Published : Apr 24, 2020, 02:17 PM ISTUpdated : Apr 24, 2020, 02:24 PM IST
ಅಮೆರಿಕದಲ್ಲಿ ಆಗಲೇ 8.5 ಲಕ್ಷ ಮಂದಿ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಸೋಂಕು ಇಳಿಮುಖ ಆದಂತೆ ಕಂಡರೂ, ರೋಗವಿನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. 47 ಸಾವಿರಕ್ಕೂ ಅಧಿಕ ಮಂದಿ ರೋಗದಿಂದ ಕೊನೆಯುಸಿರೆಳೆದಿದ್ದಾರೆ. ಆದರೂ, ಜನರಿಗೆ ಮನೆಯಲ್ಲಿರಲು ಮನಸಿಲ್ವಂತೆ. ಪಾಕ್, ಬೀಚ್ ಅಂತ ರಸ್ತೆಗಿಳಿದಿದ್ದಾರೆ. ಅಷ್ಟೇ ಅಲ್ಲ ಲಾಕ್‌ಡೌನ್ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ. ಮನುಷ್ಯನ ಸಂಚಾರಕ್ಕೆ ಅನುವು ಮಾಡಿಕೊಡಲು ಆಗ್ರಹಿಸುತ್ತಿದ್ದಾರೆ.
ಕೈಯಲ್ಲಿ ಗನ್ ಹಿಡ್ಕೊಂಡು ಲಾಕ್‌ಡೌನ್ ತೆರವುಗೊಳಿಸಿ ಎಂದು ಅಮೆರಿಕದ ಕೆಲವು ಬೀದಿಗಳಲ್ಲಿ ಮಂದಿ ಪ್ರತಿಭಟಿಸುತ್ತಿದ್ದಾರೆ.

214
ಈ ರೀತಿ ಹಿಡಿತದಲ್ಲಿಟ್ಟರೆ, ಜನರು ಹಸಿವಿನಿಂದ ಸಾಯುತ್ತಾರೆ. ಆರ್ಥಿಕ ಕುಸಿತ ಕಾಣುತ್ತದೆ, ಎಂಬುವುದು ಜನರ ಅಭಿಪ್ರಾಯ.

314
ಸುಮಾರು 22 ದಶಲಕ್ಷ ಮಂದಿ ಇದೀಗ ಅಮೆರಿಕದಲ್ಲಿ ನಿರುದ್ಯೋಗಿಗಳಾಗಿದ್ದಾರೆ.

414
ಉದ್ಯೋಗ ಸೃಷ್ಟಿಸಲು ಅಮೆರಿಕ್ಕೆ ದಶಕಕ್ಕಿಂತಲೂ ಹೆಚ್ಚು ಕಾಲ ಬೇಕಾಗಬಹುದೆನ್ನುತ್ತಾರೆ ತಜ್ಞರು.

514
ಕೊಲರಾಡೋನಲ್ಲಿ ಕೆಲವು ಪ್ರತಿಭಟನಾಕಾರರನ್ನು ಆರೋಗ್ಯ ಕಾರ್ಯಕರ್ತರು ತಡೆ ಹಿಡಿದಿದ್ದು, ದೊಡ್ಡ ಸಂಘರ್ಷಕ್ಕೂ ನಾಂದಿ ಹಾಡಿತ್ತು.

614
714
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಆಡಳಿತವಿರೋ ರಾಜ್ಯಗಳೂ ಇವುಗಳಲ್ಲಿವೆ.

814
ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಲು ಈಗಲೇ ಸಾಧ್ಯವಿಲ್ಲ. ಆದರೆ, ನಿಧಾನವಾಗಿ ಅಗತ್ಯ ವಸ್ತುಗಳ ಮಾರಾಟಕ್ಕೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎಂದು ಸರಕಾರ ಹೇಳಿದೆ.

914
ಅಮೆರಿಕದ 19 ರಾಜ್ಯಗಳಲ್ಲಿ ಪ್ರತಿಭಟನೆಯ ಕಾವೇ ತಾರಕಕ್ಕೇರಿದೆ.

1014
ವರ್ಜೀನಿಯಾ ಮತ್ತು ಓರೆಗಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕೆಲವೇ ಕೆಲವು ಮಂದಿ ಪಾಲ್ಗೊಂಡರೆ, ಮಿಷಗನ್ ಮತ್ತು ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು.

1114
ಒಲಿಂಪಿಯಾದಲ್ಲಂತೂ ಅತೀ ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಮಂದಿ ಸೇರಿದ್ದರು.

1214
ಅಮೆರಿಕದಲ್ಲಿ ಕೋವಿಡ್ 19 ಪಸರಿಸಲು ವಾಷಿಂಗ್ಟನ್ ಕೇಂದ್ರ ಸ್ಥಾನವೆಂದೇ ಪರಿಗಣಿಸಲಾಗುತ್ತಿದೆ.

1314
ನೂರಾರು ಮಂದಿ ಅರಿಜೋನಾದಲ್ಲಿ ಕಾರಲ್ಲಿ ರಸ್ತೆಗಿಳಿದು, ಟ್ರಾಫಿಕ್ ಜಾಮ್ ಆಗುವಂತೆ ಪ್ರತಿಭಟಿಸಿದರು.

1414
ಇಂಥ ಅಮೆರಿಕದ ಪ್ರಜ್ಞಾವಂತ ಜನರೇ ಹೀಗೆ ಮಾಡಿದರೆ, ಈಗಾಗಲೇ ನಿಯಂತ್ರಣಕ್ಕೆ ಸಿಗದ ರೋಗ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲಿ ಡಿಸೆಂಬರ್ ವೇಳೆಗೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ, ಎನ್ನಲಾಗುತ್ತಿದ್ದು, ಪರಿಸ್ಥಿತಿ ಹೇಗೆ ನಿಯಂತ್ರಣಕ್ಕೆ ಬರುತ್ತೋ ಕಾದು ನೋಡಬೇಕು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