ಗರ್ಭಪಾತವು(Miscarriage) ಹಲವಾರು ಕಾರಣಗಳಿಗಾಗಿ ಸಂಭವಿಸಬಹುದು. ಈ ಕೆಲವು ಕಾರಣಗಳನ್ನು ತಡೆಯಲು ಸಾಧ್ಯವಿಲ್ಲವಾದರೂ ಜೀವನಶೈಲಿಯಲ್ಲಿ ಬದಲಾವಣೆ ಮಾಡುವ ಮೂಲಕ ಕೆಲವೊಂದು ಕಾರಣಗಳನ್ನು ತಪ್ಪಿಸಬಹುದು. ಇಲ್ಲಿದೆ ನೀವು ಅನುಸರಿಸಬೇಕಾದ ಕೆಲವೊಂದು ಪ್ರಮುಖ ಅಂಶಗಳು.
ಆರೋಗ್ಯಕರ ಗರ್ಭಧಾರಣೆಯ(Pregnancy) ಯಶಸ್ಸಿನ ದರವು ಭ್ರೂಣಕ್ಕಾಗಿ ನೀವು ರಚಿಸುವ ಪರಿಸರದ ಮೇಲೂ ಅವಲಂಬಿತವಾಗಿರುತ್ತದೆ. ಆದ್ದರಿಂದ ಗರ್ಭಪಾತ ತಡೆಗಟ್ಟಲು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ, ಅವುಗಳ ಬಗ್ಗೆ ತಿಳಿಯೋಣ.
ಗರ್ಭಧಾರಣೆಗೆ ಮೊದಲು ಪತಿ ಮತ್ತು ಪತ್ನಿ ಸರಿಯಾದ ಆರೋಗ್ಯ ಕ್ರಮ ಅನುಸರಿಸಬೇಕಾಗುತ್ತದೆ. ಅದು ಆರೋಗ್ಯಕರ ಗರ್ಭಧಾರಣೆಗೆ(Healthy Pregnancy) ಸಹಾಯ ಮಾಡುತ್ತದೆ. ಸ್ವಚ್ಛದೇಹ ಮತ್ತು ಮನಸ್ಸು ಭ್ರೂಣಕ್ಕೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ.
ತ್ರಿಶಾಲಾ ಪುಡಿಯು ಮಹಿಳೆಯರಲ್ಲಿನ ದೋಷಗಳನ್ನು ತೆಗೆದುಹಾಕಿ ಅಸಮತೋಲನವನ್ನು ಸರಿಪಡಿಸುವ ಆಯುರ್ವೇದ ಔಷಧವಾಗಿದೆ. ಗರ್ಭಧಾರಣೆಗೆ ಮೊದಲು ಆಯುರ್ವೇದ(Ayurveda) ವೈದ್ಯರನ್ನು ಸಂಪರ್ಕಿಸಿ. ಹಾಗೆಯೇ ಸೇವನೆ ಮಾಡಲು ಹೋಗಬೇಡಿ. ಇದರಿಂದ ಅಪಾಯ ಸಂಭವಿಸಬಹದು.
ಸಾತ್ವಿಕ ಆಹಾರ ಸೇವಿಸಿ. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಇಂತಹ ಆಹಾರ ಕ್ರಮ ಆರೋಗ್ಯಕರ ಆಹಾರಕ್ರಮ. ಈ ಸಮಯದಲ್ಲಿ ಮಸಾಲೆಯುಕ್ತ ಮತ್ತು ಹಿಂದಿನ ದಿನದ ಆಹಾರ(Food) ಮತ್ತು ಎಣ್ಣೆಯುಕ್ತ ಆಹಾರ ಇತ್ಯಾದಿಗಳನ್ನು ಸೇವಿಸಬೇಡಿ. ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.
ಒತ್ತಡವು(Pressure) ದೇಹದ ಮೇಲೆ ಹೊರೆಯನ್ನು ಉಂಟುಮಾಡಬಹುದು. ಒತ್ತಡರಹಿತ ಜೀವನ ನಡೆಸುವುದು ಬಹಳ ಮುಖ್ಯ. ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡಬೇಡಿ ಮತ್ತು ರಾತ್ರಿ ಪಾರ್ಟಿಗೆ ಹೋಗಬೇಡಿ. ಮನಸ್ಸು ಯಾವಾಗಲೂ ಫ್ರೀ ಆಗಿರಲಿ ಟೆನ್ಶನ್ ರಹಿತ ಜೀವನ ನಿಮ್ಮದಾಗಲಿ. ಆ ಸಂದರ್ಭದಲ್ಲಿ ಗರ್ಭಪಾತ ಆಗುವ ಸಂಭವ ಕಡಿಮೆಯಾಗುತ್ತದೆ.
ಉಸಿರಾಟದ ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಧ್ಯಾನ (Meditation) ಬಹಳ ಮುಖ್ಯ. ಇದರಿಂದ ಆರೋಗ್ಯ ಚೆನ್ನಾಗಿರುತ್ತಾ ಗರ್ಭಧಾರಣೆಗೆ ನೆರವಾಗುತ್ತದೆ. ಇದರಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ. ಪ್ರತಿದಿನ ಒಂದು ಇಪ್ಪತ್ತು ನಿಮಿಷ ಧ್ಯಾನ ಮಾಡಿ.
ಲಘು ತಾಲೀಮು(Exercise) ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿ ದೇಹವನ್ನು ಹೊಂದಿಕೊಳ್ಳಲು ನಡಿಗೆ ಮತ್ತು ಯೋಗ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ದೇಹ ಫ್ಲೆಕ್ಸಿಬಲ್ ಆಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.