ಹೌದು, ಆರೋಗ್ಯಕರ ಗರ್ಭಾಶಯವು(Uterus) ಮುಖ್ಯ ಏಕೆಂದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅನೇಕ ಮಹಿಳೆಯರ ಆರೋಗ್ಯ ಸಮಸ್ಯೆಗಳು ಗರ್ಭಾಶಯಕ್ಕೆ ಸಂಬಂಧಿಸಿವೆ. ಗರ್ಭಾಶಯದ ಸಮಸ್ಯೆಯಿಂದಾಗಿ ಮಗುವನ್ನ ಪಡೆಯಲು ತೊಂದರೆ ಉಂಟಾಗುತ್ತದೆ. ಫೈಬ್ರಾಯ್ಡ್ಸ್, ಸೋಂಕು, ಪಾಲಿಪ್ಸ್, ಪ್ರೊಲ್ಯಾಪ್ಸ್, ಗರ್ಭಾಶಯದ ನೋವು ಮುಂತಾದ ಗರ್ಭಾಶಯದ ಸಮಸ್ಯೆಗಳನ್ನು ತಪ್ಪಿಸಲು ಈ ಟಿಪ್ಸ್ ಬಳಸಬಹುದು.
ಶಕ್ತಿ ಮುದ್ರೆ(Shakti mudra), ಈ ಹೆಸರು ಮಾ ಶಕ್ತಿ ಅಥವಾ ಪಾರ್ವತಿಯಿಂದ ಬಂದಿದೆ ಮತ್ತು ಇದು ನಮ್ಮ ದೇಹದಲ್ಲಿನ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತೆ. ಈ ಭಂಗಿಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತೆ. ಇದನ್ನು ಹೇಗೆ ಮಾಡೋದು ಮತ್ತು ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಶಕ್ತಿ ಮುದ್ರೆ ಮಾಡೋದು ಹೇಗೆ?
ಇದನ್ನು ಮಾಡಲು, ಮೊದಲು ಸುಖಾಸನ ಭಂಗಿಯಲ್ಲಿ ಕುಳಿತುಕೊಳ್ಳಿ.
ನಂತರ ಎರಡೂ ಕೈಗಳ ಹೆಬ್ಬೆರಳುಗಳನ್ನು ಅಂಗೈಯ ಮೇಲೆ ಇರಿಸಿ ಮತ್ತು ಮುಷ್ಠಿ ಕಟ್ಟಿ.
ಈಗ ಎರಡೂ ಕೈಗಳ ಉಂಗುರ ಬೆರಳು ಮತ್ತು ಕಿರಿಯ ಬೆರಳುಗಳನ್ನು ನೇರಗೊಳಿಸಿ ಮತ್ತು ಅವುಗಳನ್ನು ಒಟ್ಟಿಗೆ ಮಾಡಿ.
ಈ ಸಮಯದಲ್ಲಿ, ಎರಡೂ ಕೈಗಳ ತೋರು ಮತ್ತು ಮಧ್ಯದ ಬೆರಳುಗಳ ಹೆಬ್ಬೆರಳನ್ನು ಒತ್ತಿ.
ಈ ಭಂಗಿಯಲ್ಲಿ, ಸಾಮಾನ್ಯವಾಗಿ ಉಸಿರಾಡುತ್ತಲೇ ಇರಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ.
ಕೆಲವು ನಿಮಿಷಗಳ ನಂತರ, ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.
ಈ ಮುದ್ರೆಯನ್ನು ಯಾವುದೇ ಧ್ಯಾನ(Meditation) ಭಂಗಿಯಲ್ಲಿ ಪ್ರತಿದಿನ 5-10 ನಿಮಿಷಗಳ ಕಾಲ ಮಾಡಿ.
ಶಕ್ತಿ ಮುದ್ರೆಯ ಪ್ರಯೋಜನಗಳೇನು?
ಆರೋಗ್ಯಕರ ಗರ್ಭಾಶಯದ ಭಂಗಿ ಅನಿಯಮಿತ ಋತುಚಕ್ರವನ್ನು(Periods) ಎದುರಿಸಲು ಸಹಾಯ ಮಾಡುತ್ತೆ.
ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಗಳ ವಿರುದ್ಧ ರಕ್ಷಿಸುತ್ತೆ ಮತ್ತು ಅದನ್ನು ಎದುರಿಸಲು ಸಹಾಯ ಮಾಡುತ್ತೆ.
ಹಾರ್ಮೋನುಗಳ ಸಮತೋಲಿತ ಸ್ಥಿತಿಯನ್ನು ನೀಡುತ್ತೆ.
ಪಿಸಿಓಎಸ್(PCOS) ಮತ್ತು ಎಂಡೊಮೆಟ್ರಿಯೋಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಅಂಡಾಶಯಗಳ ಸುಧಾರಿತ ಕಾರ್ಯನಿರ್ವಹಣೆಗೆ ಈ ಮುದ್ರೆ ಸಹಾಯ ಮಾಡುತ್ತೆ.
ಆರೋಗ್ಯಕರ ಮತ್ತು ಬಲವಾದ ಬರ್ತ್ ಕೆನಾಲ್ಗೆ ಸಹಾಯ ಮಾಡುತ್ತೆ. ಹಾಗಾಗಿ ಈ ಮುದ್ರೆಯನ್ನು ಮಾಡುವುದನ್ನು ಮರೆಯಬೇಡಿ.
ಶಕ್ತಿ ಮುದ್ರೆಯ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ
ಒತ್ತಡವನ್ನು ನಿವಾರಿಸುತ್ತೆ
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ.
ಶಕ್ತಿ ಮತ್ತು ಸಕಾರಾತ್ಮಕ ಮನೋಭಾವ ಹೆಚ್ಚಿಸುತ್ತೆ.
ಮೆದುಳಿನ(Bain) ಕಾರ್ಯನಿರ್ವಹಣೆಯ ಸಾಮರ್ಥ್ಯ ಹೆಚ್ಚಾಗುತ್ತೆ.
ಮನಸ್ಸನ್ನು ಶಾಂತಗೊಳಿಸುತ್ತೆ.
ಏಕಾಗ್ರತೆಯನ್ನು ಸುಧಾರಿಸಲು ಸಹ ಇದು ಸಹಾಯಕವಾಗಿದೆ.
ಈ ಸಲಹೆಗಳ ಸಹಾಯದಿಂದ ನೀವು ನಿಮ್ಮ ಗರ್ಭಾಶಯವನ್ನು ಬಲಪಡಿಸಬಹುದು.