ಪಿಸಿಒಎಸ್ ಸಮಸ್ಯೆಯೇ? ಇಲ್ಲಿದೆ ನೋಡಿ ಪರಿಹಾರ

First Published Aug 27, 2022, 2:32 PM IST

ಇತ್ತೀಚಿನ ದಿನಗಳಲ್ಲಿ, ಪಿಸಿಒಎಸ್(PCOS) ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮಿನ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯ. ಆದರೆ ಇದು ಅವರಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆದರೆ ಸ್ವಲ್ಪ ಸಮಾಧಾನ ಉಂಟು ಮಾಡುವ ಒಂದು ವಿಷಯವೆಂದರೆ ಸಮತೋಲಿತ ಆಹಾರ ಮತ್ತು ಕೆಲವು ಆಯ್ದ ವ್ಯಾಯಾಮಗಳ ಸಹಾಯದಿಂದ ನೀವು ಖಂಡಿತವಾಗಿಯೂ ಈ ಸಮಸ್ನ್ನು ನಿಯಂತ್ರಿಸಬಹುದು. ಈ ಸಮಸ್ಯೆಯಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುವ ಕೆಲವು ವಿಶೇಷ ವ್ಯಾಯಾಮಗಳ ಬಗ್ಗೆ ತಿಳಿಯಿರಿ...

ಸ್ಟ್ರೆಂಥ್ ಟ್ರೈನಿಂಗ್ (Strength Training)

ಸ್ಟ್ರೆಂಥ್ ಟ್ರೈನಿಂಗ್ ಸಹಾಯದಿಂದ, ಸ್ನಾಯುಗಳು ಬಲವಾಗುತ್ತವೆ, ಅದರ ಜೊತೆ ಇದು ಒತ್ತಡ ತೆಗೆದುಹಾಕಲು ಸಹಾಯ ಮಾಡುತ್ತೆ. ಪ್ರತಿದಿನ ಸ್ಟ್ರೆಂಥ್ ಟ್ರೈನಿಂಗ್  ಮಾಡೋದರಿಂದ ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆ ತೊಡೆದು ಹಾಕಬಹುದು, ಆದರೆ ನೀವು ಸ್ಟ್ರೆಂಥ್ ಟ್ರೈನಿಂಗ್ ತಪ್ಪಾಗಿ ಮಾಡಿದರೆ, ಅದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತೆ, ಆದ್ದರಿಂದ ಗಮನ ಹರಿಸಿ.

ಜುಂಬಾ(Zumba) ಎಕ್ಸರ್ಸೈಜ್

ಜುಂಬಾ ಎಕ್ಸರ್ಸೈಜ್  ಅತ್ಯಂತ ಮೋಜಿನ ವ್ಯಾಯಾಮಗಳಲ್ಲಿ ಒಂದಾಗಿದೆ. ಅದನ್ನು ನೀವು ಯಾವುದೇ ಒತ್ತಡವಿಲ್ಲದೆ ನಿಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದು. ಜುಂಬಾ ವ್ಯಾಯಾಮ ಮಾಡುವ ಮೂಲಕ, ಸ್ಥೂಲಕಾಯದ ಸಮಸ್ಯೆಯನ್ನು ಸಹ ಸುಲಭವಾಗಿ ಕಡಿಮೆ ಮಾಡಬಹುದು ಮತ್ತು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ಗುಣಪಡಿಸಬಹುದು.

