Health Tips: ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ಮನೆ ಮದ್ದು

Published : Aug 11, 2022, 02:09 PM IST
Health Tips: ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ಮನೆ ಮದ್ದು

ಸಾರಾಂಶ

ರಾತ್ರಿ ಹಾಸಿಗೆ ಮೇಲೆ ಮಲಗ್ತಿದ್ದಂತೆ ಕೆಮ್ಮು ಶುರುವಾಗುತ್ತದೆ. ಇಡೀ ರಾತ್ರಿ ನಿದ್ರೆಯಿಲ್ಲದೆ ಒದ್ದಾಡ್ಬೇಕು. ಸಾಕಪ್ಪ ಸಾಕು ಎನ್ನುವಷ್ಟು ಹಿಂಸೆ ನೀಡುವ  ಈ ಕೆಮ್ಮಿಗೆ ಸಾಕಷ್ಟು ಮನೆ ಮದ್ದುಗಳಿವೆ.   

 ಮಳೆಗಾಲದಲ್ಲಿ ಅನಾರೋಗ್ಯ ಕಾಡುವುದು ಸಾಮಾನ್ಯ. ಪ್ರತಿಯೊಬ್ಬ ವ್ಯಕ್ತಿಯು ಜ್ವರ ಅಥವಾ ಶೀತದ ಸಮಸ್ಯೆ ಹೊಂದಿರ್ತಾನೆ. ಮಳೆಗಾಲದಲ್ಲಿ ಒಣ ಕೆಮ್ಮು ಕೂಡ ಹೆಚ್ಚಾಗಿ ಕಾಡುತ್ತದೆ. ಹಗಲಿನಲ್ಲಿ ಕಡಿಮೆಯಿರುವ ಈ ಕೆಮ್ಮು ರಾತ್ರಿಯಾಗ್ತಿದ್ದಂತೆ ಹೆಚ್ಚಾಗುತ್ತದೆ. ನಾವು ಹಾಸಿಗೆ ಮೇಲೆ ಮಲಗಿದಾಗ, ನಮ್ಮ ಬೆನ್ನಿನ ಭಾಗ ಹಾಸಿಗೆ ಮೇಲಿರುತ್ತದೆ. ಆಗ  ಗಂಟಲಿನ ಹಿಂಭಾಗದಲ್ಲಿ ಲೋಳೆಯು ಸಂಗ್ರಹವಾಗುತ್ತದೆ. ಇದು ಕೆಮ್ಮಿಗೆ ಕಾರಣವಾಗುತ್ತದೆ. ಕೆಮ್ಮು ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಗಂಟಲು ಅಥವಾ ಮೇಲ್ಭಾಗದ ಶ್ವಾಸನಾಳದಲ್ಲಿ ಅಡಚಣೆ ಅಥವಾ ಕಿರಿಕಿರಿಯುಂಟಾದಾಗ ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಮ್ಮು ಕಡಿಮೆ ಮಾಡಿಕೊಳ್ಳಲು ಜನರು ಅನೇಕ ಸಿರಪ್‌ಗಳನ್ನು ಕುಡಿಯುತ್ತಾರೆ. ಬಿಸಿನೀರನ್ನು ಸಹ ಕುಡಿಯತ್ತಾರೆ.  ಆದರೆ ಕೆಮ್ಮು ಮಾತ್ರ ಕಡಿಮೆ ಆಗೋದಿಲ್ಲ. ರಾತ್ರಿ ಕಿರಿಕಿರಿ ನೀಡುವ ಕೆಮ್ಮನ್ನು ಕೆಲವು ಸುಲಭ ಮನೆ ಮದ್ದಿನ ಮೂಲಕ ಕಡಿಮೆ ಮಾಡಬಹುದು. 

ರಾತ್ರಿ (Night) ಮಲಗುವಾಗ ನೀವು ತಲೆಯನ್ನು ಮೇಲೆತ್ತಿ ಮಲಗಬೇಕು. ಬಿಂದಿನ ಮೇಲೆ ತಲೆಯಿಟ್ಟು ಮಲಗಬೇಕು. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯನ್ನು (GERD) ಇದು ಕಡಿಮೆ ಮಾಡುತ್ತದೆ. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಗೆ ಸಂಬಂಧಿಸಿದ ಕೆಮ್ಮು ಸಾಮಾನ್ಯವಾಗಿ ಎದೆಯಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ. ಬೆನ್ನಿನ ಮೇಲೆ ಮಲಗಿದ್ರೆ ಇದು ಜಾಸ್ತಿಯಾಗುತ್ತದೆ.

ರಾತ್ರಿ ಕಾಡುವ ಕೆಮ್ಮಿ (Cough) ಗೆ ಮನೆ ಮದ್ದು : 

ಶುಂಠಿ (Ginger) ಮತ್ತು ಜೇನುತುಪ್ಪ : ಶುಂಠಿ ಮತ್ತು ಜೇನುತುಪ್ಪವು ಕೆಮ್ಮಿಗೆ ವರದಾನವಾಗಿದೆ.  ಈ ಎರಡರಲ್ಲೂ ಕೆಮ್ಮನ್ನು ಗುಣಪಡಿಸುವ ಗುಣವಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದನ್ನು 2-3 ದಿನಗಳವರೆಗೆ ಸೇವಿಸುವುದರಿಂದ ನಿಮ್ಮ ಕೆಮ್ಮು ದೂರವಾಗುತ್ತದೆ.  

