ಪ್ರೆಗ್ನನ್ಸಿ ಯಲ್ಲಿ ಸನ್ ಸ್ಕ್ರೀನ್ ಹಚ್ಚಿದ್ರೆ, ಮಗುವಿಗೆ ಏನಾದ್ರು ಪ್ರಾಬ್ಲಮ್ ಆಗ್ಬೋದಾ?

First Published | Jun 3, 2022, 6:03 PM IST

ಪ್ರೆಗ್ನೆನ್ಸಿ ಸಮಯ ಎಂದರೆ ಅದೊಂದು ಸುಂದರ ಅನುಭವ ಇರಬಹುದು. ಆದರೆ ಈ ಸಮಯದಲ್ಲಿ ಅದೆಷ್ಟೋ ಸಮಸ್ಯೆಗಳು ಕಾಡುತ್ತವೆ. ಗರ್ಭಾವಸ್ಥೆಯಲ್ಲಿ, ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ. ಈ ಸಮಯದಲ್ಲಿ, ಚರ್ಮದ ಒಳಗೆ ಅನೇಕ ಬದಲಾವಣೆಗಲಾಗುತ್ತವೆ, ಆದ್ದರಿಂದ ಗರ್ಭಿಣಿಯರು ಈ ಸಮಯದಲ್ಲಿ ಯಾವುದೇ ಸೌಂದರ್ಯ ಅಥವಾ ಚರ್ಮದ ಆರೈಕೆ ಉತ್ಪನ್ನಗಳನ್ನು ಬಳಸೋದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. 
 

ಬೇಸಿಗೆಯಲ್ಲಿ, ಸೂರ್ಯನು ತುಂಬಾ ಪ್ರಕಾಶಮಾನವಾಗಿರುತ್ತಾನೆ ಮತ್ತು ಸೂರ್ಯನ ಹಾನಿಕಾರಕ ಯುವಿ ಕಿರಣಗಳನ್ನು(UV rays) ತಪ್ಪಿಸಲು ಚರ್ಮಕ್ಕೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ಒಳ್ಳೆಯದು. ಸನ್ ಸ್ಕ್ರೀನ್ ಹಚ್ಚಿದ ನಂತರ, ನಮ್ಮ ಚರ್ಮವನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸಲಾಗುತ್ತದೆ ಮತ್ತು ಅದರ ಮೇಲೆ ಸೂರ್ಯನಿಂದ ಯಾವುದೇ ಹಾನಿಯಾಗುವುದಿಲ್ಲ. 
 

ಸೌಂದರ್ಯ ಮತ್ತು ಚರ್ಮದ ಆರೈಕೆಗೆ ಬಿಸಿಲಿನಲ್ಲಿ ಹೊರಗೆ ಹೋಗುವ ಮೊದಲು ಸನ್ ಸ್ಕ್ರೀನ್ ಹಚ್ಚಲು ತಜ್ಞರು ಸಲಹೆ ನೀಡುತ್ತಾರೆ. ಇದು ಉತ್ತಮ ಪರಿಹಾರ ಕೂಡ ಆಗಿದೆ. ಆದರೆ ಗರ್ಭಿಣಿ ಮಹಿಳೆಗೆ ಸನ್ ಸ್ಕ್ರೀನ್ ಹಚ್ಚೋದು ಸರೀನಾ? ಗರ್ಭಿಣಿ (Pregnant) ಮಹಿಳೆಯರು ಸನ್ ಸ್ಕ್ರೀನ್ ಹಚ್ಚುವ ಮುನ್ನ, ಈ ಸ್ಕಿನ್ ಪ್ರಾಡಕ್ಟ್ ಅವರಿಗೆ ಸುರಕ್ಷಿತವೇ ಅಥವಾ ಅಲ್ಲವೇ ಎಂದು ತಿಳಿದಿರಬೇಕು.

Tap to resize

ಗರ್ಭಾವಸ್ಥೆಯಲ್ಲಿ(Pregnancy)  ಸನ್ ಸ್ಕ್ರೀನ್ ಹಚ್ಚಬಹುದೇ?
ಹೌದು, ಗರ್ಭಿಣಿಯರು ಸನ್ ಸ್ಕ್ರೀನ್ ಅನ್ನು ಬಳಸಬಹುದು. ಗರ್ಭಾವಸ್ಥೆಯಲ್ಲಿ ಯು ವಿ ಕಿರಣಗಳು ಮಗುವಿನ ಮೇಲೆ ನೇರವಾಗಿ ಬೀಳುವುದಿಲ್ಲ, ಆದ್ದರಿಂದ ತಾಯಿಯ ಚರ್ಮಕ್ಕೆ ಆಗುವ ಯಾವುದೇ ಹಾನಿಯು ಮಗುವಿನ ಮೇಲೆ ಪರಿಣಾಮ ಬೀರೋದಿಲ್ಲ. ಆದರೆ ಗರ್ಭಿಣಿ ಮಹಿಳೆ ಕೆಮಿಕಲ್ ಫ್ರೀ(Chemical free) ಮತ್ತು ಆರೋಗ್ಯಕರ ಪದಾರ್ಥಗಳನ್ನು ಹೊಂದಿರುವ ಸನ್ಸ್ಕ್ರೀನ್ ಆಯ್ಕೆ ಮಾಡಬೇಕು.

