Health Tips: ಕೊಲೆಸ್ಟ್ರಾಲ್ ಹೆಚ್ಚಾದ್ರೆ ರಾತ್ರಿ ನಿದ್ರೆಯಲ್ಲಿ ಕಾಡುತ್ತೆ ಈ ಸಮಸ್ಯೆ

By Suvarna NewsFirst Published Feb 1, 2024, 7:00 AM IST
Highlights

ಸೈಲೆಂಟ್ ಕಿಲ್ಲರ್ ಎಂದೇ ಕೊಲೆಸ್ಟ್ರಾಲನ್ನು ಕರೆಯಲಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾಗಿದ್ದು ಗೊತ್ತೇ ಆಗೋದಿಲ್ಲ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ನಮ್ಮ ದೇಹ ಕೆಲ ಮುನ್ಸೂಚನೆಯನ್ನು ನಮಗೆ ಮೊದಲೇ ನೀಡಿರುತ್ತೆ. ಅದ್ರಲ್ಲಿ ಇದೂ ಒಂದು.

ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿದೆ ಎಂಬುದು ನಿಮಗೆ ಅನೇಕ ಬಾರಿ ತಿಳಿಯೋದೇ ಇಲ್ಲ. ಯಾಕೆಂದ್ರೆ ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸೋದಿಲ್ಲ. ಆದ್ರೆ ಹೃದ್ರೋಗ, ಪರಿಧಮನಿಯ ಕಾಯಿಲೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ತಜ್ಞರ ಪ್ರಕಾರ, ಕೊಲೆಸ್ಟ್ರಾಲ್ (Cholesterol ) ನಿಮ್ಮ ಯಕೃತ್ತು ಉತ್ಪಾದಿಸುವ ಮೇಣದಂಥ, ಕೊಬ್ಬಿನಂತಹ ವಸ್ತು. ಇದು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಹೃದಯಾಘಾತ (Heart Attack) ಅಥವಾ ಸ್ಟ್ರೋಕ್‌ (Stroke)ನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೂಕ ಏರಿಕೆಯಾದಾಗ ಹಾಗೂ ದೇಹದಲ್ಲಿ ಕೊಬ್ಬು ಕಾಣಿಸಿಕೊಂಡಾಗ ಜನರು ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಎಂದು ಭಾವಿಸುತ್ತಾರೆ. ಆದ್ರೆ ಇವು ಮಾತ್ರವಲ್ಲ, ಇನ್ನೂ ಕೆಲ ಅಸ್ವಸ್ಥೆತಯಿಂದ ನೀವು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎಂಬುದನ್ನು ಗುರುತಿಸಬಹುದು. ಅದ್ರಲ್ಲಿ ಮುಖ್ಯವಾಗಿದ್ದು ಕಾಲು. 

Latest Videos

ದೇಹದ ತೂಕಕ್ಕೆ ತಕ್ಕಂತೆ ನೀರು ಕುಡಿದ್ರೆ, ವೈಟ್ ಲಾಸ್ ಮಾಡ್ಕೊಳ್ಳೋದು ತುಂಬಾ ಈಝಿ

ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳು ಪೆರಿಫೆರಲ್ ಆರ್ಟರಿ ಡಿಸೀಸ್ ಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ಕಿರಿದಾದ ಅಪಧಮನಿಗಳು ಕೈ ಅಥವಾ ಕಾಲುಗಳಿಗೆ ರಕ್ತದ ಹರಿವನ್ನು ಕಡಿಮೆಗೊಳಿಸಿದಾಗ ಸಂಭವಿಸುತ್ತದೆ. ಪೆರಿಫೆರಲ್ ಆರ್ಟರಿ ಡಿಸೀಸ್ ರೋಗ ನಿರ್ಣಯ ಮಾಡೋದು ಕಷ್ಟ. ಅದ್ರ ಲಕ್ಷಣಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ವಯಸ್ಸಾದ ಕಾರಣ ಈ ಸಮಸ್ಯೆ ಕಾಡ್ತಿದೆ ಎಂದು ಭಾವಿಸುತ್ತೇವೆ. ಕೆಲ ಲಕ್ಷಣಗಳನ್ನು ವಿಶೇಷವಾಗಿ ರಾತ್ರಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. 

ತಂಪಾಗುವ ಕಾಲು : ಕೊಲೆಸ್ಟ್ರಾಲ್ ಹೆಚ್ಚಾದಲ್ಲಿ, ಬೇಸಿಗೆ ಇರಲಿ ಇಲ್ಲ ಯಾವುದೇ ಸಮಯವಿರಲಿ, ಪಾದಗಳು ಅಥವಾ ಕಾಲುಗಳು  ತಂಪಾಗಿರುತ್ತದೆ. ಇದು ನೀವು ಪೆರಿಫೆರಲ್ ಆರ್ಟರಿ ಡಿಸೀಸ್ ಅನ್ನು ಹೊಂದಿರುವ ಎಚ್ಚರಿಕೆಯಾಗಿರಬಹುದು. ಇದಕ್ಕೆ ಪೆರಿಫೆರಲ್ ಆರ್ಟರಿ ಡಿಸೀಸ್ ಒಂದೇ ಕಾರಣವಲ್ಲವಾದ್ರೂ ನಿಮ್ಮ ಪಾದಗಳು ಸದಾ ತಣ್ಣಗಿದ್ದರೆ ವೈದ್ಯರನ್ನು ಒಮ್ಮೆ ಸಂಪರ್ಕಿಸಿ.

