ಭವಿಷ್ಯದ ಚಿತ್ರಣ ರೂಪಿಸಿ
ನೀವು ವಿವರವಾಗಿ, ನಿಮ್ಮ ಕನಸಿನ ಜೀವನ ಹೇಗಿರುತ್ತದೆ ಎಂದು ಊಹಿಸಬೇಕು. ನಿಮ್ಮ ಜೀವನದ ಎಲ್ಲಾ ಅಂಶಗಳನ್ನು ಪರಿಗಣಿಸಿ, ಒಂದು ವರ್ಷದ ಅವಧಿಯಲ್ಲಿ ನೀವು ಎಲ್ಲಿರಲು ಬಯಸುತ್ತೀರಿ ಎಂಬುದನ್ನು ಕಲ್ಪಿಸಿಕೊಳ್ಳಿ. ನಿಮ್ಮ ಆದರ್ಶ ವೃತ್ತಿಜೀವನ, ಸಂಬಂಧಗಳು, ಆರೋಗ್ಯ, ವೈಯಕ್ತಿಕ ಬೆಳವಣಿಗೆ (personal development)ಎಲ್ಲದರ ಬಗ್ಗೆಗಿನ ಚಿತ್ರಣ ನಿಮ್ಮ ಮುಂದಿರಲಿ. ಈ ಚಿತ್ರಣವು ನಿಮ್ಮ ಬೆಳವಣಿಗೆಗೆ ದಾರಿದೀಪವಾಗಬಹುದು. ನಿಮ್ಮ ದೃಷ್ಟಿಕೋನವನ್ನು ಬರೆಯಿರಿ. ಅದರಂತೆ ನಡೆದರೆ ಕನಸು ನನಸಾಗುವುದು.