ಫರ್ಟಿಲಿಟಿ(Fertility) ಅವಧಿಯಲ್ಲಿ ಲೈಂಗಿಕತೆಯಿಂದ ದೂರವಿರುವುದು, ಹೊರ ತೆಗೆಯುವ ವಿಧಾನ ಇತ್ಯಾದಿ ನೈಸರ್ಗಿಕ ವಿಧಾನಗಳು ಗರ್ಭವನ್ನು ತಡೆಯುತ್ತವೆ. ಪುರುಷ ಮತ್ತು ಮಹಿಳೆಯ ನಡುವೆ ಕಾಂಡೋಮ್ ಅನ್ನು ಬಳಸುವಂತಹ ತಡೆ ವಿಧಾನ, ಪ್ಯಾಚ್‌ಗಳು, ಜನನ ನಿಯಂತ್ರಣ ಮಾತ್ರೆಗಳು ಮತ್ತು ಯೋನಿ ಉಂಗುರಗಳ ಬಳಕೆಯಿಂದಾಗಿ ಕೂಡಾ ಗರ್ಭ ಕಟ್ಟುವಿಕೆ ಭಯವಿಲ್ಲದೆ ಸೆಕ್ಸ್ ನಡೆಸಬಹುದು. ಇದಲ್ಲದೆ, ಕಾಪರ್-ಟಿ, ಇಂಜೆಕ್ಷನ್‌ಗಳ ಬಳಕೆ, ಟ್ಯೂಬೆಕ್ಟಮಿಯಂತಹ ಶಾಶ್ವತ ವಿಧಾನಗಳೂ ಅನಗತ್ಯ ಪ್ರೆಗ್ನೆನ್ಸಿಯನ್ನು ತಡೆಯುತ್ತವೆ.