ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ!ನಿಮ್ಮ ಹುಷಾರಲ್ಲಿ ನೀವಿದ್ದರೆ ಒಳಿತು

By Kannadaprabha NewsFirst Published Jun 18, 2020, 3:17 PM IST
Highlights

ಕಣ್ಣಿಗೆ ಗೋಚರವಾಗದಷ್ಟುಸಣ್ಣ ಕೊರೋನಾ ಸೋಂಕಿನ ಅಬ್ಬರಕ್ಕೆ ಮನುಕುಲ ಹೈರಾಣಾಗಿದೆ. ಸೋಂಕು ಎಷ್ಟರ ಮಟ್ಟಿಗೆ ಭೀತಿ ಹುಟ್ಟಿಸಿದೆ ಎಂದರೆ, ಹಿಂದೊಮ್ಮೆ ಕತ್ತರಿಸಿಟ್ಟಕ್ಯಾಬೇಜ್‌ ಖರೀದಿಸಿ, ಮನೆಗೆ ತಂದಾಗ ಕೊರೋನಾ ಭೀತಿ ಶುರುವಾಯಿತು. 

- ಬಸವಂತಿ ಕೊಟೂರ್‌

ಕತ್ತರಿಸಿಟ್ಟಿದ್ದ ಕ್ಯಾಬೇಜನ್ನು ನಿಂತಗಾಲಲ್ಲೇ ಡಸ್ಟ್‌ಬಿನ್‌ಗೆ ಎಸೆದು, ಸ್ಯಾನಿಟೈಸರ್‌ ಉಪಯೋಗಿಸಿದೆ. ಕೆಲಸಕ್ಕೆ ಹೋಗಿ ಬಂದಾಗ, ‘ಮಮ್ಮಾ’ ಎಂದು ಅಪ್ಪಿ ಮುದ್ದಿಡುವ ಮಕ್ಕಳನ್ನು ದೂರ ತಳ್ಳಿದ್ದಿದೆ. ಕೈ ತೊಳೆಯದೆ ಊಟಕ್ಕೆ ಕುಳಿತ ಮಕ್ಕಳಿಗೆ ಛಡಿ ಏಟು ಕೊಟ್ಟು, ಸೋಪು ಹಾಕಿ ಕೈತೊಳೆಸಿಕೊಂಡು ಬಂದದ್ದನ್ನು ಮರೆಯುವಂತಿಲ್ಲ.

ಕೊರೋನಾ ಜಾಗೃತಿಗೆ ಸಂಬಂಧಿಸಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಆದರೆ ಕೊಳಗೇರಿ, ವಲಸೆ ಕಾರ್ಮಿಕರಿಗೆ ಇದೆಲ್ಲ ತಿಳಿಯುವುದು ಕಷ್ಟು. ಅವರಿಗೆ ಸೋಂಕು ಹರಡಿದರೆ ನಿಯಂತ್ರಿಸುವುದೂ ಸವಾಲು. ಹೀಗಾಗಿ ಇಂಥಾ ಕಡೆ ಉಚಿತ ಸ್ಯಾನಿಟೈಸರ್‌, ಮಾಸ್ಕ್‌ ಹಂಚುವ ಜೊತೆಗೆ ತಿಳುವಳಿಕೆ ಮೂಡಿಸಬೇಕು. ರೋಗ ನಿರೋಧಕತೆ ಹೆಚ್ಚು ಆಹಾರ ಪೂರೈಸಬೇಕು.-ಭಾರತಿ ಹೆಗಡೆ, ಪ್ರೋಗ್ರಾಂ ಮ್ಯಾನೇಜರ್‌ ಸೆಲ್ಕೋ ಫೌಂಡೇಶನ್‌

ಸಸ್ತನಿಗಳಲ್ಲಿ ಮತ್ತು ಹಕ್ಕಿಗಳಲ್ಲಿ ಜೀರ್ಣಾಂಗ ವ್ಯೂಹ ಮತ್ತು ಶ್ವಾಸಕೋಶ ವ್ಯೂಹಕ್ಕೆ ಸೋಂಕು ತಗುಲಿ ರೋಗ ಬರುತ್ತದೆ. ಈ ಕೊರೋನಾ ಗುಂಪಿನ ಏಳು ಬಗೆಯ ವೈರಾಣುಗಳು ಸೋಂಕು ಉಂಟು ಮಾಡುವ ಸಾಮರ್ಥ್ಯ ಹೊಂದಿವೆ. ಮೇಲ್ನೊಟಕ್ಕೆ ಶೀತ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಕೊರೋನಾ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಇದು ಶ್ವಾಸಕೋಶಕ್ಕೆ ಹಾನಿ ಮಾಡಿ ಉಸಿರನ್ನೇ ಕಿತ್ತುಕೊಳ್ಳಬಹುದು. ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಎಚ್ಚರಿಕೆ ಕ್ರಮಗಳೇನು?

