• ದೈಹಿಕ ಲಕ್ಷಣಗಳು : ದೇಹದಲ್ಲಿ ಇದ್ದಕ್ಕಿದ್ದಂತೆ ಬಿಸಿ ಹೆಚ್ಚಾದಂತೆ ಆಗುವುದು, ರಾತ್ರಿ ಬೆವರುವುದು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಸುಸ್ತು, ತಲೆನೋವು, ನಿದ್ರಾಹೀನತೆ, ತೂಕ ಹೆಚ್ಚಾಗುವುದು ಮತ್ತು ಕೂದಲು ಉದುರುವುದು ಕಾಣಿಸಿಕೊಳ್ಳಬಹುದು. ಕೆಲವರಿಗೆ ತ್ವಚೆ ಒಣಗುವುದು ಕೂಡ ಅನುಭವಕ್ಕೆ ಬರಬಹುದು.
• ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು : ಮೂಡ್ ಸ್ವಿಂಗ್ಗಳು, ಸಣ್ಣ ವಿಷಯಕ್ಕೂ ಕಿರಿಕಿರಿಯಾಗುವುದು, ಆತಂಕ, ಬೇಸರ, ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಮತ್ತು ಮರೆವು ಕಾಣಿಸಿಕೊಳ್ಳಬಹುದು. ಇಂತಹ ಬದಲಾವಣೆಗಳು ದೈನಂದಿನ ಜೀವನದ ಮೇಲೂ ಪರಿಣಾಮ ಬೀರುತ್ತದೆ.
•ಮೂತ್ರ ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಲಕ್ಷಣಗಳು : ಯೋನಿಯಲ್ಲಿ ಒಣತನ, ಲೈಂಗಿಕ ಸಂಬಂಧದ ಸಮಯದಲ್ಲಿ ಕಿರಿಕಿರಿ, ಪದೇಪದೇ ಮೂತ್ರ ವಿಸರ್ಜನೆ, ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಾಗುವುದು ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಲೈಂಗಿಕ ಆಸಕ್ತಿಯಲ್ಲಿಯೂ ಬದಲಾವಣೆ ಉಂಟಾಗಬಹುದು.