ಅನೇಕ ಮಹಿಳೆಯರು ಇದ್ದಕ್ಕಿದ್ದಂತೆ ಗರ್ಭಾವಸ್ಥೆಯಲ್ಲಿ (pregnancy) ಹಸಿವನ್ನು ಕಳೆದುಕೊಳ್ಳಲು ಅಥವಾ ಜೀರ್ಣಕ್ರಿಯೆಯಲ್ಲಿ ತೊಂದರೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ, ಅಂದ್ರೆ ಅವರು ಪ್ರೆಗ್ನನ್ಸಿ ಬ್ಲೂ ಸಮಸ್ಯೆಯನ್ನು ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಇತರ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮಹಿಳೆಯರಿಗೆ ವೀಳ್ಯದೆಲೆಯನ್ನು ಜಗಿಯಲು ಹೇಳಲಾಗುತ್ತೆ..
ವೀಳ್ಯದೆಲೆ (betel leaves) ಶತಮಾನಗಳಿಂದ ಭಾರತೀಯ ಪಾಕಪದ್ಧತಿ ಮತ್ತು ಆಹಾರದ ಒಂದು ಭಾಗವಾಗಿದೆ. ಹಿಂದಿನ ಕಾಲದಲ್ಲಿ ಊಟದ ನಂತರ ಪಾನ್ ತಿನ್ನುತ್ತಿದ್ದನು. ವೀಳ್ಯದೆಲೆ ತಿನ್ನೋದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ. ಆದರೆ, ಗರ್ಭಿಣಿಯರು ಅದನ್ನು ತಿನ್ನುವ ಮೊದಲು ವೀಳ್ಯದೆಲೆ ತಮಗೆ ಸುರಕ್ಷಿತವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು.
ವೀಳ್ಯದೆಲೆಯ ಗುಣಲಕ್ಷಣಗಳು: ವೀಳ್ಯದೆಲೆಯಲ್ಲಿ ಸೋಂಕು ನಿವಾರಕ, ಇಮ್ಯುನೊಮೋಡ್ಯುಲೇಟರಿ, ಹೆಪ್ಟೋ ಪ್ರೊಟೆಕ್ಟಿವ್, ಹುಣ್ಣು ವಿರೋಧಿ, ಉರಿಯೂತ ನಿವಾರಕ, ಹಾಗೆ ಮಧುಮೇಹ (diabetes) ವಿರೋಧಿ ಗುಣಗಳಿವೆ. ಅಷ್ಟೇ ಅಲ್ಲ ವೀಳ್ಯದೆಲೆ ಮೌತ್ ಫ್ರೆಶನರ್ ಆಗಿಯೂ ಕಾರ್ಯನಿರ್ವಹಿಸುತ್ತೆ. ಇದು ಬಾಯಿಯ ನೈರ್ಮಲ್ಯವನ್ನು ಉತ್ತೇಜಿಸುತ್ತೆ. ಇದು ನಂಜುನಿರೋಧಕ ಗುಣಗಳನ್ನು ಸಹ ಹೊಂದಿದೆ.
ಗರ್ಭಾವಸ್ಥೆಯಲ್ಲಿ ವೀಳ್ಯದೆಲೆಯನ್ನು ಏಕೆ ನೀಡಲಾಗುತ್ತೆ?: ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ವೀಳ್ಯದೆಲೆ ತಿನ್ನೋದು ಗರ್ಭಿಣಿ ಮಹಿಳೆಯ ಜೀರ್ಣಕ್ರಿಯೆ(digestion) ಸುಧಾರಿಸುತ್ತೆ ಮತ್ತು ಹಸಿವನ್ನು ಉತ್ತೇಜಿಸುತ್ತೆ. ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕೆಮ್ಮು, ಒಸಡುಗಳಲ್ಲಿ ರಕ್ತಸ್ರಾವ, ನಿರ್ಜಲೀಕರಣ, ಗಾಯ, ಊತ, ಮಲಬದ್ಧತೆ, ಮಧುಮೇಹ, ತಲೆನೋವು ಮತ್ತು ಬೆನ್ನುನೋವನ್ನು ನಿವಾರಿಸುತ್ತೆ .
