Cough syrup: ಕೆಮ್ಮು ಬಂದಾಗಲ್ಲೆಲ್ಲಾ ಕಫ್ ಸಿರಪ್‌ ಕುಡಿಯೋ ಮುನ್ನ ಇದನ್ನೋದಿ

Published : Jan 08, 2023, 10:22 AM ISTUpdated : Jan 08, 2023, 10:50 AM IST
Cough syrup: ಕೆಮ್ಮು ಬಂದಾಗಲ್ಲೆಲ್ಲಾ ಕಫ್ ಸಿರಪ್‌ ಕುಡಿಯೋ ಮುನ್ನ ಇದನ್ನೋದಿ

ಸಾರಾಂಶ

ಚಳಿಗಾಲ ಶುರುವಾಗಿದೆ. ಜ್ವರ, ಶೀತ, ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿದೆ. ಅದರಲ್ಲೂ ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡರಂತೂ ಕೆಮ್ಮಿ ಕೆಮ್ಮಿ ಸಂಪೂರ್ಣ ದೇಹವೇ ಸುಸ್ತಾಗದಂತೆ ಭಾಸವಾಗುತ್ತದೆ. ಹೀಗೆ ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡಾಗ ಹೆಚ್ಚಿನವರು ತಕ್ಷಣಕ್ಕೆ ಕಫ್ ಸಿರಪ್ ಕುಡಿಯುತ್ತಾರೆ. ಆದ್ರೆ ಇದು ಅಷ್ಟು ಕೆಟ್ಟದ್ದು ನಿಮ್ಗೆ ಗೊತ್ತಿದ್ಯಾ?

ಜ್ವರ, ಕೆಮ್ಮು (Cough), ಶೀತ ಮೊದಲಾದವು ಕಾಲಗಳ ವ್ಯತ್ಯಾಸವಿಲ್ಲದೆ ಆಗಾಗ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆ. ಹವಾಮಾನ ಬದಲಾವಣೆ, ಡಸ್ಟ್ ಅಲರ್ಜಿಯಿಂದ ಹೀಗಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೆಮ್ಮಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ನಿರಂತರವಾದ ಕೆಮ್ಮು ದೇಹವನ್ನೇ  ಸುಸ್ತಾಗಿಸುತ್ತದೆ. ಹೀಗಾಗಿಯೇ ತಕ್ಷಣಕ್ಕೆ ಪರಿಹಾರ ಪಡೆಯಲು ಹೆಚ್ಚಿನವರು ಕಫ್ ಸಿರಪ್ ಅಥವಾ ಕೆಮ್ಮಿನ ಸಿರಪ್ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ (Health) ಎಷ್ಟು ಕೆಟ್ಟದ್ದು ನಿಮ್ಗೆ ಗೊತ್ತಿದ್ಯಾ ?

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸಿರಪ್‌ಗಳ ಮಾರಾಟ (Sale)ವನ್ನು ಆರೋಗ್ಯ ತಜ್ಞರು ವಿರೋಧಿಸುತ್ತಾರೆ. ಇತ್ತೀಚಿನ ಉಜ್ಬೇಕಿಸ್ತಾನ್ ನಡೆದ ದುರಂತದಿಂದಾಗಿ ಕೆಮ್ಮು ಸಿರಪ್‌ಗಳ ಬಳಕೆಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ (Warning) ನೀಡಲಾಗಿದೆ. ಭಾರತದ ಕಂಪನಿಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಕುಡಿದು 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ಆರೋಪಿಸಿತ್ತು.

Paracetamol: ಪ್ಯಾರಸಿಟಮಾಲ್ ಮಾತ್ರೆ ನುಂಗುವ ಮುನ್ನ ಇದನ್ನೋದಿ

ಹೈದರಾಬಾದ್‌ನ ಯಶೋದಾ ಆಸ್ಪತ್ರೆಗಳ ಸಾಂಕ್ರಾಮಿಕ ರೋಗಗಳ ಸಲಹೆಗಾರರಾದ ಡಾ.ಮೊನಾಲಿಸಾ ಸಾಹು ಅವರು ಮಾತನಾಡಿ, ಕೆಮ್ಮಿನ ಸಿರಪ್‌ಗಳು ಕೆಮ್ಮಿನ ಲಕ್ಷಣಗಳನ್ನು (Cough symptoms) ಮಾತ್ರ ಕಡಿಮೆ ಮಾಡುತ್ತವೆ. ಒಟ್ಟಾರೆ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳಿದರು.