ಕಪ್ಪು ಮೆಣಸು ಮತ್ತು ಜೇನುತುಪ್ಪ :  ಒಣ ಕೆಮ್ಮಿಗೆ ಕರಿಮೆಣಸು ಮತ್ತು ಜೇನುತುಪ್ಪ ಉತ್ತಮ ಔಷಧಿಯಾಗಿದೆ.. ಇದು ಹೆಚ್ಚು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.  

ಜೇನುತುಪ್ಪದೊಂದಿಗೆ ಚಹಾವನ್ನು ಕುಡಿಯಿರಿ : ಜೇನುತುಪ್ಪದೊಂದಿಗೆ ಬಿಸಿ ಟೀ ಲೋಳೆಯನ್ನು ಸಡಿಲಗೊಳಿಸುತ್ತದೆ. ಗಂಟಲಿನ ಸಮಸ್ಯೆ ಕಡಿಮೆ ಮಾಡುವ ಜೊತೆಗೆ ಗಂಟಲ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಿಡಮೂಲಿಕೆ ಚಹಾದಂತಹ ಕೆಫೀನ್ ಮುಕ್ತ ಚಹಾಕ್ಕೆ ಎರಡು ಟೀ ಚಮಚ ಜೇನುತುಪ್ಪವನ್ನು ಸೇರಿಸಿ. ಮಲಗುವ ಮುನ್ನ ಈ ಚಹಾವನ್ನು ಕುಡಿಯಿರಿ.  

ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗ್ಲ್ : ಬೆಚ್ಚಗಿನ ಉಪ್ಪು ನೀರನ್ನು ಗಂಟಲಿಗೆ ಹಾಕಿ ಬಾಯಿ ಮುಕ್ಕಳಿಸಿ. ಇದ್ರಿಂದ ಗಂಟಲು ನೋವು ಕಡಿಮೆಯಾಗುತ್ತದೆ.  ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಬೆರೆಸಿ ಮತ್ತು ಮಲಗುವ ಸ್ವಲ್ಪ ಮೊದಲು ಗಾರ್ಗ್ಲ್ ಮಾಡಿ. 

ನೀಲಗಿರಿ ಎಣ್ಣೆ : ಕೆಮ್ಮಿನ ಸಮಸ್ಯೆ ಇದ್ದರೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಮೂಗಿಗೆ ಹಾಕಿ. ಇದು ಅವನ ಮೂಗು ತೆರೆಯುತ್ತದೆ ಮತ್ತು ಉಸಿರುಕಟ್ಟಿಕೊಳ್ಳುವ ಮೂಗಿನಿಂದ ತ್ವರಿತ ಪರಿಹಾರ ಸಿಗುತ್ತದೆ.  

ಇದನ್ನೂ ಓದಿ: Long Covid: ಬೆಂಬಿಡದ ಆಯಾಸ, ತಲೆನೋವು, ಕೊರೋನಾ ಕಾಟ ಇನ್ನೂ ಮುಗ್ದಿಲ್ಲ !

ಧೂಮಪಾನ ತ್ಯಜಿಸಿ : ಧೂಮಪಾನವು ತೀವ್ರವಾದ ಕೆಮ್ಮನ್ನು ಉಂಟುಮಾಡಬಹುದು. ಹಾಗಾಗಿ ಧೂಮಪಾನ ತ್ಯಜಿಸಿದ್ರೆ  ಇದು ಕೆಮ್ಮನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಜಿರಳೆ ಓಡಿಸಿ : ಜಿರಳೆಗಳು ಅಲರ್ಜಿ ಮತ್ತು ಆಸ್ತಮಾ ದಾಳಿಗೆ ಸಾಮಾನ್ಯ ಕಾರಣವಾಗಿದೆ. ಕೆಮ್ಮು ಮತ್ತು ಇತರ ಅಲರ್ಜಿ ಲಕ್ಷಣ ಆಗಾಗ ಕಾಣಿಸಿಕೊಂಡ್ರೆ ಜಿರಳೆಯನ್ನು ಓಡಿಸಿ. ಮನೆಗೆ ಜಿರಳೆ ಬರದಂತೆ ನೋಡಿಕೊಳ್ಳಿ.

ಇದನ್ನೂ ಓದಿ: ಮಧುಮೇಹದ ಸೂಚನೆ ಕಾಲಿನಲ್ಲೂ ಕಾಣಿಸಿಕೊಳ್ಳುತ್ತೆ, ಗಮನಿಸಿಕೊಳ್ಳಿ

ಸಲೈನ್ ನಾಸಲ್ ಸ್ಪ್ರೇ ಬಳಸಿ : ಸಲೈನ್ ನಾಸಲ್ ಸ್ಪ್ರೇ ಅನ್ನು ಬಳಸುವುದರಿಂದ ಶುಷ್ಕತೆ, ತೆಳ್ಳಗಿನ ಲೋಳೆಯು ಕಡಿಮೆಯಾಗುತ್ತದೆ.  ಇದು ಮೂಗಿನ ಕಿರಿಕಿರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?