ಗರ್ಭಾವಸ್ಥೆಯಲ್ಲಿ ವೀಳ್ಯದೆಲೆ ತಿನ್ನಬಹುದೇ?: ವಿಶ್ವ ಆರೋಗ್ಯ ಸಂಸ್ಥೆಯ (World health organisation)ವರದಿಗಳ ಪ್ರಕಾರ, ಗರ್ಭಾವಸ್ಥೆಯಲ್ಲಿ ವೀಳ್ಯದೆಲೆಯನ್ನು ಜಗಿಯುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ ಮತ್ತು ಇದು ಗರ್ಭಧಾರಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾಗೆಯೇ, ವೀಳ್ಯದೆಲೆಯನ್ನು ದೀರ್ಘಕಾಲದವರೆಗೆ ತಿನ್ನುವುದು ಕ್ಯಾನ್ಸರ್ಗೆ ಕಾರಣವಾಗಬಹುದು, ವಿಶೇಷವಾಗಿ ಬಾಯಿಯ ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರವಿರಲಿ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಡಿಸಿನ್ ಅಂಡ್ ಪಬ್ಲಿಕ್ ಹೆಲ್ತ್ ಪ್ರಕಾರ, ಬಾಂಗ್ಲಾದೇಶದ ಗ್ರಾಮೀಣ ಮಹಿಳೆಯರು ಪ್ರತಿದಿನ ಅಡಿಕೆ ಮತ್ತು ವೀಳ್ಯದೆಲೆಗಳನ್ನು ಸೇವಿಸುತ್ತಾರೆ, ಇದರಿಂದಾಗಿ ಅವರಲ್ಲಿ ಫೋಲೇಟ್ ಕೊರತೆ ಕಂಡುಬಂದಿದೆ. ಈ ಕೊರತೆಯಿಂದಾಗಿ, ಮಗುವಿಗೆ ನ್ಯೂರಲ್ ಟ್ಯೂಬ್ ಡಿಫೆಕ್ಟ್, ಪ್ರಿ ಟರ್ಮ್ ಬರ್ತ್ (pre term birth) , ಲೋ ಬರ್ತ್ ವೆಯಿಟ್, ಗರ್ಭಾವಸ್ಥೆಯಲ್ಲಿ ನರ್ವಸ್ ಸಿಸ್ಟಮ್ ನಲ್ಲಿ ಅಸ್ವಸ್ಥತೆಗಳ ಅಪಾಯವನ್ನು ಸಹ ಕಾಣಬಹುದು.
ಏನು ಮಾಡಬೇಕು?: ಗರ್ಭಾವಸ್ಥೆಯಲ್ಲಿ, ಯಾವುದೇ ಮಹಿಳೆ ಪರಿಣಾಮ ಅಥವಾ ಅಡ್ಡಪರಿಣಾಮಗಳನ್ನು ಸ್ಪಷ್ಟವಾಗಿ ಹೇಳಲಾಗದ ಏನನ್ನೂ ತಿನ್ನಬಾರದು. ಗರ್ಭಾವಸ್ಥೆಯಲ್ಲಿ ನೀವು ವೀಳ್ಯದೆಲೆಯನ್ನು ತಿನ್ನದಿರೋದು ಉತ್ತಮ.ತಿನ್ನಲೇ ಬೇಕು ಎಂದಾದರೆ ಕಡಿಮೆ ಪ್ರಮಾಣದಲ್ಲಿ ತಿನ್ನುವ ಮೂಲಕ ಜೀರ್ಣಕಾರಿ ಸಮಸ್ಯೆಗಳನ್ನು ಸಹ ನೀವು ಸರಿಪಡಿಸಬಹುದು.
ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು (Balanced food) ಸೇವಿಸಿ ಮತ್ತು ಕೊಬ್ಬಿನ ಆಹಾರ ಸೇವಿಸೋದನ್ನು ತಪ್ಪಿಸಿ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ, ಸುಮಾರು 8 ಲೋಟ ನೀರು ಕುಡಿಯಿರಿ. ಲಘು ವ್ಯಾಯಾಮ ಅಥವಾ ಯೋಗ ಮಾಡಿ. ಇದರಿಂದ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.
ಸಂಶೋಧನೆ ಏನು ಹೇಳುತ್ತೆ?: ಎನ್ಸಿಬಿಐನ ಸಂಶೋಧನೆಯ ಪ್ರಕಾರ, ವೀಳ್ಯದೆಲೆ ತಿನ್ನೋದು ಹಸಿವನ್ನು ಹೆಚ್ಚಿಸುತ್ತೆ, ಜೀರ್ಣಕ್ರಿಯೆ ಸುಧಾರಿಸುತ್ತೆ, ಆದರೆ ಇದರಿಂದ ಫೋಲೇಟ್ ಕೊರತೆಯಂತಹ ಕೆಲವು ಅಪಾಯಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ವೈದ್ಯಕೀಯ ಸಂಶೋಧನೆ ಸೂಚಿಸುತ್ತೆ. ಆದ್ದರಿಂದ, ನೀವು ಅದನ್ನು ತಪ್ಪಿಸೋದು ಉತ್ತಮ.