ಕೆಮ್ಮಿನ ಸಿರಪ್‌ನ ವಿಧಗಳು
ಎರಡು ವಿಧದ ಕೆಮ್ಮು ಸಿರಪ್‌ಗಳಿವೆ. ಒಂದು ಒಣ ಕೆಮ್ಮಿಗೆ ಮತ್ತು ಇನ್ನೊಂದು ಆಗಷ್ಟೇ ಕಾಣಿಸಿಕೊಳ್ಳುವ ಕೆಮ್ಮುಗಳಿಗೆ. ಒಣ ಕೆಮ್ಮಿಗೆ ಕೆಮ್ಮಿನ ಸಿರಪ್‌ಗಳು ಸಾಮಾನ್ಯವಾಗಿ ಅಲರ್ಜಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯಾವಾಗಲೂ ಕೆಮ್ಮಿನ ಸಿರಪ್‌ನ್ನು ತೆಗೆದುಕೊಳ್ಳುವ ಮುನ್ನ ಕೆಮ್ಮಿನ ನಿಜವಾದ ಕಾರಣವನ್ನು ತೆಗೆದುಕೊಳ್ಳಬೇಕು. ಆಗಷ್ಟೇ ಕಾಣಿಸಿಕೊಂಡ ಕೆಮ್ಮಿನ ಸಂದರ್ಭದಲ್ಲಿ, ನೀವು ಕಫವನ್ನು ಹೊರತೆಗೆಯಬೇಕು, ಇದನ್ನು ನಿರ್ದಿಷ್ಟ ಕೆಮ್ಮಿನ ಸಿರಪ್ ಸಹಾಯದಿಂದ ಮಾಡಲಾಗುತ್ತದೆ ಎಂದು ಡಾ ಸಾಹು ಹೇಳಿದರು.

ಕೆಮ್ಮು ಸಿರಪ್ ಸೇವನೆಯ ಅಡ್ಡಪರಿಣಾಮಗಳು
ನವದೆಹಲಿಯ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಶರದ್ ಅಗರ್ವಾಲ್ ಪ್ರಕಾರ, ಕೆಮ್ಮು ಸಿರಪ್‌ಗಳ ಅತಿಯಾದ ಸೇವನೆಯು ಮತಿವಿಕಲ್ಪ, ಗೊಂದಲ, ಬೆವರುವಿಕೆ, ವಾಕರಿಕೆ, ವಾಂತಿ, ಚಡಪಡಿಕೆ, ಮುಖದ ಕೆಂಪಾಗುವಿಕೆಯೊಂದಿಗೆ ಶುಷ್ಕ ಅಥವಾ ತುರಿಕೆ ಸೇರಿದಂತೆ ವಿವಿಧ ಅಡ್ಡಪರಿಣಾಮಗಳನ್ನು ಹೊಂದಿದೆ. ಸುಮಾರು ನಾಲ್ಕು ತಿಂಗಳ ಹಿಂದೆ, ಗ್ಯಾಂಬಿಯಾದಲ್ಲಿ ನಿರ್ದಿಷ್ಟ ಕೆಮ್ಮಿನ ಸಿರಪ್ 60 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದಾಗ ಭಾರತದಲ್ಲಿ ತಯಾರಿಸಲಾದ ಕೆಮ್ಮು ಸಿರಪ್‌ಗಳು ಹೆಚ್ಚು ಸುದ್ದಿ ಮಾಡಿದವು.

ಕೆಮ್ಮು ಸಿರಪ್‌ಗಳನ್ನು ಹೇಗೆ ತಯಾರಿಸುತ್ತಾರೆ ?
ಕೆಮ್ಮು ಸಿರಪ್‌ಗಳನ್ನು ತಯಾರಿಸಲು ಹಲವಾರು ಪದಾರ್ಥಗಳನ್ನು ಬಳಸಲಾಗುತ್ತದೆ, ಇವುಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಎಕ್ಸ್‌ಪೆಕ್ಟರಂಟ್‌ಗಳು, ಡಿಕೊಂಜೆಸ್ಟೆಂಟ್‌ಗಳು, ಆಂಟಿಹಿಸ್ಟಾಮೈನ್‌ಗಳು ಮತ್ತು ಡೆಕ್ಸ್‌ಟ್ರೋಮೆಥೋರ್ಫಾನ್‌ನಂತಹ ಆಂಟಿಟಸ್ಸಿವ್ ಔಷಧಿಗಳು ಸೇರಿವೆ. ಇವೆಲ್ಲವೂ ಕೆಮ್ಮನ್ನು ನಿಗ್ರಹಿಸಲು ಅಥವಾ ನಿಲ್ಲಿಸಲು ಸಹಾಯ ಮಾಡುತ್ತವೆ ಎಂದು ಡಾ.ಪ್ರಸಾದ್ ತಿಳಿಸಿದರು. ಈ ಪದಾರ್ಥಗಳು ತಾತ್ಕಾಲಿಕ ಚಿಕಿತ್ಸೆಯನ್ನು ಒದಗಿಸಲು ಸಹಾಯ ಮಾಡುತ್ತವೆ ಆದರೆ ರೋಗವನ್ನು ಉಂಟುಮಾಡುವ ಆಧಾರವಾಗಿರುವ ಕಾಯಿಲೆಯನ್ನು ಗುಣಪಡಿಸುವುದಿಲ್ಲ ಎಂದು ಡಾ.ಪ್ರಸಾದ್ ತಿಳಿಸಿದ್ದಾರೆ.

Winter Health Tips: ಚಳಿಗಾಲದಲ್ಲಿ ಕಾಡುವ ಕೆಮ್ಮಿಗೆ ಇಲ್ಲಿದೆ ಸುಲಭ ಮದ್ದು

ಕೆಮ್ಮು ಸಿರಪ್‌ಗಳು ಕೆಮ್ಮನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಬಿಬಿಸಿ ವರದಿಯ ಪ್ರಕಾರ, ಉಜ್ಬೇಕಿಸ್ತಾನ್ ಮಕ್ಕಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸಿರಪ್ ಅನ್ನು ಪ್ರಮಾಣಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕೆಮ್ಮು ಸಿರಪ್‌ಗಳ ಮಾರಾಟಕ್ಕೆ ಯಾವುದೇ ನಿರ್ಬಂಧ ಇರಬೇಕೆ ?
ಜನರು ಮೊದಲು ಯಾವ ರೀತಿಯ ಕೆಮ್ಮು ಮತ್ತು ಇದು ಯಾವುದೇ ಸೋಂಕಿನೊಂದಿಗೆ ಸಂಬಂಧ ಹೊಂದಿದೆಯೇ ಎಂಬುದನ್ನು ವೈದ್ಯರನ್ನು ಸಂಪರ್ಕಿಸಿ ತಿಳಿಯಬೇಕು. ನಂತರ ಕೆಮ್ಮು ಸಿರಪ್‌ನ್ನು ಶಿಫಾರಸು ಮಾಡಬೇಕು. ಕೆಮ್ಮು ಸಿರಪ್‌ಗಳ ಡೈರೆಕ್ಟ್‌ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಅತಿ ಹೆಚ್ಚು ಕೆಮ್ಮು ಸಿರಪ್‌ಗಳ ಮಾರಾಟಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳ ಕುರಿತು ಮಾತನಾಡಿದ ಡಾ ಪ್ರಸಾದ್, ಈಗಿನಂತೆ, ಡೈರೆಕ್ಟ್‌ ಕೆಮ್ಮು ಸಿರಪ್ ಔಷಧಿಗಳ ಮಾರಾಟದ ಮೇಲಿನ ನಿರ್ಬಂಧಗಳ ಬಗ್ಗೆ ಯಾವುದೇ ಕಾನೂನು ಮತ್ತು ನಿಬಂಧನೆಗಳಿಲ್ಲ. ಏಕೆಂದರೆ ಅವುಗಳು ನಿರ್ದೇಶನದಂತೆ ತೆಗೆದುಕೊಂಡರೆ ಅಥವಾ ಭಾರೀ ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?