ಅಯ್ಯೋ ಇಲ್ಲೆ ಇಟ್ಟಿದ್ದೆ ಎಲ್ಲಿಗೆ ಹೋಯ್ತು ಅಂತಾ ಗಂಟೆಗಟ್ಟಲೆ ನೀವು ಹುಡುಕ್ತಿದ್ದರೆ ಮೆದುಳಿನಲ್ಲೇನೋ ವ್ಯತ್ಸಾಸವಾಗಿದೆ ಎಂದೇ ಅರ್ಥ. ಇಡೀ ದಿನ ನಿಮ್ಮ ಮೆದುಳು ಗೊಂದಲದಲ್ಲೇ ಇದ್ರ.. ನೆನಪಿನ ಶಕ್ತಿ ಕಡಿಮೆ ಆಗ್ತಿದೆ ಅನ್ನಿಸಿದ್ರೆ ಈಗ್ಲೇ ಈ ಟ್ರಿಕ್ಸ್ ಫಾಲೋ ಮಾಡಿ.
ವಯಸ್ಸು ಹೆಚ್ಚಾಗ್ತಿದ್ದಂತೆ ಒಂದೊಂದೇ ರೋಗ ನಮ್ಮನ್ನು ಕಾಡಲು ಶುರುವಾಗುತ್ತದೆ. ಮೆದುಳು ಕೂಡ ದುರ್ಬಲವಾಗುತ್ತದೆ. ಅನೇಕರು ನೆನಪಿನ ಶಕ್ತಿ ಕಳೆದುಕೊಳ್ತಾ ಬರ್ತಾರೆ. ವಸ್ತುವನ್ನು ಎಲ್ಲಿಟ್ಟಿದ್ದೇನೆ ಎಂಬುದೇ ಅವರಿಗೆ ನೆನಪಿರೋದಿಲ್ಲ. ಇಡೀ ದಿನ ಆ ವಸ್ತುವನ್ನು ಹುಡುಕುತ್ತಾರೆ. ಇದು ಮರೆಯುವ ಕಾಯಿಲೆಯ ಪ್ರಾಥಮಿಕ ಲಕ್ಷಣ. ವಸ್ತುವನ್ನು ಮಾತ್ರವಲ್ಲ ನಿಧಾನವಾಗಿ ಜನರನ್ನು ಮರೆಯುವ ಇವರು, ವಿಷ್ಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ತಾರೆ. ಹೇಳಿದ ವಿಷ್ಯವನ್ನೇ ಪದೇ ಪದೇ ಹೇಳ್ತಿರುತ್ತಾರೆ. ಮರೆಯುವ ಸಮಸ್ಯೆ ಸಾಮಾನ್ಯ ಎನ್ನಿಸಿದ್ರೂ ಅದನ್ನು ಅನುಭವಿಸುವ ಹಾಗೂ ಅವರ ಜೊತೆಗಿರುವ ಜನರಿಗೆ ಇದು ವಿಪರೀತ ಸಮಸ್ಯೆ ನೀಡುತ್ತದೆ.
ಮರೆಯುವ (Forgetting) ಸಮಸ್ಯೆ ವಯಸ್ಸಾದ ಮೇಲೆ ಸಾಮಾನ್ಯವಾದ್ರೂ, ಪರಿಸರ, ಅನಾರೋಗ್ಯದಿಂದಲೂ ಕಾಡುತ್ತದೆ. ತಲೆಗೆ ಗಾಯವಾದ್ರೆ, ಶಸ್ತ್ರಚಿಕಿತ್ಸೆಗೆ ಒಳಗಾದ್ರೆ, ಮದ್ಯಪಾನ ಹಾಗೂ ಧೂಮಪಾನ ವ್ಯಸನಿಗಳಿಗೆ ಕೂಡ ಈ ರೋಗ (Disease) ಕಾಡುವುದಿದೆ. ಅದಾ ಒತ್ತಡದಲ್ಲಿರುವ, ಆತಂಕದಿಂದ ಬಳಲುವ ಜನರು ಕೂಡ ಈ ಅಪಾಯ ಎದುರಿಸುವುದಿದೆ. ಸೌಮ್ಯವಾದ ಈ ಮರೆವಿನ ಖಾಯಿಲೆ ಬುದ್ಧಿಮಾಂದ್ಯತೆ (Dementia) ಮತ್ತು ಆಲ್ಝೈಮರ್ನ ಮರೆವಿನ ಅಪಾಯವನ್ನು ಹೆಚ್ಚಿಸುತ್ತದೆ.
