ಭಾರತೀಯ ರೈಲ್ವೆಯ ಚಲಿಸುವ ನರಕ; ತಾಳ್ಮೆ, ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿ

Published : May 11, 2026, 12:21 PM IST

ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.

PREV
15
ರೈಲು ವಿಳಂಬ

ಭಾರತದಲ್ಲಿ ಪ್ರತಿನಿತ್ಯ ಡೆಮೊ, ಪ್ಯಾಸೆಂಜರ್, ಎಕ್ಸ್‌ಪ್ರೆಸ್ ಸೇರಿದಂತೆ ಸಾವಿರಾರು ರೈಲುಗಳು ಚಲಿಸುತ್ತವೆ. ಈ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಹ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದ ನಿಗದಿತ ಸಮಯಕ್ಕಿಂತ ತಡವಾಗಿ ರೈಲುಗಳು ಚಲಿಸುತ್ತವೆ. ರೈಲು ವಿಳಂಬದ ಮಾಹಿತಿಯನ್ನು ನಿಲ್ದಾಣಗಳಲ್ಲಿ ನೀಡಲಾಗುತ್ತದೆ.

25
ಚಲಿಸುವ ನರಕ

ಸಾಮಾನ್ಯವಾಗಿ ದೀರ್ಘ ಪ್ರಯಾಣದ ಪ್ಯಾಸೆಂಜರ್ ರೈಲುಗಳು ಅಂದ್ರೆ ಎಕ್ಸ್‌ಪ್ರೆಸ್ ಅಲ್ಲದ ಟ್ರೈನ್‌ಗಳಲ್ಲಿ ಸಮಯದ ಪಾಲನೆ ಕಡಿಮೆ ಇರುತ್ತದೆ. ಜನಶತಾಬ್ದಿ, ವಂದೇ ಭಾರತ್ ಸೇರಿದಂತೆ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲುಗಳಿಗೆ ದಾರಿ ನೀಡುವ ಕಾರಣದಿಂದ ಪ್ಯಾಸೆಂಜರ್ ರೈಲುಗಳು ವಿಳಂಬವಾಗುತ್ತವೆ. ಇಂದು ನಾವು ಹೇಳುತ್ತಿರುವ ರೈಲು 'ಚಲಿಸುವ ನರಕ' ಎಂಬ ಕುಖ್ಯಾತಿ ಪಡೆದುಕೊಂಡಿದೆ. ಈ ರೈಲು ಏನಿಲ್ಲ ಅಂದ್ರೆ ಕನಿಷ್ಠ 10 ರಿಂದ 12 ಗಂಟೆ ತಡವಾಗುತ್ತದೆ.

35
ರೈಲು ಸಂಖ್ಯೆ 15707 ಅಮ್ರಪಾಲಿ ಎಕ್ಸ್‌ಪ್ರೆಸ್ (KIR To ASR)

ಕಟಿಹಾರ ಜಂಕ್ಷನ್‌ನಿಂದ ಸೋಮವಾರ ರಾತ್ರಿ 10.45ಕ್ಕೆ ಪ್ರಯಾಣ ಆರಂಭಿಸುವ ಈ ರೈಲು ವೇಳಾಪಟ್ಟಿಯಂತೆ ಬುಧವಾರ ಮಧ್ಯಾಹ್ನ 12.40ಕ್ಕೆ ಅಮೃತಸರ ನಿಲ್ದಾಣ ತಲುಪಬೇಕಾಗುತ್ತದೆ. ಬರೋಬ್ಬರಿ 37 ಗಂಟೆ 55 ನಿಮಿಷದ ದೀರ್ಘ ಪ್ರಯಾಣದ ರೈಲು ಇದಾಗಿದೆ.

45
1805 ಕಿಲೋ ಮೀಟರ್ ದೂರ, 54 ನಿಲುಗಡೆ, 37 ಗಂಟೆ

1805 ಕಿಲೋ ಮೀಟರ್ ದೂರ ಕ್ರಮಿಸುವ ಅಮ್ರಪಾಲಿ ಎಕ್ಸ್‌ಪ್ರೆಸ್ Amrapali Express (KIR ASR EXPRESS) ವಾರದ ಏಳು ದಿನವೂ ಸಂಚರಿಸುತ್ತದೆ. ಈ ದೀರ್ಘ ಪ್ರಯಾಣದಲ್ಲಿ ಒಟ್ಟು 54 ನಿಲುಗಡೆಗಳನ್ನು ಹೊಂದಿದೆ. ದೆಹಲಿಯಲ್ಲಿ 25 ನಿಮಿಷದವರೆಗೆ ಅಮ್ರಪಾಲಿ ಎಕ್ಸ್‌ಪ್ರೆಸ್ ನಿಲ್ಲಲಿದೆ.

ಇದನ್ನೂ ಓದಿ: ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ

55
ಈ ರೈಲಿನ ಸಮಸ್ಯೆಗಳೇನು?

ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳಂತೆ 2A, 3A, 3E, Sleeper (SL) ಮತ್ತು ಜನರಲ್ ಬೋಗಿಗಳನ್ನು ಹೊಂದಿದೆ. ಆದ್ರೆ ಪ್ರಯಾಣಿಕರು ಎಲ್ಲಾ ಬೋಗಿಗಳಲ್ಲಿ ಹತ್ತಿಕೊಳ್ಳೋದರಿಂದ ರೈಲು ತುಂಬಿ ತುಳುಕುತ್ತಿರುತ್ತದೆ. ಜನದಟ್ಟಣೆಯಿಂದಾಗಿ ಶೌಚಾಲಯಗಳು ಗಲೀಜು ಆಗಿರುತ್ತವೆ ಎಂಬುವುದು ಪ್ರಯಾಣಿಕರ ಮಾತು ಆಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಜನರು ಅನಿವಾರ್ಯವಾಗಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ‌ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್! ರೂಟ್ ಹೀಗಿದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories