ಪ್ರಪಂಚದ ಅತ್ಯಂತ ಸಂತೋಷವಾಗಿರೋ ದೇಶ ಯಾವುದು ಗೊತ್ತಾ?

First Published | Feb 17, 2024, 3:44 PM IST

ಪ್ರಪಂಚದಲ್ಲೊಂದು ಹ್ಯಾಪಿಯೆಸ್ಟ್ ದೇಶ ಇದೆ, ಅಲ್ಲಿ ಯಾರೂ ದುಃಖಿತರಾಗಿ ಕಾಣುವುದಿಲ್ಲ ಅಲ್ಲಿ ಎಲ್ಲರೂ ಯಾವಾಗಲೂ ತುಂಬಾನೆ ಖುಷಿಯಾಗಿರುತ್ತಾರೆ. ತಜ್ಞರು ಅವರ ಸಂತೋಷದ ಸೀಕ್ರೆಟ್ ಕೂಡ ತಿಳಿಸಿದ್ದಾರೆ. ಅದನ್ನು ನಾವು ಪಾಲಿಸಿದ್ರೆ, ಖಂಡಿತಾ ನಮ್ಮ ದೇಶವೂ ಹ್ಯಾಪಿಯಾಗಿರುತ್ತೆ. 
 

ಹಣದುಬ್ಬರ, ನಿರುದ್ಯೋಗ ಮತ್ತು ಎಲ್ಲಾ ರೀತಿಯ ಸಮಸ್ಯೆಗಳು ಪ್ರಪಂಚದಾದ್ಯಂತ ಜನರನ್ನು ಕಾಡುತ್ತಿವೆ. ಈ ಸಮಸ್ಯೆಗಳು ಜನರ ಮುಖದ ಮೇಲಿನ ನಗುವನ್ನೇ ಕಸಿದುಕೊಳ್ಳುತ್ತಿದೆ. ಆದರೆ ಕಳೆದ 6 ವರ್ಷಗಳಿಂದ ಅತ್ಯಂತ ಸಂತೋಷದ ದೇಶವಾಗಿ (happiest country) ಉಳಿದಿರುವ ವಿಶ್ವದ ಏಕೈಕ ದೇಶ ಒಂದಿದೆ. ಇಲ್ಲಿ ಯಾರೂ ಕೂಡ ದುಖದಿಂದ ಇರೋದೆ ಇಲ್ಲ. ತಜ್ಞರು ಅದರ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಆ ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಯಾರು ಬೇಕಾದರೂ ಸಂತೋಷವಾಗಬಹುದು ಎಂದು ತಜ್ಞರು ಹೇಳಿದ್ದಾರೆ. .
 

ವಿಶ್ವದ ಹ್ಯಾಪಿಯೆಸ್ಟ್ ದೇಶ ಎಂದರೆ ಅದು ಫಿನ್ ಲ್ಯಾಂಡ್. ಫಿನ್ಲ್ಯಾಂಡ್ (Finland)ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಹೇಗೆ ಮಾರ್ಪಟ್ಟಿತು? ಮತ್ತು ಇಲ್ಲಿನ ಜನರು ಎಂದಿಗೂ ಯಾಕೆ ನಿರಾಶೆಗೊಳ್ಳುವುದಿಲ್ಲ ಅನ್ನೋದನ್ನು ಫಿನ್ನಿಶ್ ಮನಶ್ಶಾಸ್ತ್ರಜ್ಞ ಫ್ರಾಂಕ್ ಮಾರ್ಟೆಲಾ  ತಿಳಿಸಿದ್ದಾರೆ. ಫಿನ್ಲ್ಯಾಂಡ್ ವಿಶ್ವದಲ್ಲೇ ಅತ್ಯಂತ ಕಡಿಮೆ ಅತೃಪ್ತ ಜನರು ವಾಸಿಸುವ ದೇಶ, ಅಂದರೆ ಹೆಚ್ಚು ಸಂತೋಷವಾಗಿರೋ ದೇಶ, ಯಾಕೆ ಅನ್ನೋದನ್ನು ತಿಳಿಯೋಣ.
 