undefined
ಕೋವಿಡ್ 19ಕ್ಕಿಂತಲೂ ಮಾರಕವಾದ ಕಾಯಿಲೆ ಬರಲಿದೆ..ಎಚ್ಚರ
ಜನರಲ್ ಆಫ್ ಪ್ಲೋಸ್ ಒನ್ ಮಾಹಿತಿ ಪ್ರಕಾರ, ಜಗತ್ತಿನಲ್ಲಿ ಶೇಕಡಾ 56 ಜನರು ಒಂದು ಗಂಟೆಯಲ್ಲಿ ಮಾಹಿತಿ ಮರೆಯುತ್ತಾರೆ. ಶೇಕಡಾ 66 ಜನರು ಒಂದು ದಿನದ ನಂತ್ರ ಮಾಹಿತಿ ಮರೆತ್ರೆ ಶೇಕಡಾ 75ರಷ್ಟು ಜನರು ಆರು ದಿನದಲ್ಲಿ ಮಾಹಿತಿ ಮರೆಯುತ್ತಾರೆ ಎನ್ನುತ್ತದೆ ವರದಿ. ಮಕ್ಕಳು ಒಮ್ಮೆ ಓದಿದ್ದನ್ನು ಮರೆಯುತ್ತಾರೆ. ಅದೇ ವಿಷ್ಯವನ್ನು ಪದೇ ಪದೇ ಓದುತ್ತಿದ್ದರೆ ಅದು ಅವರ ನೆನಪಿನಲ್ಲಿರುತ್ತದೆ. ಅದೇ ರೀತಿ ಯಾವುದೇ ವಿಷ್ಯವನ್ನು ನೀವು ಮೆಲುಕು ಹಾಕ್ತಿದ್ದರೆ ಅದು ನೆನಪಿನಲ್ಲಿರುತ್ತದೆ ಎನ್ನುತ್ತಾರೆ ತಜ್ಞರು.
ಮರೆವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ :
ಒಂದೇ ದಿನಚರಿ ಅನುಸರಿಸಿ : ನಿಮ್ಮ ಮೆದುಳಿಗೆ ತರಬೇತಿ ನೀಡುವುದು ಮುಖ್ಯ. ನೀವು ಪ್ರತಿ ದಿನ ಒಂದೇ ಸಮಯಕ್ಕೆ ಏಳುವುದು, ಮಲಗುವುದು ಮಾಡಿದ್ರೆ, ಹಗಲು ಶಿಸ್ತುಬದ್ಧವಾಗಿ ಕೆಲಸ ಮಾಡಿದ್ರೆ ಮೆದುಳಿಗೆ ಅದು ರೂಢಿಯಾಗುತ್ತದೆ. ಕ್ರಮೇಣ ಅದು ಒಂದಾದ್ಮೇಲೆ ಒಂದು ಕೆಲಸವನ್ನು ನೆನಪಿಟ್ಟುಕೊಳ್ಳಲು, ಸ್ವಯಂಚಾಲಿತವಾಗಿ ಮಾಡಲು ಮುಂದಾಗುತ್ತದೆ.
