ದಸರಾದಲ್ಲಿ ಆನೆ ಸಗಣಿ ತುಳಿದ ಜನ, ಏನಿದರ ಲಾಭ?

By Roopa HegdeFirst Published Oct 14, 2024, 7:22 PM IST
Highlights

ಬ್ಲ್ಯಾಕ್ ಐವರಿ ಕಾಫಿ ಬಗ್ಗೆ ಎಲ್ಲರಿಗೂ ಗೊತ್ತು. ಆನೆ ಸಗಣಿಯಿಂದ ಹೊರಬರುವ ಬೀಜದಿಂದ ಕಾಫಿ ತಯಾರಿಸಲಾಗುತ್ತೆ.ಇದು ರುಚಿ ಅಂತ ಎಲ್ಲರೂ ಕುಡಿತಾರೆ. ಅದೇ ಆನೆ ಸಗಣಿ ಮೇಲೆ ಕಾಲಿಟ್ರೆ ಟ್ರೋಲ್‌ ಯಾಕೆ ಮಾಡ್ತಾರೆ? ಆನೆ ಸಗಣಿಯಿಂದ ಸಿಗೋ ಲಾಭ ಎಷ್ಟು ಗೊತ್ತಾ?

ಮೈಸೂರು ದಸರಾ (Mysore Dasara) ಸಂದರ್ಭದಲ್ಲಿ ಜಂಬೂಸವಾರಿ (jamboo savari) ಮಾತ್ರವಲ್ಲ ಆನೆ ಸಗಣಿ (Elephant dung) ಕೂಡ ಗಮನ ಸೆಳೆದಿದೆ. ದಾರಿ ಮಧ್ಯೆ ಬಿದ್ದಿರುವ ಆನೆ ಸಗಣಿಯನ್ನು ಜನರು ತುಳಿಯುತ್ತಿದ್ದಾರೆ. ಬರಿಗಾಲಿನಲ್ಲಿ ಆನೆ ಸಗಣಿಯನ್ನು ತಿಳಿಯುತ್ತಿರುವ ಜನರ ವಿಡಿಯೋ ವೈರಲ್ ಆಗಿದೆ. ಅನೇಕರು ಆನೆ ಸಗಣಿ ಮೇಲೆ ನಿಂತಿರುವುದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಈ ವಿಡಿಯೋ ಪೋಸ್ಟ್ ಮಾಡಿದ ಇನ್ಸ್ಟಾ ಖಾತೆಯಲ್ಲಿ, ಆನೆ ಸಗಣಿಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಬರೆಯಲಾಗಿದೆ. 

ಇದನು ನೋಡಿದ ನೆಟ್ಟಿಗರಿಂದ ಸಾಕಷ್ಟು ಕಮೆಂಟ್ ಬಂದಿದೆ. ಇದನ್ನು ಕೆಲವರು ಮೂಡನಂಬಿಕೆ ಎಂದಿದ್ದಾರೆ. ಮತ್ತೆ ಕೆಲವರು ಧರ್ಮದ ಹೆಸರಿನಲ್ಲಿ ಕಿತ್ತಾಡಿಕೊಂಡಿದ್ದಾರೆ. ಆನೆ ಸಗಣಿ ತುಳಿದಿರುವುದನ್ನು ಅನೇಕರು ಖಂಡಿಸಿದ್ದಾರೆ. ಆದ್ರೆ ಅದಕ್ಕೆ ಪ್ರತ್ಯುತ್ತರವನ್ನು ನೆಟ್ಟಿಗರೇ ನೀಡಿದ್ದಾರೆ. ಒಂಟೆ ಮೂತ್ರ ಸೇವನೆ ಮಾಡೋದು ಒಳ್ಳೆಯದು, ಆನೆ ಸಗಣಿಯಿಂದ ಹೊರಗೆ ಬರುವ ಕಾಫಿ ಬೀಜವನ್ನು ಕಾಫಿ ಮಾಡಿ ಕುಡಿಯೋದು ರುಚಿಕರ, ಆದ್ರೆ ಆನೆ ಸಗಣಿ ತುಳಿಯೋದು ಮಾತ್ರ ಕೆಟ್ಟದ್ದು ಅಲ್ವಾ ಎಂದಿದ್ದಾರೆ. 

Latest Videos

ದಿನಾ ಅಗಸೆ ಬೀಜ ತಿನ್ನೋದ್ರಿಂದ ಆಗೋ ಲಾಭ ಒಂದೆರಡಲ್ಲ!

ಸಗಣಿ ಎಂದಾಗ ನಮಗೆ ನೆನಪಾಗೋದು ಆಕಳ ಸಗಣಿ ಮಾತ್ರ. ಅದನ್ನು ಪವಿತ್ರವೆಂದು ಪರಿಗಣಿಸಲಾಗುವುದಲ್ಲದೆ, ಅದನ್ನು ಅನೇಕ ಕೆಲಸಕ್ಕೆ ಬಳಕೆ ಮಾಡಲಾಗುತ್ತದೆ. ಆದ್ರೆ ಆಸೆ ಸಗಣಿ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆನೆಗಳು ಪ್ರತಿದಿನ ಸಾಕಷ್ಟು ಆಹಾರವನ್ನು ತಿನ್ನುತ್ತವೆ.  200-250 ಕೆಜಿ ವಿವಿಧ ರೀತಿಯ ಸಸ್ಯಗಳ ಸೇವನೆ ಮಾಡುತ್ತದೆ. ನಂತ್ರ ಅದ್ರ ದೇಹದಿಂದ ಹೊರಬರುವ ಸಗಣಿ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ ಎಂದು ಭಾರತೀಯರು ಮಾತ್ರವಲ್ಲ ಆಫ್ರಿಕನ್ನರು ಕೂಡ ನಂಬುತ್ತಾರೆ. 

