ನವೆಂಬರ್‌ನಲ್ಲಿ ಟ್ರಾವೆಲ್ ಮಾಡಲು ಪ್ಲಾನ್ ಮಾಡಿದ್ದೀರಾ? ಚುಮು ಚುಮು ಚಳಿಗೆ ಈ ತಾಣಗಳು ಬೆಸ್ಟ್!

Published : Nov 02, 2026, 06:45 PM IST

November Travel Destinations: ಪ್ರವಾಸಕ್ಕೆ ಹೋಗಲು ನವೆಂಬರ್ ತಿಂಗಳು ಅತ್ಯುತ್ತಮ ಸಮಯ. ಈ ತಿಂಗಳಲ್ಲಿ ಹಿತವಾದ ಹವಾಮಾನ ಹಾಗೂ ಸಣ್ಣ ಚಳಿಯ ಅನುಭವ ಸಿಗುತ್ತದೆ. ಹಿಲ್ ಸ್ಟೇಷನ್‌ಗಳ ಹೊರತಾಗಿಯೂ, ಈ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಹಲವು ಸುಂದರ ನಗರಗಳಿವೆ. ಅವು ಯಾವುವು ನೋಡೋಣ.

PREV
16
ನವೆಂಬರ್‌ನಲ್ಲಿ ಭೇಟಿ ನೀಡಲು ಸೂಕ್ತವಾದ 5 ಪ್ರವಾಸಿ ತಾಣಗಳು

ಭಾರತದಲ್ಲಿ ಪ್ರವಾಸಕ್ಕೆ ಹೋಗಲು ನವೆಂಬರ್ ತಿಂಗಳು ಅತ್ಯುತ್ತಮವಾಗಿದೆ. ಬೇಸಿಗೆಯಲ್ಲಿ ಅತಿಯಾದ ಬಿಸಿಲು ಮತ್ತು ಚಳಿಗಾಲದಲ್ಲಿ ಅತಿಯಾದ ಚಳಿ ಅನುಭವಿಸುವ ಹಲವು ನಗರಗಳಿವೆ. ಇಂತಹ ಸ್ಥಳಗಳಿಗೆ ಭೇಟಿ ನೀಡಲು ನವೆಂಬರ್ ತಿಂಗಳು ಸೂಕ್ತವಾಗಿರುತ್ತದೆ. ಚಳಿಗಾಲದ ಆರಂಭವಾಗಿರುವ ಈ ತಿಂಗಳು ಆಹ್ಲಾದಕರ ಚಳಿಯನ್ನು ತರುತ್ತದೆ. ಹೀಗಾಗಿ, ಅತಿಯಾದ ಬಿಸಿಲು ಅಥವಾ ವಿಪರೀತ ಚಳಿಯ ಅನುಭವವಿಲ್ಲದೆ ಈ ನಗರಗಳನ್ನು ಸುತ್ತಾಡಬಹುದು.

26
ವಾರಣಾಸಿ, ಉತ್ತರ ಪ್ರದೇಶ

ನವೆಂಬರ್‌ನಲ್ಲಿ ವಾರಣಾಸಿಯ ಹವಾಮಾನ ಅತ್ಯಂತ ಹಿತವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಹೆಚ್ಚಿನ ತೊಂದರೆಯಿಲ್ಲದೆ ಭಾರತದ ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ವಾರಣಾಸಿಯನ್ನು ಸುತ್ತಾಡಬಹುದು. ಹಗಲಿನಲ್ಲಿ ವಾರಣಾಸಿಯ ಕಿರಿದಾದ ಬೀದಿಗಳಲ್ಲಿ ಓಡಾಡಬಹುದು. ಬೆಳಿಗ್ಗೆ ಮತ್ತು ಸಂಜೆ ನಡೆಯುವ ಗಂಗಾ ಆರತಿಯನ್ನು ವೀಕ್ಷಿಸಿ ಭಕ್ತಿಭಾವದಲ್ಲಿ ಮುಳುಗಬಹುದು. ಆಹಾರ ಪ್ರಿಯರಿಗೂ ವಾರಣಾಸಿ ವಿಶೇಷ ಅನುಭವ ನೀಡುತ್ತದೆ. ಇಲ್ಲಿನ ಸ್ಥಳೀಯ ಆಹಾರಗಳ ರುಚಿಯೇ ವಿಭಿನ್ನವಾಗಿದೆ.

36
ಗೋವಾ

ಮಳೆಗಾಲ ಮುಗಿದ ಬಳಿಕ ನವೆಂಬರ್ ತಿಂಗಳಲ್ಲಿ ಗೋವಾ ಮತ್ತೆ ಪ್ರವಾಸಿಗರಿಂದ ಕಂಗೊಳಿಸುತ್ತದೆ. ಈ ಸಮಯದಲ್ಲಿ ಗೋವಾದ ಹವಾಮಾನ ಹಿತವಾಗಿದ್ದು, ಪ್ರವಾಸಕ್ಕೆ ಆರಾಮದಾಯಕವಾಗಿರುತ್ತದೆ. ಇಲ್ಲಿ ನೀವು ಔಟ್ ಡೋರ್ ಚಟುವಟಿಕೆಗಳಲ್ಲಿ ಭಾಗವಹಿಸಬಹುದು, ಕಡಲತೀರಗಳಲ್ಲಿ ಈಜಬಹುದು, ಸನ್‌ಬಾತ್ ಮಾಡಬಹುದು ಹಾಗೂ ಸ್ಥಳೀಯ ಆಹಾರಗಳ ರುಚಿ ಸವಿಯಬಹುದು. ನೀವು ನೆಮ್ಮದಿಯ ರಜೆಯನ್ನು ಕಳೆಯಲು ಬಯಸುತ್ತಿದ್ದರೆ, ಗೋವಾ ಉತ್ತಮ ಆಯ್ಕೆಯಾಗಿದೆ.

