ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ: ಮಸಾಜ್ ಮಾಡೋ ಮೂಲಕ ಸಮಸ್ಯೆ ನಿವಾರಿಸಿ

First Published Aug 27, 2022, 11:10 AM IST

ಕೆಲವು ಮಕ್ಕಳಲ್ಲಿ, ಅವರು ಹುಟ್ಟಿದ ಕೆಲವು ದಿನಗಳ ನಂತರ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಈ ಗ್ಯಾಸ್ ಸಮಸ್ಯೆ ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಸರಿಯಾಗುತ್ತೆ. ಕೆಲವೊಮ್ಮೆ ಚೇತರಿಸಿಕೊಳ್ಳಲು ಆರರಿಂದ ಏಳು ತಿಂಗಳುಗಳು ಬೇಕಾಗುತ್ತೆ. ಹಾಲು ಕುಡಿಯುವಾಗ ಮಗುವು ಹೆಚ್ಚು ಗಾಳಿಯನ್ನು ತೆಗೆದುಕೊಂಡಾಗ, ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಮಗುವಿಗೆ ಗ್ಯಾಸ್ ಸಮಸ್ಯೆ ಹೆಚ್ಚಾದರೆ ಹೊಟ್ಟೆಗೆ ಮಸಾಜ್ ಮಾಡಿದರೆ, ಮಗು ಪರಿಹಾರ ಪಡೆಯಬಹುದು ಮತ್ತು ನಂತರವೂ ಮಗು ಗ್ಯಾಸ್ ಸಮಸ್ಯೆಯಿಂದ ದೂರ ಉಳಿಯಬಹುದು. 

ಮಗುವಿನ ಹೊಟ್ಟೆಗೆ ಮಸಾಜ್ ಮಾಡುವ ಮೂಲಕ, ಒಳಗೆ ಹೋದ ಗಾಳಿಯು ಹೊರಗೆ ಬರುತ್ತೆ ಮತ್ತು ಮಗುವೂ ಸಹ ವಿಶ್ರಾಂತಿ ಅನುಭವಿಸುತ್ತೆ. ಹಾಗಿದ್ರೆ ಬನ್ನಿ ಯಾವ ರೀತಿ ಮಸಾಜ್ ಮಾಡೋದ್ರಿಂದ ಮಗುವಿನ ಗ್ಯಾಸ್(Gas) ಸಮಸ್ಯೆಯನ್ನು ನಿವಾರಿಸುತ್ತೆ, ಇದನ್ನು ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಮಸಾಜ್(Massage) ಪರಿಹಾರವನ್ನು ನೀಡುತ್ತೆ

ವೃತ್ತಾಕಾರದ ಚಲನೆಯಲ್ಲಿ ಮಗುವಿನ ಹೊಟ್ಟೆಯನ್ನು ಮಸಾಜ್ ಮಾಡಿ. ಮಗುವಿನ ಹೊಕ್ಕುಳಿನ ಕೆಳಭಾಗ ಮತ್ತು ಮೇಲ್ಭಾಗದ ಮಧ್ಯದಿಂದ ಆರಂಭಿಸಿ. ಮೊದಲು ಬಲಗೈಯಿಂದ ಎಡದಿಂದ ಬಲಕ್ಕೆ ಮಸಾಜ್ ಮಾಡಿ. ನಂತರ ವೃತ್ತಾಕಾರವಾಗಿ ಮಸಾಜ್ ಮಾಡಿ. ಮಸಾಜ್ ಅನ್ನು ಸ್ವಲ್ಪ ಸಮಯದವರೆಗೆ ಮುಂದುವರಿಸಿ.
 

ಈ ವಿಧಾನವನ್ನು ಸಹ ಅಳವಡಿಸಿಕೊಳ್ಳಿ

ನಿಮ್ಮ ಹೆಬ್ಬೆರಳನ್ನು ಮಗುವಿನ ಹೊಟ್ಟೆ (Stomach) ಮೇಲೆ ಇರಿಸಿ ಮತ್ತು ಅದನ್ನು ಮೇಲಕ್ಕೆ ಮತ್ತು ಕೆಳಗೆ ಎಳೆಯುವಂತೆ ಅಲುಗಾಡಿಸಿ. ಇದನ್ನು ಹೊಕ್ಕುಳಿನ ಮೇಲೆ ಎರಡು ಬಾರಿ ಮಾಡಿ. ತುಂಬಾ ಒತ್ತಡ ಹಾಕಬೇಡಿ, ಇದರಿಂದ ಮಗುವಿಗೆ ನೋವಾಗುವ ಸಾಧ್ಯತೆ ಇದೆ. 

