ಬೆಂಗಳೂರಿನ ವೈದ್ಯೆ ಡಾ. ರಶ್ಮಿ ಶಂಕರ್ ದೆಹಲಿಯಲ್ಲಿ ಡಿಸೆಂಬರ್ 18ಎಂದು ನಡೆದ Mrs.ಇಂಡಿಯಾ ಅರ್ತ್ 2021ನಲ್ಲಿ ಗೆದ್ದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
27
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಶ್ಮಿ ಶಂಕರ್ ವೈದ್ಯೆ, ಕೊರೋನಾ ವಾರಿಯರ್, ಡ್ಯಾನ್ಸರ್ ಕೂಡಾ ಆಗಿದ್ದು ಈಗ ಸ್ಪರ್ಧೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಿ ಕಿರೀಟವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
37
ದೇಶಾದ್ಯಂತ ಹಲವು ಭಾಗಗಳಿಂದ ಬಂದಿದ್ದ 30ಕ್ಕೂ ಹೆಚ್ಚು ಸ್ಪರ್ಧಿಗಳೊಂದಿಗೆ ರಶ್ಮಿ ಸ್ಪರ್ಧಿಸಿ ಅವರು ಕಿರೀಟ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಹಳಷ್ಟು ಸಿನಿ ತಾರೆಗಳೂ ಭಾಗವಹಿಸಿದ್ದರು.
47
ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಯನ್ನು ನೀಡಿದ ಶ್ರೀಮತಿ ಇಂಡಿಯಾ ಅರ್ಥ್ ಮತ್ತು ಆದಿವಾ ಇನ್ನೋವೇಶನ್ಸ್ ನಿರ್ದೇಶಕರಾದ ಶ್ರೀಮತಿ ರಿತಿಕಾ ವಿನಯ್ ಮತ್ತು ಶ್ರೀ ವಿನಯ್ ಯಾದವ ತಂಡಕ್ಕೆ ಡಾ.ರಶ್ಮಿ ಕೃತಜ್ಞತೆ ಸಲ್ಲಿಸಿದ್ದಾರೆ.
57
ಕಿರೀಟವನ್ನು ಗೆಲ್ಲುವ ಮೂಲಕ ತನ್ನ ಕುಟುಂಬವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
67
ಅವರು ಬಹಳಷ್ಟು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳೆಯಾಗಿದ್ದು, ನೃತ್ಯದಲ್ಲಿ ವೃತ್ತಿಜೀವನವನ್ನು ಹೊಂದಿದ್ದಾರೆ.
77
ಅಪೋಲೋ ಸ್ಪೆಕ್ಟ್ರಾ ಕೋರಮಂಗಲದಲ್ಲಿ ಕೆಲಸ ಮಾಡುವ ಅರಿವಳಿಕೆ ತಜ್ಞೆ, ರೂಪದರ್ಶಿ, ಲೋಕೋಪಕಾರಿ ಮತ್ತು ಕೋವಿಡ್ ವಾರಿಯರ್ ಇವರು USA ಅಲ್ಲಿ ಅವರು ಭಾರತವನ್ನು ಪ್ರತಿನಿಧಿಸುತ್ತಾರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.