಕ ಖಿನ್ನತೆ ಕಾಣಿಸಿಕೊಳ್ಳೋದರ ಜೊತೆಗೆ ಜ್ಞಾಪಕ ಶಕ್ತಿ ಕುಂದುತ್ತದೆ. ಇದೆಲ್ಲದರಿಂದ ಮಾನಸಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಆರೋಗ್ಯಕರ ಭವಿಷ್ಯಕ್ಕಾಗಿ ಶ್ರಮಿಸಬೇಕು

ಧೂಮಪಾನ ಎಂಬ ಚಟ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಧೂಮಪಾನದಿಂದ ಆಗುವ ಅಪಾಯಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ಕೆಲಸವನ್ನು ಪೋಷಕರು ಮಾಡಬೇಕು. ಪ್ರತಿಯೊಬ್ಬರಿಗೂ ಆರೋಗ್ಯಕರ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. 

click me!