46
ಹಂಪಿ, ಕರ್ನಾಟಕ

ನವೆಂಬರ್‌ನಲ್ಲಿ ಹಂಪಿಯ ಹವಾಮಾನ ತಂಪಾಗಿರುತ್ತದೆ. ಹೀಗಾಗಿ, ಈ ಐತಿಹಾಸಿಕ ಸ್ಥಳವನ್ನು ಸುತ್ತಾಡುವುದು ಸುಲಭವಾಗುತ್ತದೆ. ಬೇಸಿಗೆಯಲ್ಲಿ ತೀವ್ರ ಬಿಸಿಲಿನ ಕಾರಣದಿಂದ ಹಂಪಿಯನ್ನು ಸುತ್ತಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಇಲ್ಲಿನ ಪುರಾತನ ದೇವಾಲಯಗಳು, ಶತಮಾನಗಳ ಇತಿಹಾಸ ಹೊಂದಿರುವ ಕಟ್ಟಡಗಳು ಹಾಗೂ ಬೃಹತ್ ಬಂಡೆಗಳು ವಿಜಯನಗರ ಸಾಮ್ರಾಜ್ಯದ ಕಥೆಗಳನ್ನು ಸಾರುತ್ತವೆ. ಹಂಪಿಗೆ ಭೇಟಿ ನೀಡಿದಾಗ ಫೋಟೋಗ್ರಫಿ ಮಾಡಬಹುದು, ಸುತ್ತಮುತ್ತಲಿನ ಸ್ಥಳಗಳನ್ನು ವೀಕ್ಷಿಸಬಹುದು, ಸ್ಥಳೀಯ ಆಹಾರಗಳನ್ನು ಸವಿಯಬಹುದು ಹಾಗೂ ಅನೇಕ ಸುಂದರ ನೆನಪುಗಳನ್ನು ಕಲೆಹಾಕಬಹುದು.

56
ಅಲೆಪ್ಪಿ, ಕೇರಳ

ಕೇರಳದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಅಲೆಪ್ಪಿ ಕೂಡ ಒಂದು. ಇಲ್ಲಿ ಹೌಸ್‌ಬೋಟ್‌ನಲ್ಲಿ ತಂಗುವ ವಿಶೇಷ ಅನುಭವವನ್ನು ಪಡೆಯಬಹುದು. ಸುಂದರ ಕಾಲುವೆಗಳು, ತೆಂಗಿನ ಮರಗಳು ಹಾಗೂ ಹಳ್ಳಿಗಳ ನಿಧಾನಗತಿಯ ಜೀವನವನ್ನು ಆನಂದಿಸಲು ಬಯಸುವವರು ಅಲೆಪ್ಪಿಗೆ ಭೇಟಿ ನೀಡಬಹುದು. ಹಿತವಾದ ಹವಾಮಾನದಲ್ಲಿ ಸುತ್ತಾಡುವುದರ ಜೊತೆಗೆ, ವಿವಿಧ ಚಟುವಟಿಕೆಗಳಲ್ಲಿಯೂ ಭಾಗವಹಿಸಬಹುದು. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಅಲೆಪ್ಪಿ ಅತ್ಯುತ್ತಮ ತಾಣವಾಗಿದೆ.

66
ಶಿಲ್ಲಾಂಗ್, ಮೇಘಾಲಯ

ನವೆಂಬರ್‌ನಲ್ಲಿ ಶಿಲ್ಲಾಂಗ್‌ನಲ್ಲಿ ತಂಪಾದ ಹಾಗೂ ತಾಜಾತನದಿಂದ ಕೂಡಿದ ಹವಾಮಾನ ಇರುತ್ತದೆ. ಈ ಸಮಯದಲ್ಲಿ ಶಿಲ್ಲಾಂಗ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ವಿವಿಧ ವ್ಯೂ ಪಾಯಿಂಟ್‌ಗಳಿಗೆ ಭೇಟಿ ನೀಡಬಹುದು. ಸುಂದರ ಸರೋವರಗಳನ್ನು ವೀಕ್ಷಿಸಬಹುದು. ಮಳೆಯಿಲ್ಲದಿದ್ದರೂ ದೊಡ್ಡ ಜಲಪಾತಗಳನ್ನು ಕಾಣಬಹುದು. ಶಾಂತ ವಾತಾವರಣದಲ್ಲಿ ನೆಮ್ಮದಿಯ ಸಮಯ ಕಳೆಯಲು ಬಯಸುವವರಿಗೆ ಶಿಲ್ಲಾಂಗ್ ಉತ್ತಮ ಪ್ರವಾಸಿ ತಾಣವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories