ಇಯರ್‌ ಬಡ್ಸ್‌ ಅತಿಯಾದ ಬಳಕೆ: ಯುವಕನಿಗೆ ಕಿವುಡು!

By Kannadaprabha News  |  First Published Jun 3, 2023, 8:03 AM IST

ಅತಿಯಾಗಿ ಇಯರ್‌ ಬಡ್ಸ್‌ ಬಳಸಿದ್ದರಿಂದ 18 ವರ್ಷದ ಯುವಕನೊಬ್ಬನ ಕಿವಿಗಳು ಶ್ರವಣ ಸಾಮರ್ಥ್ಯವನ್ನೇ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.


ಗೋರಖಪುರ: ದಿನಪೂರ್ತಿ ಮ್ಯೂಸಿಕ್ (Music) ಕೇಳೋಕೇನೋ ಚೆನ್ನಾಗಿರುತ್ತೆ. ಆದ್ರೆ ಫುಲ್ ಡೇ ಕಿವಿಗೆ ಇಯರ್ ಪೋನ್ ತಲೆ ಮೇಲೆ ಹೆಡ್ ಫೋನ್ (Headphone) ಸಿಲುಕಿಸಿಟ್ರೆ ಏನ್ ಚೆನ್ನಾಗಿರುತ್ತೆ ಹೇಳಿ. ಇದು ಇವತ್ತಿನ ಟ್ರೆಂಡ್ ಕಣ್ರೀ ಅನ್ಬೋದು ನೀವು. ಆದ್ರೆ ಇದ್ರಿಂದ ಶಾಶ್ವತವಾಗಿ ಕಿವಿ ಕೇಳದಿರೋ ಸಮಸ್ಯೆ (Problem)ನೂ ಉಂಟಾಗ್ಬೋದು. ಅತಿಯಾಗಿ ಇಯರ್‌ ಬಡ್ಸ್‌ ಬಳಸಿದ್ದರಿಂದ 18 ವರ್ಷದ ಯುವಕನೊಬ್ಬನ ಕಿವಿಗಳು ಶ್ರವಣ ಸಾಮರ್ಥ್ಯವನ್ನೇ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ. ಸುದೈವವಶಾತ್‌ ಇದೀಗ ಯುವಕನಿಗೆ ಯಶಸ್ವಿಯಾಗಿ ಶ್ರವಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮತ್ತೆ ಯುವಕನ ಕಿವಿಗಳು ಮೊದಲಿನಂತೆ ಕೇಳುವ ಸಾಮರ್ಥ್ಯ ಪಡೆದುಕೊಂಡಿವೆ.

ಅತಿಯಾಗಿ ಇಯರ್‌ ಬಡ್ಸ್‌ ಬಳಸುವುದರಿಂದ ಕಿವಿಗಳು ಬಹಳ ಕಾಲ ಗಾಳಿ ಅನುಭವಿಸದೆ ಬಂದ್‌ ಆಗುತ್ತವೆ. ಆಗ ಕಿವಿಯಲ್ಲಿ ತೇವಾಂಶ ಉಂಟಾಗಿ ಅದು ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಕಾರಣವಾಗಿ ಇದರಿಂದ ಕಿವಿ ಕೇಳದ ಹಾಗೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.  ಅಲ್ಲದೆ, ಒಬ್ಬರು ಬಳಸಿದ ಇಯರ್‌ಫೋನ್‌ಗಳನ್ನು ಇನ್ನೊಬ್ಬರು ಬಳಸುವುದು ಒಳ್ಳೆಯದಲ್ಲ. ಏಕೆಂದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅಲ್ಲದೆ, ಕಾಲಕಾಲಕ್ಕೆ ಇಯರ್‌ಫೋನ್‌ ಬಳಕೆಗೆ ಬ್ರೇಕ್‌ ನೀಡಬೇಕು. ಕಿವಿಯನ್ನು ಹಾಗೂ ಇಯರ್‌ ಬಡ್‌ ಅನ್ನು ಆಗಾಗ ಸ್ವಚ್ಛಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Latest Videos

undefined

ಟ್ಯಾಗ್‌ನ ವೈರ್‌ಲೆಸ್‌ ಇಯರ್‌ಬಡ್‌: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!

