ಗರ್ಭಿಣಿಯರಿಗೆ ಉಪ್ಪಿನಕಾಯಿ ತಿನ್ನೋ ಬಯಕೆ ಆಗೋದು ಯಾಕೆ?

Published : Jan 29, 2023, 04:55 PM ISTUpdated : Jan 29, 2023, 04:56 PM IST

ಗರ್ಭಾವಸ್ಥೆಯಲ್ಲಿ ಕಡುಬಯಕೆ ಕಾಡೋದು ಸಾಮಾನ್ಯ. ಕೆಲವರಿಗೆ ಸಿಹಿ ತಿನ್ನುವ ಬಯಕೆ ಕಾಡಿದರೆ, ಮತ್ತೆ ಕೆಲವರಿಗೆ ಹುಳಿ ತಿನ್ನುವ, ಮಾವಿನಕಾಯಿ ತಿನ್ನುವ, ಮಣ್ಣು ತಿನ್ನುವ ಹೀಗೆ ಹಲವು ಬಯಕೆಗಳಿರುತ್ತವೆ. ಇದರ ಜೊತೆ ಉಪ್ಪಿನಕಾಯಿ ತಿನ್ನುವ ಆಸೆಯೂ ಇರುತ್ತೆ. ಇದಕ್ಕೆ ಕಾರಣ ಏನು ಗೊತ್ತಾ? 

PREV
19
ಗರ್ಭಿಣಿಯರಿಗೆ ಉಪ್ಪಿನಕಾಯಿ ತಿನ್ನೋ ಬಯಕೆ ಆಗೋದು ಯಾಕೆ?

ಗರ್ಭಾವಸ್ಥೆಯಲ್ಲಿ (pregnancy), ಉಪ್ಪಿನಕಾಯಿಯಂತಹ ಅನೇಕ ಆಹಾರ ಪದಾರ್ಥಗಳು ಮಹಿಳೆಯರನ್ನು ಆಕರ್ಷಿಸುತ್ತವೆ. ಆದರೆ, ಇದು ಏಕೆ ಸಂಭವಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲ ಅನ್ನೋದಾದರೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ನಿಮಗೂ ಉಪ್ಪಿನಕಾಯಿ ತಿನ್ನುವ ಬಯಕೆ ಕಾಡುತ್ತಿದ್ದರೆ, ಅದು ಯಾಕೆ ಕಾಡುತ್ತೆ ಅನ್ನೋದನ್ನು ತಿಳಿಯೋಣ. 
 

29

ಸುಳ್ಳು ಮಾತುಗಳಿಗೆ ಕಿವಿಗೊಡಬೇಡಿ
ಉಪ್ಪಿನಕಾಯಿ ತಿನ್ನುವುದು ಪ್ರಾಚೀನ ಕಾಲದಿಂದಲೂ ಗರ್ಭಾವಸ್ಥೆಯಲ್ಲಿ ಅನೇಕ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ದೇಹದಲ್ಲಿ ಒಂದೊಂದು ಅಂಶಗಳು ಕಡಿಮೆಯಾದರೆ ಒಂದೊಂದು ತಿಂಡಿ ತಿನ್ನುವಂತಹ ಬಯಕೆ (pregnancy craving) ಉಂಟಾಗುತ್ತದೆ ಎನ್ನಲಾಗುತ್ತೆ. ಆದರೆ, ಸಂಶೋಧನೆ ಬೇರೆಯದೇ ಮಾತನ್ನು ಹೇಳುತ್ತದೆ.

39

ಸಂಶೋಧನೆ ಏನು ಹೇಳುತ್ತದೆ?",
ಸಂಶೋಧನೆಯ ಪ್ರಕಾರ, ಉಪ್ಪಿನಕಾಯಿ (pickle) ತಿನ್ನುವ ಬಯಕೆಯು ಮಗುವಿನ ಲಿಂಗವನ್ನು ನಿರ್ಧರಿಸುವುದಿಲ್ಲ ಅಥವಾ ಪೌಷ್ಠಿಕಾಂಶದ ಕೊರತೆಯನ್ನು ಸೂಚಿಸುವುದಿಲ್ಲ. ಹಾಗಿದ್ದರೆ ಉಪ್ಪಿನಕಾಯಿ ತಿನ್ನುವ ಬಯಕೆಗೆ ಕಾರಣ ಏನಿರಬಹುದು? ಅನ್ನೋದನ್ನು ತಿಳಿಯೋಣ. 

