50ರ ಹರೆಯದಲ್ಲೂ ಮಲೈಕಾ ಅರೋರಾ ಇಷ್ಟು ಫಿಟ್ ಆಗಿರಲು ಇದೇ ಕಾರಣ! ಅವರ 6 ಫಿಟ್‌ನೆಸ್ ಅಭ್ಯಾಸಗಳಿವು

Published : Oct 23, 2026, 03:55 PM IST

Malaika Aroras Fitness Secrets: 50ರ ಹರೆಯದಲ್ಲೂ ಮಲೈಕಾ ಅರೋರಾ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡಿರುವುದರ ಹಿಂದಿನ ರಹಸ್ಯವೇನು? ಯೋಗ, ಸ್ಟ್ರೆಂಥ್ ಟ್ರೈನಿಂಗ್, ಇಂಟರ್‌ಮಿಟೆಂಟ್ ಫಾಸ್ಟಿಂಗ್‌ನಿಂದ ಹಿಡಿದು ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದವರೆಗೆ, ಅವರ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ.

PREV
17
ಮಲೈಕಾ ಅರೋರಾ ಫಿಟ್ನೆಸ್ ಸೀಕ್ರೆಟ್

ಚಿತ್ರರಂಗದಲ್ಲಿ ನಟಿಯರು ಫಿಟ್ ಆಗಿರುವುದು ಬಹಳ ಮುಖ್ಯ. ಆದರೆ ಮಲೈಕಾ ಅರೋರಾ ಯಾವ ರೀತಿಯಲ್ಲಿ ತಮ್ಮ ದೇಹವನ್ನು ಫಿಟ್ ಆಗಿ ಕಾಪಾಡಿಕೊಳ್ಳುತ್ತಾರೆ ಎಂಬುದು ಅವರು ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಮಾಡೆಲ್‌ಗಳು ಮತ್ತು ನಟಿಯರು ಇಂತಹ ದೇಹದ ಆಕಾರವನ್ನು ಪಡೆಯಲು ಹಲವು ರೀತಿಯ ಟ್ರೀಟ್‌ಮೆಂಟ್‌ಗಳ ಮೊರೆ ಹೋಗುತ್ತಾರೆ. ಆದರೆ, ನಟಿ ಮಲೈಕಾ ಅರೋರಾ ಅವರು ತಾವು ಯಾವುದೇ ರೀತಿಯ ಕಾಸ್ಮೆಟಿಕ್ ಸರ್ಜರಿ ಅಥವಾ ವೈದ್ಯಕೀಯ ದೇಹದ ವರ್ಧನೆಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಮಾಡಿಸಿಕೊಂಡಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಹಾಗಾದರೆ, ತಮ್ಮ ಫಿಟ್‌ನೆಸ್‌ಗಾಗಿ ಮಲೈಕಾ ಪ್ರತಿದಿನ ಮಾಡುವ ಆಕೆಲಸಗಳು ಯಾವುವು? ಇಲ್ಲಿದೆ ಮಾಹಿತಿ.

27
ಪ್ರತಿದಿನ ಯೋಗಾಭ್ಯಾಸ

ಮಲೈಕಾ ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಯೋಗಕ್ಕೆ ವಿಶೇಷ ಸ್ಥಾನ ನೀಡುತ್ತಾರೆ. ಅವರು ಯೋಗವನ್ನು ಕೇವಲ ಟ್ರೆಂಡ್ ಎಂದು ಪರಿಗಣಿಸುವುದಿಲ್ಲ. ಬದಲಾಗಿ, ಅದನ್ನು ತಮ್ಮ ದೈನಂದಿನ ಜೀವನದ ಪ್ರಮುಖ ಭಾಗವೆಂದು ಭಾವಿಸುತ್ತಾರೆ. ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಯೋಗ ಹಲವು ವರ್ಷಗಳಿಂದ ತಮ್ಮ ಜೀವನದ ಭಾಗವಾಗಿದೆ ಎಂದು ಬರೆದಿದ್ದರು. ಯೋಗ ಕೇವಲ ವ್ಯಾಯಾಮವಲ್ಲ. ಅದು ಮತ್ತೆ ತಮ್ಮೊಂದಿಗೆ ತಾವು ಬೆರೆಯಲು, ಮನಸ್ಸು ಮತ್ತು ದೇಹವನ್ನು ಪುನಃ ಚೈತನ್ಯಗೊಳಿಸಲು ಹಾಗೂ ಸಮತೋಲನವನ್ನು ಕಂಡುಕೊಳ್ಳಲು ಸಹಾಯ ಮಾಡುವ ಮಾರ್ಗವಾಗಿದೆ ಎಂದು ಅವರು ತಿಳಿಸಿದ್ದಾರೆ.