ಕಿವಿಯೇ ಕೇಳಲ್ಲ ಹುಷಾರ್.
ಹೈ ವಾಲ್ಯೂಮ್ ಇಟ್ಕೊಂಡು ಸುತ್ತಲಿನ ಪರಿವೆಯೇ ಇಲ್ಲದೆ ಮ್ಯೂಸಿಕ್ (Music) ಕೇಳ್ತಾ ಇದ್ರೆ ಏನ್ ಮಜಾ ಗೊತ್ತಾ ? ಯಾವ ಟೆನ್ಶನ್ ಕೂಡಾ ಇರಲ್ಲ, ಮೈಂಡ್ ಫುಲ್ ರಿಲ್ಯಾಕ್ಸ್ ಆಗುತ್ತೆ ಅನ್ನೋರು ಹಲವರು. ಆದರೆ ಸತತವಾಗಿ ಇಯರ್ ಪೋನ್ (Earphone), ಹೆಡ್ ಫೋನ್  ಹಾಕ್ಕೊಳ್ತಿದ್ರೆ ಕಿವುಡತನದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಶ್ರವಣ ದೋಷ ಅಥವಾ ಕಿವುಡುತನವೆಂದರೆ ಒಬ್ಬ ವ್ಯಕ್ತಿ, ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸ್ಥಿತಿ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗ್ತಿದೆ.  ಹೀಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಶ್ರವಣ ದಿನವನ್ನೂ ಆಚರಿಸುತ್ತಿದೆ.

ಕಳೆದ ಕೆಲವು ದಶಕಗಳಲ್ಲಿ ಹೆಡ್‌ಫೋನ್‌ಗಳಿಂದಾಗಿ ಕಿವುಡುತನದ ಸಮಸ್ಯೆ ಗಮನಾರ್ಹವಾಗಿ ಹೆಚ್ಚಿದೆ. ಹೆಡ್‌ಫೋನ್‌ಗಳ ಅಸಮರ್ಪಕ ಬಳಕೆಯು ಶ್ರವಣ ನಷ್ಟ,  ಹೆಚ್ಚಿದ ಧ್ವನಿ ಸಂವೇದನೆ, ಸಾಮಾನ್ಯ ಆಯಾಸ, ಅಸ್ವಸ್ಥತೆ, ದೌರ್ಬಲ್ಯ, ಕಿರಿಕಿರಿ ಮತ್ತು ಕಿವಿ ಪ್ರದೇಶದ ಸುತ್ತಲೂ ಮರಗಟ್ಟುವಿಕೆ ಸೇರಿದಂತೆ ಹಲವಾರು ಕಿವಿ, ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಹೆಡ್‌ಫೋನ್‌ ಬಳಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಹೆಡ್‌ಫೋನ್‌ಗಳನ್ನು ಬಳಸುವಾಗ ಶ್ರವಣ ನಷ್ಟವನ್ನು ಕಡಿಮೆ ಮಾಡಲು ವಿವಿಧ ವಿಧಾನಗಳಿವೆ. 

ಇಯರ್ ಫೋನ್ ಮೋಹದಿಂದಾಗಿ ಪ್ರಾಣವನ್ನೇ ಕಳೆದುಕೊಂಡ ಯುವಕ!

ಕಿವಿಯ ಮೇಲಿರುವ ಹೆಡ್‌ಫೋನ್‌ಗಳನ್ನು ಬಳಸಿ
ಯಾವತ್ತೂ ಕಿವಿಯ ಮೇಲಿರುವ ಹೆಡ್‌ಫೋನ್‌ಗಳನ್ನು ಬಳಸಿ. ಇನ್ಸರ್ಟ್ ಇಯರ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ವಿಶೇಷವಾಗಿ ಬಿಗಿಯಾಗಿ ಹೊಂದಿಕೊಳ್ಳುವ ಇಯರ್ ಫೋನ್‌ಗಳನ್ನು ಬಳಸಬೇಡಿ. ಕಿವಿಯ ಮೇಲೆ ಹೆಡ್‌ಫೋನ್‌ಗಳನ್ನು ಬಳಸುವುದರಿಂದ ಶ್ರವಣೇಂದ್ರಿಯವನ್ನು ನೇರವಾಗಿ ಸಂಪರ್ಕಿಸುವ ಧ್ವನಿಯ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳಇಯರ್ ಬಡ್‌ಗಳನ್ನು ಬಳಸುವುದರಿಂದ 7-8 ಡೆಸಿಬಲ್‌ಗಳಷ್ಟು ಶಬ್ದ ಹೆಚ್ಚಾಗುತ್ತದೆ. ಇದಲ್ಲದೆ, ಕಿವಿಯ ಮೇಲಿರುವ ಹೆಡ್‌ಫೋನ್‌ಗಳು ಧ್ವನಿಯನ್ನು ಕಿವಿಯಾದ್ಯಂತ ಹೆಚ್ಚು ಸಮವಾಗಿ ಹರಡುತ್ತವೆ ಮತ್ತು ಕಡಿಮೆ ಹಾನಿಯನ್ನುಂಟುಮಾಡುತ್ತವೆ.  

click me!