ನಾಭಿ ಕೆಳಭಾಗದ ಕಡೆಗೆ ಎರಡೂ ಬದಿಗಳನ್ನು ಎರಡು ಬಾರಿ ಮಸಾಜ್ ಮಾಡಿ. ನಿಮ್ಮ ಬೆರಳ ಸಹಾಯದಿಂದ ಮಗುವಿನ ಹೊಟ್ಟೆಯನ್ನು ಎಡದಿಂದ ಬಲಕ್ಕೆ ಮಸಾಜ್ ಮಾಡಿ. ಹೊಕ್ಕಳಿನ ಬಳಿ ಪುಶ್ ಓರ್ ಪುಲ್ ನ(Push or pull) ಹಾಗೆ ಮಸಾಜ್ ಮಾಡಿ. ಇದರಿಂದ ಮಗುವಿಗೆ ಹೆಚ್ಚಿನ ಆರಾಮ ಸಿಗುತ್ತದೆ.

ಇನ್ನೊಂದು ವಿಧಾನ ಹೀಗಿದೆ

ಮಗುವಿನ ಎರಡೂ ಕಾಲುಗಳನ್ನು(Leg) ಮೇಲೆತ್ತಿ ಹೊಟ್ಟೆಯ ಮೇಲೆ ಮಸಾಜ್ ಮಾಡಿ. ಮಗುವಿನ ಪಾದಗಳನ್ನು ಹೊಕ್ಕಳಿನ ಕಡೆಗೆ ತನ್ನಿ. ಈ ಚಲನೆಯಲ್ಲಿ ಮಗುವಿನ ಹೊಟ್ಟೆಯ ಮೇಲೆ ಮಸಾಜ್ ಮಾಡಿ. ಇದರಿಂದ ಗ್ಯಾಸ್ ಬೇಗನೆ ರಿಲೀಸ್ ಆಗುತ್ತದೆ. ಮಗುವಿಗೂ ಆರಾಮವಾಗುತ್ತೆ.

 ಐ ಲವ್ ಯೂ(I love you) ನಂತಹ ಅಕ್ಷರಗಳ ರೂಪದಲ್ಲಿ ಮಗುವಿನ ಹೊಟ್ಟೆಯನ್ನು ಎಡದಿಂದ ಬಲಕ್ಕೆ ಮಸಾಜ್ ಮಾಡಲು ಪ್ರಯತ್ನಿಸಿ. ಕೇವಲ ಐ, ಎಲ್, ಯು ಅಕ್ಷರಗಳನ್ನು ಮಾತ್ರ ನಿಮ್ಮ ಬೆರಳಿನಿಂದ ಮಾಡಿ ಮಗುವಿಗೆ ಮಸಾಜ್ ನೀಡಿ. ಇದರಿಂದ ಗ್ಯಾಸ್ ಸಮಸ್ಯೆ ದೂರವಾಗುತ್ತೆ. ನಿಮ್ಮ ಮಗು ಸಹ ಆರಾಮವಾಗಿ ನಿದ್ರೆ ಮಾಡಬಹುದು. 

ನೀವು ಮಗುವಿಗೆ ಮಸಾಜ್ ಮಾಡುವಾಗ ಬರಿ ಗೈಯಲ್ಲಿ ಮಾಡಬಹುದು ಅಥವಾ ಎಣ್ಣೆಯನ್ನು(Oil) ಬಳಸಿ ಸಹ ಮಸಾಜ್ ಮಾಡಬಹುದು, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಬಳಸಿ ಮಕ್ಕಳಿಗೆ ಮಸಾಜ್ ಮಾಡುವುದು ಸಹ ಇದೇ ಕಾರಣಕ್ಕಾಗಿ, ಇನ್ನು ಮುಂದೆ ಮಗುವಿಗೆ ಹೊಟ್ಟೆ ಸಮಸ್ಯೆ ಕಾಣಿಸಿಕೊಂಡಾಗ ಮಸಾಜ್ ಮಾಡೋದನ್ನು ಮರೆಯಬೇಡಿ.

click me!