49

ಇದು ಕೂಡ ಕಾರಣವಾಗಿರಬಹುದು
ಮಗುವಿನ ಆರೋಗ್ಯಕರ ಬೆಳವಣಿಗೆಗೆ (healthy development) ಜೀವಸತ್ವಗಳು ಮತ್ತು ಖನಿಜಗಳು ಅತ್ಯಗತ್ಯ.ಒಂದು ವೇಳೆ ದೇಹದಲ್ಲಿ ಯಾವುದೇ ಜೀವಸತ್ವಗಳ ಕೊರತೆಯು ಕಂಡು ಬಂದಾಗ, ಅದು ಕಡುಬಯಕೆಗಳಿಗೆ ಕಾರಣವಾಗಬಹುದು. 

59

ಹಾರ್ಮೋನುಗಳು
ಪ್ರತಿ ತ್ರೈಮಾಸಿಕದಲ್ಲಿ, ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾಗುತ್ತದೆ. ಎರಡನೇ ತ್ರೈಮಾಸಿಕದ ವೇಳೆಗೆ, ಮಹಿಳೆಯರು ಹೆಚ್ಚಿದ ಹಾರ್ಮೋನುಗಳಿಗೆ ಹೊಂದಿಕೊಳ್ಳುತ್ತಾರೆ, ಇದರಿಂದಾಗಿ ಹಸಿವು ಹೆಚ್ಚಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಬೇರೆ ಬೇರೆ ಆಹಾರ ತಿನ್ನುವ ಬಯಕೆ ಉಂಟಾಗುತ್ತೆ.  
 

69

ವಿಟಮಿನ್ ಸೇವನೆ
ಉಪ್ಪಿನಕಾಯಿಯಲ್ಲಿ ನಿಂಬೆ, ಕ್ಯಾರೆಟ್ ನಂತಹ ವಸ್ತುಗಳು ಇರುತ್ತವೆ, ಇದು ವಿಟಮಿನ್-ಸಿ ಮತ್ತು ಕೆ ಯ ಉತ್ತಮ ಮೂಲವಾಗಿದೆ. ಹಾಗಾಗಿ ಇವುಗಳನ್ನು ತಿನ್ನೋದ್ರಿಂದ ತೊಂದರೆ ಇಲ್ಲ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಮಸ್ಯೆ ಉಂಟಾಗುತ್ತೆ.

79

ಹೆಚ್ಚು ಉಪ್ಪಿನಕಾಯಿ ತಿನ್ನುವ ಅನಾನುಕೂಲತೆಗಳು
ಉಪ್ಪಿನಕಾಯಿಯಲ್ಲಿ ಎಣ್ಣೆ ಮತ್ತು ಮಸಾಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಇದನ್ನು ಅತಿಯಾಗಿ ಸೇವಿಸಬೇಡಿ. ಇದರಿಂದ ಗರ್ಭಿಣಿ ಮಹಿಳೆ ಮತ್ತು ಮಗುವಿನ ಮೇಲೆ ಹೆಚ್ಚಿನ ಪರಿಣಾಮ ಬೀಳುವ ಸಾಧ್ಯತೆ ಇದೆ. 
 

89

ಸೋಡಿಯಂ ಮಟ್ಟಗಳು (sodium level)
ಅತಿಯಾಗಿ ಉಪ್ಪನ್ನು ತಿನ್ನುವುದರಿಂದ ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಇದು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇರೋದರಿಂದ ಇದನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

99

ವೈದ್ಯರ ಸಲಹೆ ಏನು?
ಗರ್ಭಾವಸ್ಥೆಯಲ್ಲಿ ಉಪ್ಪಿನಕಾಯಿ ತಿನ್ನುವುದರಿಂದ ಯಾವುದೇ ರೀತಿಯ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿ. ಆದರೆ ಯಾವತ್ತೂ ಉಪ್ಪಿನಕಾಯಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವ ತಪ್ಪು ಮಾಡಬೇಡಿ. 

Read more Photos on
click me!

Recommended Stories