37
ಸ್ಟ್ರೆಂಥ್ ಟ್ರೈನಿಂಗ್‌ಗೆ ಆದ್ಯತೆ

ಯೋಗದ ಜೊತೆಗೆ ಮಲೈಕಾ ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಸ್ಟ್ರೆಂಥ್ ಟ್ರೈನಿಂಗ್‌ಗೂ ಆದ್ಯತೆ ನೀಡುತ್ತಾರೆ. ಈ ರೀತಿಯ ವ್ಯಾಯಾಮಗಳು ಸ್ನಾಯುಗಳ ಬಲ ಮತ್ತು ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ವಯಸ್ಸು ಹೆಚ್ಚಾದಂತೆ ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಮಹಿಳೆಯರು ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಸ್ಟ್ರೆಂಥ್ ಟ್ರೈನಿಂಗ್‌ಗೆ ಆದ್ಯತೆ ನೀಡುವುದು ಮುಖ್ಯ.

47
ಇಂಟರ್‌ಮಿಟೆಂಟ್ ಫಾಸ್ಟಿಂಗ್

ಮಾಧ್ಯಮ ವರದಿಗಳ ಪ್ರಕಾರ, ಮಲೈಕಾ ಅರೋರಾ ಅವರ ಇಂಟರ್‌ಮಿಟೆಂಟ್ ಫಾಸ್ಟಿಂಗ್ ರುಟೀಣ್ ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆಹಾರ ಸೇವಿಸುವ ಸಮಯ ಎಂದು ಹೇಳಲಾಗಿದೆ. ಇಂಟರ್‌ಮಿಟೆಂಟ್ ಫಾಸ್ಟಿಂಗ್‌ನಲ್ಲಿ ವ್ಯಕ್ತಿಯು ದಿನದ ನಿರ್ದಿಷ್ಟ ಗಂಟೆಗಳಲ್ಲಿ ಆಹಾರ ಸೇವಿಸುತ್ತಾರೆ. ಉಳಿದ ಸಮಯದಲ್ಲಿ ಉಪವಾಸ ಇರುತ್ತಾರೆ.

57
ಪೌಷ್ಟಿಕ ಆಹಾರಕ್ಕೆ ಆದ್ಯತೆ

ಫಿಟ್ ಆಗಿರಲು ಕೇವಲ ವ್ಯಾಯಾಮ ಮಾಡಿದರೆ ಸಾಲದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದೂ ಅಷ್ಟೇ ಮುಖ್ಯ. ಮಲೈಕಾ ತಮ್ಮ ಫಿಟ್‌ನೆಸ್‌ಗಾಗಿ ಅತಿಯಾಗಿ ಡಯಟ್ ಮಾಡುವ ಬದಲು, ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್‌ಗಳು, ಖನಿಜಾಂಶಗಳು, ಫೈಬರ್ ಮತ್ತು ಶಕ್ತಿಯನ್ನು ಒದಗಿಸುವ ಆಹಾರ ಪದಾರ್ಥಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ.

67
ಪ್ರಾಣಾಯಾಮ ಅಭ್ಯಾಸ

ಮಲೈಕಾ ಪ್ರಾಣಾಯಾಮವನ್ನೂ ಅಭ್ಯಾಸ ಮಾಡುತ್ತಾರೆ. ಇದನ್ನು ಉಸಿರಾಟದ ವ್ಯಾಯಾಮ ಎಂದೂ ಕರೆಯಲಾಗುತ್ತದೆ. ಪ್ರಾಣಾಯಾಮದಲ್ಲಿ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಉಸಿರಾಟವನ್ನು ನಿಯಂತ್ರಿಸುವುದಕ್ಕೆ ಮಹತ್ವ ನೀಡಲಾಗುತ್ತದೆ.

77
ಫಿಟ್‌ನೆಸ್ ದಿನಚರಿಯಲ್ಲಿ ಸ್ಥಿರತೆ

ಮಲೈಕಾ ಅರೋರಾ ಅವರ ಫಿಟ್‌ನೆಸ್ ತತ್ವದ ಪ್ರಮುಖ ಭಾಗವೆಂದರೆ ಸ್ಥಿರತೆ. ಫಿಟ್ ಆಗಿರಲು ಪ್ರತಿದಿನ ಅತ್ಯಂತ ಕಠಿಣವಾದ ವ್ಯಾಯಾಮಗಳನ್ನು ಮಾಡಲೇಬೇಕೆಂದಿಲ್ಲ. ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗ, ವಾಕಿಂಗ್, ಸ್ಟ್ರೆಂಥ್ ಟ್ರೈನಿಂಗ್ ಮತ್ತು ಇತರ ದೈಹಿಕ ಚಟುವಟಿಕೆಗಳನ್ನು ಪ್ರತಿದಿನ ಮಾಡಬೇಕು.

ನೆನಪಿಡಿ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಸಮಯ ನೀಡುವುದೂ ಅಗತ್ಯ. ಪದೇಪದೇ ಹೊಸ ಫಿಟ್‌ನೆಸ್ ಟ್ರೆಂಡ್‌ಗಳನ್ನು ಅನುಸರಿಸುವ ಬದಲು, ದೀರ್ಘಕಾಲ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವ ಆರೋಗ್ಯಕರ ಅಭ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories