ಮೈಸೂರು-ಆಗ್ರಾ-ದೆಹಲಿ ನಡುವೆ ವಿಶೇಷ ರೈಲು: ರಾಜ್ಯದ ಆರು ಜಿಲ್ಲೆಗಳಲ್ಲಿ ಸ್ಟಾಪ್​: ಡಿಟೇಲ್ಸ್​ ಇಲ್ಲಿದೆ

Published : May 12, 2026, 10:08 PM IST

ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಮೈಸೂರಿನಿಂದ ದೆಹಲಿಯ ಹಜರತ್ ನಿಜಾಮುದ್ದೀನ್‌ ನಿಲ್ದಾಣಕ್ಕೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಆಗ್ರಾ ಕ್ಯಾಂಟ್‌ನಲ್ಲಿ ನಿಲುಗಡೆ ಹೊಂದಿದ್ದು, ಮೇ 21 ರಂದು ಮೈಸೂರಿನಿಂದ ಹೊರಡಲಿದೆ.

PREV
15
ಬೇಸಿಗೆ ಮೋಜು

ಇದೀಗ ಬೇಸಿಗೆ ರಜೆ. ಬಿಸಿಲು ಎಷ್ಟೇ ತೀವ್ರವಾಗಿದ್ದರೂ ರಜೆಗೆ ಪ್ರವಾಸಕ್ಕೆ ಹೋಗುವವರಿಗೆ ಇವೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ವಿವಿಧ ಭಾಗಗಳಿಗೆ ಹೊಸ ಹೊಸ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಇದೇ ರೀತಿ ಇದೀಗ ಮೈಸೂರು-ಆಗ್ರಾ ಮತ್ತು ದೆಹಲಿ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ದೆಹಲಿ, ಆಗ್ರಾ ಪ್ರವಾಸಿಗರಿಗೆ ಇದು ಅನುವು ಮಾಡಿಕೊಡಲಿದೆ.

25
ಮೈಸೂರಿನಿಂದ ಪ್ರಯಾಣ

ನೈರುತ್ಯ ರೈಲ್ವೆಯು ಮೈಸೂರು ಮತ್ತು ದೆಹಲಿಯ ಹಜರತ್‌ ನಿಜಾಮುದ್ದೀನ್‌ ನಿಲ್ದಾಣಗಳ ನಡುವೆ ಈ ವಿಶೇಷ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

35
ಆರು ಜಿಲ್ಲೆಗಳ ಜನತೆಗೆ ಅನುಕೂಲ

ಇದರಿಂದ ಕರ್ನಾಟಕ ಹಾಸನ, ಅರಸೀಕೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ವಿಜಯಪುರ, ಸೋಲಾಪುರ, ದೌಂಡ್‌, ಬೇಲಾಪುರ, ಮನ್ಮಾಡ್‌, ಭೂಸಾವಲ್‌, ಇಟಾರ್ಸಿ, ರಾಣಿ ಕಮಲಾಪತಿ, ವೀರಾಂಗನಾ ಲಕ್ಷ್ಮಿಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್‌ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

45
ಮೇ 21ರಂದು ಪ್ರಯಾಣ

ರೈಲು ಸಂಖ್ಯೆ 06261 ಮೈಸೂರು - ಹಜರತ್‌ ನಿಜಾಮುದ್ದೀನ್‌ ರೈಲು ಮೇ 21ರ ಬೆಳಗ್ಗೆ 4 ಗಂಟೆಗೆ ಮೈಸೂರಿನಿಂದ ಹೊರಟು 23ರ ಬೆಳಗ್ಗೆ 5.45ಕ್ಕೆ ಹಜರತ್‌ ನಿಜಾಮುದ್ದೀನ್‌ ತಲುಪಲಿದೆ. ರಿಟರ್ನ್​ ಬರಲು ರೈಲು ಸಂಖ್ಯೆ 06262 ಹಜರತ್‌ ನಿಜಾಮುದ್ದೀನ್‌ - ಮೈಸೂರು ವಿಶೇಷ ರೈಲು ಮೇ 24 ರ ರಾತ್ರಿ 9 ಗಂಟೆಗೆ ಹೊರಟು, 26ರ ರಾತ್ರಿ 11.55ಕ್ಕೆ ಮೈಸೂರಿಗೆ ಬರಲಿದೆ.

55
20 ಬೋಗಿಯ ರೈಲು

ಈ ರೈಲಿನಲ್ಲಿ 18 ಸ್ಲೀಪರ್‌ ದರ್ಜೆಯ ಬೋಗಿಗಳು ಹಾಗೂ 2 ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಯೊಂದಿಗೆ ದಿವ್ಯಾಂಗ ಸ್ನೇಹಿ ಬೋಗಿ ಸೇರಿ ಒಟ್ಟು 20 ಬೋಗಿಗಳಿರಲಿವೆ. ಈ ಕುರಿತು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories