ಲವ್ ಮ್ಯಾರೇಜ್‌ಗೆ ಮನೆಯವರು ಒಪ್ಪುತ್ತಿಲ್ಲವೇ? ಈ ದೇವಸ್ಥಾನಕ್ಕೆ ಭೇಟಿ ನೀಡಿ, ಎಲ್ಲವೂ ಸುಸೂತ್ರವಾಗುವುದು

Published : Feb 26, 2026, 10:16 PM IST

Akhand Dhuni mystery: ಪ್ರೀತಿಸಿದವರನ್ನು ಮದುವೆಯಾಗಲು ಮನೆಯವರ ಒಪ್ಪಿಗೆ ಸಿಗದೆ ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ. ಇದು ಕೇವಲ ಒಂದು ಪುರಾತನ ಗುಡಿಯಲ್ಲ, ಸ್ವತಃ ಶಿವ-ಪಾರ್ವತಿ ವಿವಾಹವಾದ ಪುಣ್ಯಭೂಮಿ.   

PREV
16
ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಲ್ಲ ಎಂಬ ಭಯವೇ?

ಪ್ರೀತಿ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಕೆಲವರು ಪ್ರೀತಿಯನ್ನು ಪಡೆಯಲು ಜೀವನವಿಡೀ ಕುಟುಂಬದ ವಿರುದ್ಧ ಹೋರಾಡಬೇಕಾಗುತ್ತದೆ. ಒಂದು ವೇಳೆ ನಿಮಗೂ ಕುಟುಂಬದವರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಲ್ಲ ಎಂಬ ಭಯ ಮನದ ಮೂಲೆಯಲ್ಲಿದ್ದರೆ ನಿಮಗಾಗಿ ಒಂದು ವಿಶೇಷ ಸರ್‌ಪ್ರೈಸ್ ಇದೆ.

26
ಇದೇ ಆ ದೇವಸ್ಥಾನ

ಅದೇನಪ್ಪಾ ಅಂದ್ರೆ ನಿಮ್ಮ ಸಂಗಾತಿಯೊಂದಿಗೆ ಉತ್ತರಾಖಂಡದ ರುದ್ರಪ್ರಯಾಗಕ್ಕೆ ತೆರಳಿ ಮತ್ತು ತ್ರಿಯುಗಿನಾರಾಯಣ ದೇವಸ್ಥಾನದ ದರ್ಶನ ಪಡೆಯಿರಿ. ಇದು ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ, ಸ್ವತಃ ಮಹಾದೇವ ಮತ್ತು ಮಾತಾ ಪಾರ್ವತಿಯ ವಿವಾಹ ನಡೆದ ಪವಿತ್ರ ಸ್ಥಳವೂ ಹೌದು. ಅವರ ವಿವಾಹದ ಕಥೆ ನಿಮಗೆ ತಿಳಿದಿದ್ದರೆ, ನಾವು ಈ ದೇವಸ್ಥಾನಕ್ಕೆ ಭೇಟಿ ನೀಡಲು ನಿಮಗೆ ಏಕೆ ಸಲಹೆ ನೀಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.

36
ತ್ರಿಯುಗಿನಾರಾಯಣ ದೇವಾಲಯ ಏಕೆ ವಿಶೇಷ?

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ತ್ರಿಯುಗಿನಾರಾಯಣ ದೇವಾಲಯವು ಅತ್ಯಂತ ಹಳೆಯ ಮತ್ತು ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಆದರೆ ಇದನ್ನು ವಿಶೇಷವಾಗಿ ಶಿವ ಮತ್ತು ಪಾರ್ವತಿಯ ವಿವಾಹ ನಡೆದ ಸ್ಥಳವೆಂದು ಗುರುತಿಸಲಾಗುತ್ತದೆ. ಇದೇ ಸ್ಥಳದಲ್ಲಿ ಅವರ ವಿವಾಹ ನಡೆದಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಭಗವಾನ್ ವಿಷ್ಣು ಮಾತಾ ಪಾರ್ವತಿಯ ಸೋದರನ ಪಾತ್ರವನ್ನು ವಹಿಸಿದ್ದರು ಮತ್ತು ಭಗವಾನ್ ಬ್ರಹ್ಮ ಮದುವೆಯನ್ನು ನೆರವೇರಿಸಿದ್ದರು.

46
ಅಂದಿನಿಂದ ಇಂದಿನವರೆಗೂ ಉರಿಯುತ್ತಲೇ ಇದೆ

ಹಿಮಾಲಯದ ಬೆಟ್ಟಗಳಲ್ಲಿ, ಸುಮಾರು 6,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಸದಾ ಒಂದು ಅಗ್ನಿ ಉರಿಯುತ್ತಲೇ ಇರುತ್ತದೆ, ಇದನ್ನು ಅಖಂಡ ಧೂನಿ ಎಂದು ಕರೆಯಲಾಗುತ್ತದೆ. ಶಿವ-ಪಾರ್ವತಿಯರ ವಿವಾಹದ ಸಮಯದಲ್ಲಿ ಹಚ್ಚಲಾದ ಅಗ್ನಿ ಇದಾಗಿದ್ದು, ಅಂದಿನಿಂದ ಇಂದಿನವರೆಗೂ ಉರಿಯುತ್ತಲೇ ಇದೆ ಎಂಬುದು ನಂಬಿಕೆ. ಇಂದಿಗೂ ಭಕ್ತರು ಇದಕ್ಕೆ ಕಟ್ಟಿಗೆಗಳನ್ನು ಹಾಕುತ್ತಾರೆ. ಈ ಅಗ್ನಿಯ ದರ್ಶನ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಪ್ರೀತಿ ಉಳಿಯುತ್ತದೆ. ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

56
ಪವಿತ್ರ ವಿವಾಹದ ಸ್ಥಳ

ದೇವಾಲಯದ ಬಳಿ ರುದ್ರ ಕುಂಡ, ವಿಷ್ಣು ಕುಂಡ ಮತ್ತು ಬ್ರಹ್ಮ ಕುಂಡ ಎಂಬ ಮೂರು ಪವಿತ್ರ ಕುಂಡಗಳಿವೆ. ಮದುವೆಗೆ ಮುಂಚಿತವಾಗಿ ದೇವತೆಗಳು ಈ ಕುಂಡಗಳಲ್ಲಿ ಸ್ನಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ಇಂದು ಕೂಡ ಅನೇಕ ಜೋಡಿಗಳು ಈ ದೇವಾಲಯವನ್ನು ಮದುವೆಗಾಗಿ ಆರಿಸಿಕೊಳ್ಳುತ್ತಾರೆ. ಇದು ಶಾಶ್ವತವಾಗಿ ಉಳಿಯುವ ಮದುವೆಗೆ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ.

66
ತ್ರಿಯುಗಿನಾರಾಯಣ ದೇವಾಲಯ ತಲುಪುವುದು ಹೇಗೆ?

ತ್ರಿಯುಗಿನಾರಾಯಣ ದೇವಾಲಯವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ತ್ರಿಯುಗಿನಾರಾಯಣ ಗ್ರಾಮದಲ್ಲಿದೆ. ಈ ಸ್ಥಳವು ಸೋನಪ್ರಯಾಗದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ರಸ್ತೆಯ ಮೂಲಕ ತಲುಪಬಹುದು, ಆದರೆ ಸೋನಪ್ರಯಾಗದಿಂದ ಮುಂದಿನ ದಾರಿಯು ಸ್ವಲ್ಪ ಕಡಿದಾಗಿದ್ದು ಮತ್ತು ಕಾಡುಗಳ ನಡುವೆ ಹಾದುಹೋಗುತ್ತದೆ. ದೇವಾಲಯವು ವರ್ಷವಿಡೀ ತೆರೆದಿರುತ್ತದೆ, ಆದರೆ ಹವಾಮಾನವು ಹಿತಕರವಾಗಿರುವ ಫೆಬ್ರವರಿಯಿಂದ ನವೆಂಬರ್ ನಡುವಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವಾಗಿದೆ. ಗ್ರಾಮದಲ್ಲಿ ಉಳಿಯಲು ಹೋಂಸ್ಟೇ ಮತ್ತು ಲಾಡ್ಜ್‌ಗಳಂತಹ ಸಾಧಾರಣ ಸೌಲಭ್ಯಗಳು ಲಭ್ಯವಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories