ಉಳಿದ ಚಹಾ ಎಲೆಗಳನ್ನು ಈ ರೀತಿಯಾಗಿ ಬಳಸಿ!

Published : Jul 15, 2022, 05:11 PM IST

ಚಹಾ ಮಾಡಿದ ನಂತರ ನಾವು ಚಹಾ ಎಲೆಯನ್ನು ಎಸೆಯುತ್ತೇವೆ. ನಮ್ಮಲ್ಲಿ ಕೆಲವರು ಈ ಚಹಾ ಎಲೆಯನ್ನು ರಸಗೊಬ್ಬರವಾಗಿ ಬಳಸುತ್ತಾರೆ, ಆದರೆ ಈ ಅಳಿದುಳಿದ ಚಹಾ ಎಲೆಯನ್ನು ಚರ್ಮದ ಆರೈಕೆಯ ದಿನಚರಿಯಲ್ಲಿಯೂ ಸಹ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಉಳಿದ ಚಹಾ ಎಲೆಗಳ ಬಳಕೆಯಿಂದ, ನೀವು ಮುಖದಿಂದ ಮೊಣಕೈಗಳವರೆಗೆ ಚರ್ಮದ ಆರೈಕೆ ಮಾಡಬಹುದು. ಇದರಿಂದ ಚರ್ಮದ ಅಂದವನ್ನು ಹೆಚ್ಚಿಸಬಹುದು. ಇಲ್ಲಿ ಅಳಿದುಳಿದ ಚಹಾವನ್ನು ಹೇಗೆ ಬಳಸಬಹುದು ಅನ್ನೋದರ ಬಗ್ಗೆ ತಿಳಿಸಲಾಗಿದೆ. ಅದರ ಬಗ್ಗೆ ತಿಳಿಯೋಣ…

PREV
16
ಉಳಿದ ಚಹಾ ಎಲೆಗಳನ್ನು ಈ ರೀತಿಯಾಗಿ ಬಳಸಿ!
ಉಳಿದ ಚಹಾ ಎಲೆಗಳನ್ನು ಬಳಸೋದು ಹೇಗೆ?

ಚರ್ಮದಿಂದ (Skin) ಕಲೆ ತೆಗೆದುಹಾಕಲು
ಚರ್ಮದ ಕಲೆಗಳನ್ನು ತೆಗೆದುಹಾಕಲು ನೀವು ಉಳಿದ ಚಹಾ ಎಲೆಗಳನ್ನು ಬಳಸಬಹುದು. ಇದನ್ನು ಮುಖಕ್ಕೆ ಬಳಸಲು, ಮೊದಲನೆಯದಾಗಿ, ಚಹಾ ಎಲೆಗಳನ್ನು ನೀರಿನಲ್ಲಿ ಎರಡು ಬಾರಿ ಚೆನ್ನಾಗಿ ತೊಳೆಯಿರಿ. 

26

ಚಹಾದ ಎಲೆಗಳನ್ನು(Tea leaves) ತೊಳೆದ ನಂತರ, ಅಕ್ಕಿ ಹಿಟ್ಟು ಮತ್ತು ಟೊಮೆಟೊ ರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಸುಮಾರು 20 ನಿಮಿಷಗಳ ನಂತರ ನಿಮ್ಮ ಮುಖ ತೊಳೆಯಿರಿ. ಇದು ನಿಮ್ಮ ಚರ್ಮದಿಂದ ಕಲೆಗಳನ್ನು ಕಡಿಮೆ ಮಾಡುತ್ತೆ. ಅಲ್ಲದೇ ಹೊಳೆಯುವ ತ್ವಚೆಯನ್ನು ನಿಮಗೆ ನೀಡುತ್ತೆ.

36
ಒಡೆದ ಹಿಮ್ಮಡಿಗೂ ಮದ್ದು

ಬಿರುಕು ಬಿಟ್ಟ ಪಾದಗಳನ್ನು(Cracked heels) ತೊಡೆದುಹಾಕಲು 
ಒಡೆದ ಹಿಮ್ಮಡಿಗಳ ಸಮಸ್ಯೆಗೆ ಈ ಮನೆಮದ್ದನ್ನು ಸಹ ಬಳಸಬಹುದು. ಇದಕ್ಕಾಗಿ ಚಹಾ ಎಲೆಗಳನ್ನು ಮೊದಲಿಗೆ ಚೆನ್ನಾಗಿ ತೊಳೆಯಿರಿ. ನಂತರ, 1 ಟೀಸ್ಪೂನ್ ಓಟ್ಸ್ ಮತ್ತು ಕೆಲವು ಹನಿ ತೆಂಗಿನ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

46

ಈಗ ಅದನ್ನು ನಿಮ್ಮ ಪಾದ ಮತ್ತು ಹಿಮ್ಮಡಿ ಮೇಲೆ ಹಚ್ಚಿ, ಸ್ವಲ್ಪ ಸಮಯದವರೆಗೆ ನಿಮ್ಮ ಪಾದಗಳ ಮೇಲೆ ಹಾಗೇ ಬಿಡಿ. ನಂತರ, ಇದನ್ನು ಸ್ಕ್ರಬ್ ನಂತೆ(Scrub) ಸ್ವಲ್ಪ ಸಮಯದವರೆಗೆ ಪಾದಗಳ ಮೇಲೆ ಉಜ್ಜಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಬಿರುಕು ಬಿಟ್ಟ ಜಾಗ ಮತ್ತೆ ಕವರ್ ಆಗುತ್ತೆ.

56
ಮೊಣಕೈಯ ಕಪ್ಪಾಗುವಿಕೆಗೆ

ಮೊಣಕೈ ಕಪ್ಪಾಗುವಿಕೆ ಒಂದು ಸಾಮಾನ್ಯ ಸಮಸ್ಯೆ. ಇದರಿಂದ ಕೆಲವೊಮ್ಮೆ ಮುಜುಗರಕ್ಕೂ ಒಳಗಾಗುವ ಸಾಧ್ಯತೆ ಇದೆ. ಅದನ್ನು ನಿವಾರಿಸಲು ಚಹಾ ಎಲೆಗಳು ಅತ್ಯುತ್ತಮ ಪರಿಹಾರ. ಹಾಗಿದ್ರೆ ಅದರಿಂದ ಹೇಗೆ ಚಹಾ(Tea) ಎಲೆಗಳಿಂದ ಮೊಣಕೈಯ ಕಪ್ಪು ಬಣ್ಣ ನಿವಾರಿಸೋದು ಹೇಗೆ ನೋಡೋಣ.

66

ಉಳಿದ ಚಹಾ ಎಲೆಗಳು ಮೊಣಕೈಯ ಕಪ್ಪನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿ. ಇದಕ್ಕಾಗಿ, ಉಳಿದ ಚಹಾ ಎಲೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಈಗ ಅದನ್ನು ರುಬ್ಬಿಕೊಳ್ಳಿ.ನಂತರ, ಅಗತ್ಯವಿದ್ದರೆ, ಸ್ವಲ್ಪ ಅಡುಗೆ ಸೋಡಾ(Soda) ಮತ್ತು ನಿಂಬೆ ರಸ ಸೇರಿಸಿ ಮತ್ತು ಈ ಮಿಶ್ರಣವನ್ನು ನಿಮ್ಮ ಮೊಣಕೈಗೆ ಹಚ್ಚಿ. ಇದು ಮೊಣಕೈಗಳ ಕಪ್ಪನ್ನು ತೊಡೆದುಹಾಕುತ್ತೆ.  

click me!

Recommended Stories