ಹೊಸ ಕೌಶಲ್ಯ ಕಲಿಯಿರಿ : ನೀವು ಸದಾ ಹೊಸ ಹೊಸ ಕೌಶಲ್ಯ ಕಲಿಯಬೇಕು. ಕಡಿಮೆ ಅವಧಿಯಲ್ಲಿ ಹೊಸ ಕೌಶಲ್ಯ ಕಲಿಯಲು ಆಸಕ್ತಿ ತೋರಿಸಿದ್ರೆ ಮೆದುಳು ಸಕ್ರಿಯವಾಗುತ್ತದೆ. ಹೊಸ ಚಟುವಟಿಕೆಯಲ್ಲಿ ಮೆದುಳು ಪಾಲ್ಗೊಳ್ಳುವ ಕಾರಣ ಅದು ಚುರುಕಾಗುತ್ತದೆ. ಒಂದು ವಿಷ್ಯದಲ್ಲಿ ಗಮನ ಕೇಂದ್ರೀಕರಿಸಲು ಅದಕ್ಕೆ ತೊಂದರೆಯಾಗುವುದಿಲ್ಲ.
ಶಿಸ್ತು ಪಾಲಿಸಿ : ನಿಮ್ಮ ವಸ್ತುಗಳನ್ನು ಕಂಡ ಕಂಡಲ್ಲಿ ಇಟ್ಟು ಮೆದುಳನ್ನು ಗೊಂದಲಕ್ಕೀಡು ಮಾಡುವ ಬದಲು ಸಂಘಟಿತವಾಗಿರಿ. ಕೀ, ಪರ್ಸ್, ಗ್ಲಾಸ್ ಎಲ್ಲವನ್ನೂ ನಿತ್ಯ ಒಂದೇ ಸ್ಥಳದಲ್ಲಿ ಇಡುತ್ತ ಬನ್ನಿ. ಆಗ ಯಾವುದೇ ರೀತಿ ತೊಂದರೆ ನಿಮ್ಮನ್ನು ಕಾಡೋದಿಲ್ಲ.
ಎಲ್ಲ ಇಂದ್ರೀಯ ಬಳಸಿ : ನಿಮಗೆ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದ್ರೆ ನೀವು ಮಾಡುವ ಕೆಲಸಕ್ಕೆ ಎಲ್ಲ ಇಂದ್ರೀಯ ಬಳಸಬೇಕು. ನೀವು ಕುಂಬಾರರ ಕೆಲಸ ಮಾಡುತ್ತಿದ್ದರೆ ನಿಮ್ಮ ಕೈ, ಕಣ್ಣು ಮಾತ್ರವಲ್ಲ ಅದ್ರ ವಾಸನೆಯನ್ನೂ ತೆಗೆದುಕೊಳ್ಳಿ. ಆಗ ವಸ್ತುವನ್ನು ವರ್ಗೀಕರಿಸೋದು ನಿಮಗೆ ಸುಲಭವಾಗುತ್ತದೆ. ನೀವು ಇದನ್ನು ಅಡುಗೆ ತಯಾರಿ, ಕಚೇರಿ ಕೆಲಸದಲ್ಲೂ ಮಾಡ್ಬಹುದು.
ಮೂವತ್ತರ ವಯಸ್ಸಿನಲ್ಲಿ ಯುವಕರನ್ನು ಕಾಡೋ ಈ ಡೇಂಜರಸ್ ಕಾಯಿಲೆಗಳ ಬಗ್ಗೆ ಗೊತ್ತಿರಲಿ
ನಿದ್ರೆ ಅಗತ್ಯ : ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಬೇಕೆಂದ್ರೆ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡ್ಬೇಕು. ಸಂಶೋಧನೆಯೊಂದು ನಿದ್ರೆ ಮಾಡಿ ಪರೀಕ್ಷೆ ಬರೆದ ಹಾಗೂ ನಿದ್ರೆ ಮಾಡದೆ ಪರೀಕ್ಷೆ ಬರೆದ ಜನರನ್ನು ಪರೀಕ್ಷೆ ಮಾಡಿದೆ. ನಿದ್ರೆ ಮಾಡದವರಿಗಿಂತ ಮಾಡಿದವರೇ ಹೆಚ್ಚು ಅಂಕ ಪಡೆದಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.