ವಯಸ್ಸಾದಂತೆ ಮಹಿಳೆಯರು ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾಯಿಸಬೇಕು?

First Published | Jun 7, 2022, 5:49 PM IST

ಪ್ರತಿಯೊಬ್ಬ ವ್ಯಕ್ತಿಯು ತನ್ನ ವಯಸ್ಸಿಗೆ ಅನುಗುಣವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿಶೇಷವಾಗಿ ಮಹಿಳೆಯರು 30 ವರ್ಷದ ನಂತರ ತಮ್ಮ ಆರೋಗ್ಯವನ್ನು ಯಾವತ್ತೂ ನಿರ್ಲಕ್ಷಿಸಬಾರದು. ಏಕೆಂದರೆ ಈ ವಯಸ್ಸಿನ ನಂತರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ನೀವು ಈ ಬದಲಾವಣೆಯನ್ನು ನೋಡದಿರಬಹುದು, ಆದರೆ ಜೀವನವನ್ನು ಹೆಲ್ತಿ ಮತ್ತು ಹ್ಯಾಪಿ ಆಗಿರಿಸಲು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.

ಮಹಿಳೆಯರು ಮಲ್ಟಿ ಟಾಸ್ಕರ್ ಗಳು. ಅವರು ಮನೆಕೆಲಸ ಮತ್ತು ಕಚೇರಿ ಕೆಲಸಗಳಲ್ಲಿ ಎಷ್ಟು ತೊಡಗಿಸಿಕೊಳ್ಳುತ್ತಾರೆಂದರೆ, ಕೆಲವರು ಮೀಟಿಂಗ್ ಗಾಗಿ ತಮ್ಮ ತಿಂಡಿ ತಿನ್ನೋದನ್ನು ಬಿಡುತ್ತಾರೆ, ಇನ್ನೂ ಕೆಲವರು ಮನೆಕೆಲಸಗಳನ್ನು ಕಂಪ್ಲೀಟ್ ಮಾಡುವುದರಲ್ಲಿ ತಿನ್ನಲು ಮರೆಯುತ್ತಾರೆ. ಇದು ಅವರಿಗೆ ಅಗತ್ಯವಾದ ಪೋಷಣೆ ಒದಗಿಸುವುದಿಲ್ಲ, ಜೊತೆಗೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಮಹಿಳೆಯರು(Women) ಹೇಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಜ್ಞರಿಂದ ತಿಳಿದುಕೊಳ್ಳೋಣ.

ದೇಹಕ್ಕೆ ಸರಿಯಾದ ಪೋಷಣೆಯ ಅಗತ್ಯವಿದೆ.
ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ನ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕ್ಯಾಥ್ ಲ್ಯಾಬ್ ನ ಮುಖ್ಯಸ್ಥ ಡಾ.ಅತುಲ್ ಮಾಥುರ್ ಪ್ರಕಾರ,  ವಯಸ್ಸಾಗುವಿಕೆಯೊಂದಿಗೆ(Aging) ದೇಹದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಕಳಪೆ ಆರೋಗ್ಯ ಸೇರಿದಂತೆ ಅನೇಕ ಬದಲಾವಣೆಗಳಾಗುತ್ತವೆ. ಕಡಿಮೆ ಆಹಾರವನ್ನು ಸೇವಿಸುವುದು ಮತ್ತು ಕಡಿಮೆ ಪೋಷಕಾಂಶಗಳಿಂದಾಗಿ ಹೆಚ್ಚಿನ ಸಮಸ್ಯೆಗಳು ಕಾಡುತ್ತವೆ, ಇದರಿಂದ ಫಿಟ್ ಆಗಿರಲು ಸಾಧ್ಯವಾಗೋದಿಲ್ಲ.  