1. ಸೋಪು ದ್ರಾವಣ ಬಳಸಿ 30 ಸೆಕೆಂಡ್‌ ಕೈಗಳನ್ನು ಶುಭ್ರವಾಗಿ ತೊಳೆಯಿರಿ.

2. ಶಂಕಿತ ಅಥವಾ ಸೋಂಕಿತ ವ್ಯಕ್ತಿಯ ಬಟ್ಟೆ, ಕರವಸ್ತ್ರ, ತಟ್ಟೆಬಳಸಕೂಡದು.

3. ಶಂಕಿತ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ, ಚುಂಬನ ಸಲ್ಲದು.

4. ಶಂಕಿತ ರೋಗಿ ಇರುವ ಜಾಗಕ್ಕೆ ಪ್ರವೇಶ ನಿಷಿದ್ಧ.

ಜೊತೆಗೆ ಕೊರೋನಾ ಸೋಂಕು ತಡೆಗಟ್ಟಲು ಸಮುದಾಯ ಮಾಡಬಹುದಾದ ಕೆಲವು ಅಂಶಗಳು ಇವೆ.

- ವಿದೇಶದಿಂದ ಬಂದವರು 1 ತಿಂಗಳು ಮನೆಯಿಂದ ಹೊರ ಹೋಗಬಾರದು. ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ ಕುಟುಂಬದ ವೈದ್ಯರಿಗೆ ಫೋನ್‌ನಲ್ಲೇ ತಿಳಿಸಿ. ರೋಗ ಲಕ್ಷಣ ಇಲ್ಲದಿದ್ದರೂ ವಿದೇಶಕ್ಕೆ, ಹೊರರಾಜ್ಯ, ಜಿಲ್ಲೆಗೆ ಹೋಗಿ ಬಂದಿದ್ದರೆ ಹೊರಗೆ ಓಡಾಡದಿರಿ.

- ಸಾಮಾಜಿಕ ಅಂತರ ಕಾಪಾಡುವುದನ್ನು ಗಂಭೀರವಾಗಿ ಪರಿಗಣಿಸಿ, ಬಸ್ಸಿಗೆ ಕಾಯುವುದರಿಂದ ಹಿಡಿದು ಮನೆಗೆ ಅಂಗಡಿಯಲ್ಲಿನ ಸಾಮಾನು ತರಲು ಹೋಗುವಾಗ ಅಂತರ ಕಾಪಾಡಿ.

ತರಕಾರಿ, ಹಾಲು, ಹಣ್ಣು ಇತ್ಯಾದಿಗಳನ್ನು ತಂದ ಕೂಡಲೇ ಚೆನ್ನಾಗಿ ತೊಳೆದು ಬಳಸಿ. ಮನೆಗೆ ಬೇಕಾದ ವಸ್ತುಗಳನ್ನು ಒಂದೇ ಬಾರಿ ಖರೀದಿಸಿ ತರಬೇಕು. ಮನೆಗೆ ಬಂದ ಕೂಡಲೇ ಸ್ನಾನ ಮಾಡಬೇಕು. ಮಕ್ಕಳ ಜೊತೆಗೆ ಹೆಚ್ಚು ಕಾಲ ಕಳೆದು, ಅವರು ಹೊರಗೆ ಹೋಗುವುದನ್ನು ನಿಯಂತ್ರಿಸಬೇಕು.-ಕೆ ಎಚ್‌ ಸಾವಿತ್ರಿ, ಹಿರಿಯ ಪತ್ರಕರ್ತೆ

- ಮಕ್ಕಳಿಗೆ ರಜೆ ಇದೆ, ಹೊರಗೆ ಆಟವಾಡುವುದು ಬೇಡ. ಏಕೆಂದರೆ ಸಾಮಾಜಿಕ ಅಂತರ ಕಷ್ಟ.

- ಆಸ್ಪತ್ರೆ ಮತ್ತು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆ ಶೇ.70 ರಷ್ಟುಆಲ್ಕೋಹಾಲ… ಇರುವ ಸ್ಯಾನಿಟೈಸರ್‌ನಿಂದ ಕೈ ಉಜ್ಜಿಕೊಳ್ಳಿ.

click me!