ಸನ್ ಸ್ಕ್ರೀನ್ ನಲ್ಲಿ ಏನೇನು ಇರಬೇಕು?
ಗರ್ಭಾವಸ್ಥೆಯಲ್ಲಿ, ಚರ್ಮವು(Skin) ಬದಲಾಗುತ್ತದೆ ಮತ್ತು ಮಹಿಳೆಯ ಚರ್ಮವು ಕೆಲವು ಪದಾರ್ಥಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು. ಅದೇ ಸಮಯದಲ್ಲಿ, ಮಗುವು ಒಂಬತ್ತು ತಿಂಗಳವರೆಗೆ ತಾಯಿಯ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ ನೀವು ಗರ್ಭಾವಸ್ಥೆಯಲ್ಲಿ ಕೆಮಿಕಲ್ ಫ್ರೀ ವಸ್ತುಗಳನ್ನು ಬಳಸಬೇಕು. ಮಗುವಿನ ಆರೋಗ್ಯಕ್ಕಾಗಿ  ಆಹಾರದ ಬಗ್ಗೆ ಕಾಳಜಿ ವಹಿಸುವಂತೆ, ನಿಮ್ಮ ಚರ್ಮಕ್ಕೆ ಹಚ್ಚುವ ಎಲ್ಲ ಕ್ರೀಂಗಳ ಬಗ್ಗೆ ಜಾಗರೂಕರಾಗಿರಬೇಕು .

ಸನ್ ಸ್ಕ್ರೀನ್ ಹಾನಿಕಾರಕ
ಸನ್ ಸ್ಕ್ರೀನ್ ನಲ್ಲಿರುವ ಆಕ್ಸಿಬೆನ್ಜೋನ್ ಎಂಬ ವಸ್ತುವನ್ನು ಎಂಡೋಕ್ರೈನ್ ಡಿಸ್ಪರ್ ಎಂದು ಕರೆಯಲಾಗುತ್ತದೆ, ಇದು ವಿಶೇಷವಾಗಿ ಗರ್ಭಿಣಿಯರಿಗೆ ಹಾನಿಕಾರಕವಾಗಿದೆ. ಆದುದರಿಂದ ನಿಮ್ಮ ಸನ್ ಸ್ಕ್ರೀನ್ ನಲ್ಲಿ ಈ ವಸ್ತು ಹೆಚ್ಚಾಗಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಸರಿಯಾದ ಕೆಮಿಕಲ್ ಫ್ರೀ ಸನ್ ಸ್ಕ್ರೀನ್ ಆಯ್ಕೆ ಮಾಡಿ.

ಅಧ್ಯಯ ಏನು ಹೇಳುತ್ತೆ? 
ಗರ್ಭಾವಸ್ಥೆಯಲ್ಲಿ ಆಕ್ಸಿಬೆನ್ಜೋನ್ ಹೊಂದಿರುವ ಪ್ರಾಡಕ್ಟ್ ಗಳ ಬಳಕೆಯು ಸ್ತನ ಗ್ರಂಥಿಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು ಎಂದು 2018 ರಲ್ಲಿ ನಡೆದ ಒಂದು ಅಧ್ಯಯನವು ಬಹಿರಂಗಪಡಿಸಿದೆ, ಇದು ಮಗುವಿನ ಜನನದ ನಂತರ ಮಗುವಿನ(Baby) ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಆದುದರಿಂದ ಇದನ್ನು ಬಳಕೆ ಮಾಡೋದು ಬಿಡಿ.

ತುಂಬಾ ಹಾನಿಕಾರಕ(Danger)
ಆಕ್ಸಿಬೆನ್ಜೋನ್ ಸಮುದ್ರ ಸಸ್ತನಿಗಳು ಮತ್ತು ಮಾನವರ ವೀರ್ಯ, ಪ್ಲಾಸೆಂಟಾ ಮತ್ತು ಎದೆಹಾಲನ್ನು ಕಲುಷಿತಗೊಳಿಸುತ್ತದೆ ಎಂದು ಹೆಚ್ಚಿನ ಅಧ್ಯಯನಗಳು ತೋರಿಸಿವೆ.  ಆಕ್ಸಿಬೆನ್ಜೋನ್ ಗರ್ಭಧಾರಣೆ, ಸ್ತನ್ಯಪಾನ ಅಥವಾ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾನಿಕಾರಕವಾಗಿದೆ. ಆದುದರಿಂದ ನೀವು ಬಳಕೆ ಮಾಡುವ ಸನ್ ಸ್ಕ್ರೀನ್ ನಲ್ಲಿ ಆಕ್ಸಿಬೆನ್ಜೋನ್ ಇಲ್ಲ ಎಂಬುದನ್ನು ಖಚಿತಪಡಿಸಿ.

ಸನ್ ಸ್ಕ್ರೀನ್ ಬಳಸುವುದು ಹೇಗೆ?
ಗರ್ಭಿಣಿಯರು ಮಿನರಲ್ /ಫಿಸಿಕಲ್ ಸನ್ ಸ್ಕ್ರೀನ್ ಗಳನ್ನು ಬಳಸಬಹುದು. ಮಿನರಲ್ ಸನ್ ಸ್ಕ್ರೀನ್ ನ ಅತ್ಯಂತ ಜನಪ್ರಿಯ ಘಟಕಾಂಶವೆಂದರೆ ಜಿಂಕ್ ಆಕ್ಸೈಡ್(Zinc Oxide), ಇದು ರಾಸಾಯನಿಕ ಸನ್ ಸ್ಕ್ರೀನ್ ಗಳಿಗಿಂತ ಸುರಕ್ಷಿತವಾಗಿದೆ. ಇದನ್ನು ನೀವು ಬಳಕೆ ಮಾಡಬಹುದು. 

Latest Videos

click me!