Tap to resize

ನಮಗೆ ವಯಸ್ಸಾದಂತೆ, ದೇಹವು ಒಂದೊಂದು ರೋಗಗಳ ಗೂಡಾಗುತ್ತೆ, ಆದ್ದರಿಂದ, ದೇಹದ ರೋಗನಿರೋಧಕ ವ್ಯವಸ್ಥೆಯನ್ನು(Immunity) ಬಲವಾಗಿಡಲು ಸರಿಯಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸೇವಿಸಬೇಕು. ಹೆಚ್ಚುತ್ತಿರುವ ವಯಸ್ಸಿನೊಂದಿಗೆ, ದೇಹವು ಕಡಿಮೆ ಕ್ಯಾಲೊರಿಗಳನ್ನು ಹೀರಿಕೊಳ್ಳುತ್ತದೆ, ಇದರಿಂದಾಗಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. 

healthy food

ವಯಸ್ಸಾದಂತೆ ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಆಹಾರ ಸೇವಿಸಲು ಸಾಧ್ಯವಾಗೋದಿಲ್ಲ ಅಷ್ಟೇ ಅಲ್ಲ ವಯಸ್ಸಾದಂತೆ ದೇಹವು ಆಹಾರದಿಂದ ಕಡಿಮೆ ಪೋಷಣೆಯನ್ನು ಹೀರಿಕೊಳ್ಳುತ್ತದೆ. ಜೀವಸತ್ವಗಳು ದೇಹವು ಬೆಳೆಯಲು ಮತ್ತು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತೆ. 13 ಅಗತ್ಯ ಜೀವಸತ್ವಗಳಿವೆ - ವಿಟಮಿನ್ ಎ(Vitamin A), ಸಿ, ಡಿ, ಇ, ಕೆ ಮತ್ತು ಬಿ. ಜೀವಸತ್ವಗಳಂತಹ ಖನಿಜಗಳು ದೇಹವನ್ನು ಆಕ್ಟಿವ್ ಆಗಿಡಲು ಸಹಾಯ ಮಾಡುತ್ತವೆ. ಇವುಗಳನ್ನು ಸೇವಿಸುವುದು ವಯಸ್ಸಾದ ನಂತರವೂ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ. 

ಆರೋಗ್ಯ ತಜ್ಞರ ಪ್ರಕಾರ ಕೋವಿಡ್ -19 ಬಳಿಕ, ವರ್ಕ್ ಫ್ರಮ್ ಹೋಮ್ ನಿಂದಾಗಿ ಜನ ಮನೆ ಕೆಲಸ, ಆಫೀಸ್(Office) ಕೆಲಸ ಎಂದು ತಮ್ಮ ಜೀವನವನ್ನು ತುಂಬಾ ಬ್ಯುಸಿ ಆಗಿಸಿಬಿಟ್ಟಿದ್ದಾರೆ. ಇದರ ನಡುವೆ ಕೊರಾನಾದಿಂದ ರಕ್ಷಣೆ ಪಡೆಯಲು ಜನರು ತಮ್ಮ ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಮಹಿಳೆಯರು, ವಿಶೇಷವಾಗಿ, ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿದ್ದಾರೆ. 

ಮಹಿಳೆಯರು ಆರೋಗ್ಯಕರ ಲೈಫ್ ಸ್ಟೈಲ್ ಹೊಂದಿರುವುದು ಬಹಳ ಮುಖ್ಯ. ಈ ಆರೋಗ್ಯಕರ ಜೀವನಶೈಲಿಯು ಆರೋಗ್ಯಕರ ಆಹಾರ, ಸಾಕಷ್ಟು ನೀರಿನ ಸೇವನೆ, ನಿಯಮಿತ ವ್ಯಾಯಾಮ(Exercise) ಮತ್ತು ನಿಯಮಿತ ತಪಾಸಣೆಗಳನ್ನು ಒಳಗೊಂಡಿದೆ. ಇವುಗಳನ್ನೆಲ್ಲಾ ನೀವು ತಪ್ಪದೆ ಮಾಡಬೇಕು. 

