ಅಲೆಜಿ ಫಾತಿಮಾ ರಜಾ, ಪಾಕಿಸ್ತಾನದ ಉದ್ಯಮರಂಗ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಹೆಸರು ಮಾಡಿರುವ ಫಾತಿಮಾ ರಜಾ ಮದುವೆಯಾಗಿದ್ದು 2018ರಲ್ಲಿ. ಪಾಕಿಸ್ತಾನದ ಖ್ಯಾತ ನಟ ಫಿರೋಜ್ ಖಾನ್ ಅವರನ್ನು ಅದ್ದೂರಿ ವಿವಾಹ ಮಹೋತ್ಸವದಲ್ಲಿ ಮದುವೆಯಾದ ಫಾತಿಮಾ ರಜಾ ಅವರು ಆ ಮದುವೆಯಲ್ಲಿ ಧರಿಸಿದ ನೆಕ್ಲೇಸ್ ಬೆಲೆ 45 ಲಕ್ಷ ರೂಪಾಯಿಗಳು. ಬಂಗಾರ, ಮುತ್ತು ಹವಳವನ್ನು ಒಳಗೊಂಡಿತ್ತು ಈ ನೆಕ್ಲೇಸ್, ಆದರೆ ದುರಾದೃಷ್ಟವಶಾತ್ ಈ ಜೋಡಿ ಕಳೆದ ವರ್ಷ ಬೇರೆಯಾಗಿದ್ದಾರೆ.