ಆನೆ ಸಗಣಿಯಿಂದಾಗುವ ಆರೋಗ್ಯ ಲಾಭ : ಆನೆ ಸಗಣಿ ಔಷಧೀಯ ಗುಣಗಳನ್ನು ಹೊಂದಿದೆ. ಆನೆ ಸಗಣಿ, ಮನುಷ್ಯನ ದೇಹದ ಶಾಖವನ್ನು ಕಡಿಮೆ ಮಾಡುತ್ತದೆ. ಕೆಲವು ಚರ್ಮದ ಸೋಂಕುಗಳನ್ನು ಇದು ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಜನರು ಬರಿಗಾಲಿನಲ್ಲಿ ಸಗಣಿ ಮೇಲೆ ನಿಲ್ಲುತ್ತಾರೆ. ಆನೆ ಸಗಣಿಯನ್ನು ದಕ್ಷಿಣ ಆಫ್ರಿಕಾದಲ್ಲಿ ತಲೆನೋವು, ಮೂಗಿನ ರಕ್ತಸ್ರಾವ ಮತ್ತು ಹೆರಿಗೆಯ ಸಮಯದಲ್ಲಿ ತಾಯಂದಿರಿಗೆ ಸಹಾಯ ಮಾಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಸಗಣಿಯ ಹೊಗೆಯನ್ನು ಉಸಿರಾಡುವುದು ತಲೆನೋವು, ಹಲ್ಲುನೋವುಗಳನ್ನು ನಿವಾರಿಸಲು ಮತ್ತು ಇತರ ನೋವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಮೂಗಿನ ರಕ್ತಸ್ರಾವ ಮತ್ತು ಸೈನಸ್ ಸಮಸ್ಯೆಯನ್ನು ಆನೆ ಸಗಣಿ ಹೊಗೆಯಿಂದ ಕಡಿಮೆ ಮಾಡಬಹುದು.

ಆನೆ ಸಗಣಿಯಿಂದ ಆಗುವ ಬೇರೆ ಪ್ರಯೋಜನ : 

ಸೊಳ್ಳೆ ನಿವಾರಕ : ಆನೆ ಸಗಣಿ, ಸೊಳ್ಳೆ ನಿವಾರಕವಾಗಿ ಕೆಲಸ ಮಾಡುತ್ತದೆ. ಒಣಗಿದ ಸಗಣಿಯನ್ನು ಬೆಳಗಿಸುವುದರಿಂದ, ಅದ್ರ ಹೊಗೆ ಇಡೀ ರಾತ್ರಿ ಸೊಳ್ಳೆಗಳನ್ನು ದೂರವಿಡುತ್ತದೆ. ಹಾಗಂತ ಆನೆ ಸಗಣಿ ವಾಸನೆ ಕೆಟ್ಟದಾಗಿರುವುದಿಲ್ಲ. ಸೊಳ್ಳೆ ಸ್ಪ್ರೇಗಿಂತ ಕಡಿಮೆ ಕಠೋರತೆಯನ್ನು ಇದು ಹೊಂದಿರುತ್ತದೆ. 

ಆನೆ ಸಗಣಿಯಿಂದ ಕಾಗದ ಉತ್ಪಾದನೆ : ಆನೆ ಸಗಣಿಯಿಂದ ಕಾಗದವನ್ನು ಉತ್ಪಾದನೆ ಮಾಡಬಹುದು. ಆನೆಯ ಸಗಣಿಯಲ್ಲಿರುವ ಫೈಬರ್‌ಗಳಿಂದ ಇದನ್ನು ಪಡೆಯಬಹುದು. ಆನೆ ಪ್ರತಿದಿನ 115 ಕಾಗದದ ಹಾಳೆಗಳನ್ನು ಉತ್ಪಾದಿಸುವಷ್ಟು ಸಗಣಿಯನ್ನು ಹೊರಹಾಕುತ್ತದೆ.   

ಬರಿಗಾಲಿನಲ್ಲಿ ವಾಹನ ಚಾಲನೆ ಎಷ್ಟು ಡೇಂಜರಸ್ ಅಂತ ಗೊತ್ತಾ?

ಗೊಬ್ಬರ : ಉಪಕಸುಬುದಾರರು ತಲೆಮಾರುಗಳಿಂದ ಆನೆ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ. ಆನೆ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಜೀರ್ಣಿಸಿಕೊಳ್ಳುವುದರಿಂದ, ಆನೆಯ ಸಗಣಿಯು ಅತ್ಯುತ್ತಮ ಮಿಶ್ರಗೊಬ್ಬರವನ್ನು ಮಾಡುತ್ತದೆ.  ಅರೆ ಜೀರ್ಣಗೊಂಡ ಎಲೆಗಳು, ಹುಲ್ಲು ಮತ್ತು ತೊಗಟೆ ಮತ್ತು ಹಣ್ಣುಗಳ ರಾಶಿ ಮಣ್ಣಿಗೆ ತುಂಬಾ ಒಳ್ಳೆಯದು.

click me!