25 ರಿಂದ 35 ವರ್ಷ ವಯಸ್ಸಿನ ಮಹಿಳೆಯಾರಿಗೆ ಗರ್ಭಧರಿಸಲು(Pregnancy) ಇದು ಸೂಕ್ತ ಸಮಯವಾಗಿದೆ ಮತ್ತು ಈ ವಯಸ್ಸಿನ ನಂತರ ಮಹಿಳೆಯರ ಮೊಟ್ಟೆಗಳ ಸಂಖ್ಯೆ ಮತ್ತು ಗುಣಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾರ್ಮೋನುಗಳ ಬದಲಾವಣೆಗಳು, ಅನಿಯಮಿತ ಋತುಚಕ್ರ, ಮೊಡವೆಗಳು, ಹಿಮೋಗ್ಲೋಬಿನ್ ಮಟ್ಟಗಳು ಬದಲಾಗುತ್ತವೆ. ಆದುದರಿಂದ ಈ ಸಮಯದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಆಹಾರವನ್ನು ಸೇವಿಸುವ ಬಗ್ಗೆ ಮಹಿಳೆಯರು ಜಾಗರೂಕರಾಗಿರಬೇಕು.

ಮಹಿಳೆಯರು ತಮ್ಮ ಆಹಾರದಲ್ಲಿ ಪ್ರೋಟೀನ್(Protein), ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಡಿ, ಒಮೆಗಾ -3 ಸೇವಿಸಬೇಕು, ಅಲ್ಲದೇ ಕೊಬ್ಬಿನಾಮ್ಲಗಳಂತಹ ಸೂಕ್ಷ್ಮ ಪೋಷಕಾಂಶಗಳಿಗಾಗಿ ಮೊಳಕೆಕಾಳುಗಳು, ಹಾಲು, ಚೀಸ್, ಮೊಟ್ಟೆಗಳು, ಮಾಂಸ, ಮೀನುಗಳಿಂದ ಮೊದಲಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ತುಂಬಾನೆ ಮುಖ್ಯ.

ಫಾಸ್ಟ್ ಫುಡ್ (Fast food)ನಿಮಗೆ ಇಷ್ಟಾನೇ ಇರಬಹುದು, ಆದರೆ ಇದರ ಅತಿಯಾದ ಸೇವನೆಯು ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹಸಿವನ್ನು ಕಡಿಮೆ ಮಾಡಲು ನೀವು ಫಾಸ್ಟ್ ಫುಡ್ ಬದಲಾಗಿ ಆರೋಗ್ಯಕರ ಆಹಾರ ಸೇವಿಸಿ. ಹೆಚ್ಚು ಕೊಬ್ಬು ಮತ್ತು ಉಪ್ಪಿನ ಆಹಾರಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
 

ಇದಲ್ಲದೆ, ಮಹಿಳೆಯರು ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಹೊಂದಿರುವುದು ಸಾಮಾನ್ಯವಾಗಿದೆ, ಈ ಸಮಸ್ಯೆ ನಿವಾರಿಸಲು ಮಹಿಳೆಯರು ಎಣ್ಣೆಯುಕ್ತ, ಕರಿದ, ಸೋಡಿಯಂ(Sodium) ಸಮೃದ್ಧ ಮತ್ತು ಮಸಾಲೆಯುಕ್ತ ಆಹಾರ ಸೇವಿಸೋದನ್ನು ಅವಾಯ್ಡ್ ಮಾಡಬೇಕು. ಅಂತಹ ಆಹಾರವು ದೇಹದ ತೂಕ ಹೆಚ್ಚಳ ಮತ್ತು ಅಸಿಡಿಟಿಗೆ ಕಾರಣವಾಗಬಹುದು.
 

ಮಹಿಳೆಯರು 20 ವರ್ಷ ವಯಸ್ಸಿನ ಬಳಿಕ ನಿಯಮಿತವಾಗಿ ವೈದ್ಯರನ್ನು ಅಥವಾ ಸ್ತ್ರೀರೋಗ ತಜ್ಞರನ್ನು(Consult doctor) ಭೇಟಿ ಮಾಡಬೇಕು ಮತ್ತು ಸಮಾಲೋಚಿಸಬೇಕು ಮತ್ತು ಪರಿಶೀಲಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಲೈಫ್ ಸ್ಟೈಲ್ ಅನ್ನು ಅನುಸರಿಸಬೇಕು. ಹೀಗಿದ್ದರೆ ಮಾತ್ರ ವಯಸ್ಸಾದ ಬಳಿಕವೂ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.

Latest Videos

click me!