ಮಹಿಳೆ ಪ್ರಕೃತಿಯ ಸುಂದರ ಸೃಷ್ಟಿಯಾಗಿದ್ದು, ಮಗುವಿಗೆ ಜನ್ಮ ನೀಡುವಾಗ ತನ್ನ ಜೀವನದ ಅತ್ಯಂತ ಸೂಕ್ಷ್ಮ ಹಂತವನ್ನು ಹಾದುಹೋಗುತ್ತಾಳೆ. ಪ್ರಸವಕ್ಕೆ ಮೊದಲು ಮಾಡುವ ಯೋಗವು ತಾಯಂದಿರಿಗೆ ಆರಾಮದಾಯಕ ಗರ್ಭಾವಸ್ಥೆಗೆ ಸಹಾಯ ಮಾಡುತ್ತೆ. ಹಾಗಾದ್ರೆ ಪ್ರಸವಪೂರ್ವ ಯೋಗದ ಪ್ರಯೋಜನಗಳು ಯಾವುವು? ನೋಡೋಣ… ಯೋಗದಿಂದಾಗಿ ಉತ್ತಮ ನಿದ್ರೆ(Sleep), ಕಡಿಮೆ ಒತ್ತಡ ಮತ್ತು ಆತಂಕ ನಿವಾರಣೆ, ಹೆಚ್ಚಿದ ಸ್ನಾಯು ಬಲ, ಹೆಚ್ಚಿನ ಸಾಮರ್ಥ್ಯ, ಬೆನ್ನು ನೋವು ನಿವಾರಣೆ, ವಾಕರಿಕೆಯಿಂದ ಪರಿಹಾರ ಮತ್ತು ಉಸಿರಾಟದ ತೊಂದರೆಯಿಂದ ಸಹ ಪರಿಹಾರ ಸಿಗುತ್ತೆ.