ಚರ್ಮ – ಕೂದಲಿನ ಬಣ್ಣ ಬದಲಾವಣೆ : ಪೆರಿಫೆರಲ್ ಆರ್ಟರಿ ಡಿಸೀಸ್ ನಲ್ಲಿ ನಿಮ್ಮ ಚರ್ಮದ ಹಾಗೂ ಕಾಲಿನ ಕೂದಲಿನ ಬಣ್ಣದಲ್ಲಿ ಬದಲಾವಣೆಗಳಾಗ್ತಿರುತ್ತವೆ.

ಕಾಲು ನೋವು :  ಕಾಲು ನೋವು ಪೆರಿಫೆರಲ್ ಆರ್ಟರಿ ಡಿಸೀಸ್ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಕಾಲುಗಳಲ್ಲಿನ ಅಪಧಮನಿಗಳು ನಿರ್ಬಂಧಿಸಲ್ಪಟ್ಟಾಗ  ಸಾಕಷ್ಟು ಆಮ್ಲಜನಕ, ರಕ್ತವು ನಿಮ್ಮ ಕೆಳ ಬೆನ್ನನ್ನು ತಲುಪುವುದಿಲ್ಲ. ಇದು ನಿಮ್ಮ ಕಾಲುಗಳ ನೋವಿಗೆ ಕಾರಣವಾಗುತ್ತದೆ.  ಮೊಣಕಾಲಿನಿಂದ ತೊಡೆ ಅಥವಾ ಪೃಷ್ಠದವರೆಗೆ ನೋವು ಕಾಣಿಸಿಕೊಳ್ಳುತ್ತದೆ. ವಾಕಿಂಗ್, ಜಾಗಿಂಗ್ ಮತ್ತು ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಾಗುತ್ತದೆ.  

ರಾತ್ರಿ ಕಾಲು ನೋವು : ರಾತ್ರಿ ಮಲಗಿದ್ದಾಗ ಕಾಣಿಸಿಕೊಳ್ಳುವ ಕಾಲಿನ ಸೆಳೆತ ಕೊಲೆಸ್ಟ್ರಾಲ್ ಹೆಚ್ಚಳದ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ.  ಮುಂಗಾಲಿನಲ್ಲಿ ಇಲ್ಲವೆ ಕಾಲ್ಬೆರಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  

ಕಾಲಿನ ಹುಣ್ಣು : ಕಾಲು ಅಥವಾ ಪಾದದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಹುಣ್ಣುಗಳು ಮತ್ತೆ ಮತ್ತೆ ಮರುಕಳಿಸಬಹುದು. ಕಳಪೆ ರಕ್ತಪರಿಚಲನೆಯಿಂದಾಗಿ ಈ ಸ್ಥಿತಿಯು ಸಾಮಾನ್ಯವಾಗಿ ಸಂಭವಿಸುತ್ತದೆ.

ಚಳಿ ಅಂತ ಹೊದ್ದು ಮಲಗುವ ಬದಲು ವಾಕಿಂಗ್ ಮಾಡಿ, ಸ್ಟ್ರಾಂಗ್ ಆಗಿ

ಅಧಿಕ ಕೊಲೆಸ್ಟ್ರಾಲ್ ಅಥವಾ ಪಿಎಡಿ ತಡೆಗಟ್ಟಲು ಏನು ಮಾಡ್ಬೇಕು? : ಹೆಚ್ಚಿನ ಫೈಬರ್ ಆಹಾರವನ್ನು ಸೇವನೆ ಮಾಡಬೇಕು.  ಸ್ಯಾಚುರೇಟೆಡ್ ಕೊಬ್ಬು, ಉಪ್ಪು ಮತ್ತು ಸಕ್ಕರೆ ಸೇರಿಸಿದ ಆಹಾರವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಆಹಾರ ಕ್ರಮದಲ್ಲಿ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮತ್ತು ಯೋಗ ಮಾಡುವುದಲ್ಲದೆ, ಧೂಮಪಾನ, ಮದ್ಯಪಾನ ತ್ಯಜಿಸುವುದ್ರಿಂದ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುವುದಲ್ಲದೆ ವೈದ್ಯರಿಂದ ಪಡೆದ ಸಲಹೆಯನ್ನು ಪಾಲಿಸಬೇಕು. 

click me!