ಜುಂಬಾ ಡ್ಯಾನ್ಸ್ ದೇಹವನ್ನು ಫ್ಲೆಕ್ಸಿಬಲ್ ಮತ್ತು ಫಿಟ್ ಆಗಿರಿಸುತ್ತೆ. ತೂಕವನ್ನು ಕಳೆದುಕೊಳ್ಳೋದರಿಂದ ಗರ್ಭಧರಿಸಲಾಗದ ಸಮಸ್ಯೆಗಳನ್ನು ಎದರಿಸುತ್ತಿರುವ ಮಹಿಳೆಯರಿಗೆ ಗರ್ಭಧರಿಸಲು (Pregnancy) ಸಹಾಯ ಮಾಡುತ್ತೆ. ಹಾಗಾಗಿ ತುಂಬಾನೆ ಎಂಜಾಯ್ ಮಾಡುತ್ತಾ ಜುಂಬಾ ಎಕ್ಸರ್ಸೈಜ್ ಮಾಡಿ ಪಿಸಿಒಎಸ್ ಸಮಸ್ಯೆಯಿಂದ ದೂರವಾಗಿ.  

ಈಜು (Swimming)

ಈಜುವುದು ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಈ ವ್ಯಾಯಾಮವನ್ನು ಮಾಡೋದರಿಂದ, ದೇಹದಲ್ಲಿ ರಕ್ತ ಪರಿಚಲನೆ ವೇಗವಾಗಿರುತ್ತೆ ಮತ್ತು ಉಸಿರಾಟದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೆ. ಜೊತೆಗೆ ಸ್ವಿಮ್ಮಿಂಗ್ ನಿಮ್ಮನ್ನು ಫಿಟ್ ಆಂಡ್ ಫೈನ್ ಆಗಿರಲು ಸಹಾಯ ಮಾಡುತ್ತೆ.
 

ವಾರದಲ್ಲಿ ಕೇವಲ 3-4 ದಿನ ಮಾತ್ರ ಈಜಿ ವ್ಯಾಯಾಮ ಮಾಡೋದರಿಂದ ನೀವು ತುಂಬಾ ನಿರಾಳರಾಗುತ್ತೀರಿ ಮತ್ತು ನೀವು ಒಳಗಿನಿಂದ ಆರೋಗ್ಯಕರ(Healthy) ಭಾವನೆಯನ್ನು ಹೊಂದಲು ಪ್ರಾರಂಭಿಸುತ್ತೀರಿ. .ಪಿಸಿಒಎಸ್ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಮಹಿಳೆಯರು ಇದನ್ನು ಟ್ರೈ ಮಾಡಿ ನೋಡಿ.  

ಯೋಗ (Yoga)

ಆರೋಗ್ಯಕರ ಮತ್ತು ಸಂತೋಷವಾಗಿರಲು, ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಸೇರಿಸಬೇಕು, ಇದು ಪಿಸಿಒಎಸ್ ನಿಂದ ಉಂಟಾಗುವ ಹಾರ್ಮೋನ್ ಅಸಮತೋಲನವನ್ನು ಸರಿಪಡಿಸುತ್ತೆ. ಇದು ಪೆಲ್ವಿಕ್ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಸರಿಪಡಿಸುತ್ತೆ ಮತ್ತು ಋತುಚಕ್ರದ ಸಮಸ್ಯೆಯನ್ನು ಸಹ ನಿವಾರಿಸುತ್ತೆ. 

ಯೋಗ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತೆ ಮತ್ತು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಸುತ್ತೆ. ನಿಮ್ಮ ಫರ್ಟಿಲಿಟಿ (Fertility) ಹೆಚ್ಚಿಸಲು ನೀವು ಭ್ರಮರಿ ಪ್ರಾಣಾಯಾಮ, ವಿಕಾಸಕರ್ಣಿ, ಪಶ್ಚಿಮೋತ್ತಾನಾಸನ ಮತ್ತು ಭುಜಂಗಾಸನದಂತಹ ಆಸನಗಳನ್ನು ಪ್ರಯತ್ನಿಸಬಹುದು. ಇದರಿಂದಾ ಬೇಗನೆ ಗರ್ಭಧಾರಣೆ ಕೂಡ ಸಾಧ್ಯವಾಗುತ್ತದೆ, ಜೊತೆಗೆ ಉತ್ತನ ಆರೋಗ್ಯವನ್ನು ಸಹ ಪಡೆಯಬಹುದು, 

click me!