Tap to resize

ನ್ಯೂಯಾರ್ಕ್ ಪೋಸ್ಟ್ (Newyork Post) ವರದಿಯ ಪ್ರಕಾರ,  ಫಿನ್ ಲ್ಯಾಂಡ್ ಹ್ಯಾಪಿ ದೇಶ ಆಗಿ ಇರೋದರ ಹಿಂದೆ ಮೂರು ಪ್ರಮುಖ ಕಾರಣಗಳಿವೆ, ಇದನ್ನು ಇಲ್ಲಿನ ಜನರು ದೈನಂದಿನ ಜೀವನದಲ್ಲಿ ಅನುಸರಿಸುತ್ತಾರೆ. ಯಾವುದೇ ದೇಶದ ಜನರು ಈ ನಿಯಮಗಳನ್ನು ಅನುಸರಿಸಲು ಪ್ರಾರಂಭಿಸಿದರೆ, ಸಂತೋಷವಾಗಿರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಒಗ್ಗಟ್ಟಿನಿಂದ ಈ ಪ್ರತಿಜ್ಞೆ ಮಾಡಿದ್ರೆ, ಇದು ಕೆಟ್ಟ ಪರಿಸ್ಥಿತಿಯ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಮೊದಲನೆಯ ನಿಯಮವೆಂದರೆ ಸಮುದಾಯಕ್ಕಾಗಿ ಬದುಕುವ ಪ್ರಜ್ಞೆ. "ಫಿನ್ಲ್ಯಾಂಡ್ನ ಜನರು ತಮ್ಮ ಸುತ್ತಲಿನ ಜನರ ಬಗ್ಗೆ ಕಾಳಜಿ ವಹಿಸುತ್ತಾರೆ" ಎಂದು ತಜ್ಞರು ಹೇಳುತ್ತಾರೆ. ಅವರು ಇತರರ ಮುಖದಲ್ಲಿ ಸಂತೋಷವನ್ನು ನೋಡಲು ಇತರರ ಬಗ್ಗೆ ಕಾಳಜಿ ವಹಿಸೋದು, ಸಹಾಯ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೀವು ಯಾರಿಗಾದರೂ ಸಹಾಯ ಮಾಡಿದರೆ, ಅವರು ಯಾವಾಗಲೂ ನಿಮಗೆ ಋಣಿಯಾಗಿರುತ್ತಾರೆ.

ಫಿನ್ಲ್ಯಾಂಡ್ನಲ್ಲಿನ ಅನೇಕ ಸಂಶೋಧನೆಗಳು ನೀವು ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಹೆಚ್ಚಿನ ಸಮಯ ಕಳೆದರೆ, ನಿಮ್ಮ ಜೀವನವೂ ತುಂಬಾ ಸಂತೋಷವಾಗಿರುತ್ತದೆ ಎಂದು ದೃಢಪಡಿಸಿದೆ. ಏಕೆಂದರೆ ನೀವು ನಿಮ್ಮ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ನೀವು ಅವರ ಸಂತೋಷವನ್ನು ಹಂಚಿಕೊಳ್ಳಬಹುದು. ಇದು ನಿಮ್ಮ ಮುಖದಲ್ಲಿ ನಗುವನ್ನು ತರುತ್ತದೆ. ಆತಂಕ, ಖಿನ್ನತೆ (depression) ಕೊನೆಗೊಳ್ಳುತ್ತದೆ.
 

ಇಲ್ಲಿನ ಜನರು ತಮಗೆ ಸಂತೋಷವನ್ನುಂಟುಮಾಡುವ ವಿಷಯಗಳ ಪಟ್ಟಿಯನ್ನು ಮಾಡುತ್ತಾರೆ. ಮತ್ತು ಈ ಜನರು ಅದೇ ಕೆಲಸವನ್ನು ಮಾಡಲು ಬಯಸುತ್ತಾರೆ. ಈ ಹಳೆಯ ಮಾದರಿ ಮುಂದುವರೆಯುತ್ತಲೇ ಇರುತ್ತದೆ. ಇತರ ಜನರಿಗಾಗಿ ಉತ್ತಮ ಕೆಲಸ ಮಾಡುವುದು ಅವರ ಆದ್ಯತೆಯಾಗಿದೆ. 

ಎರಡನೆಯದಾಗಿ, ಇಲ್ಲಿನ ಸರ್ಕಾರಿ ಸಂಸ್ಥೆಗಳು ಯಾವಾಗಲೂ ಸಹಾಯ ಮಾಡಲು ಸಿದ್ಧವಾಗಿರುತ್ತವೆ. ಸರ್ಕಾರ ಎಂದಿಗೂ ಅಲ್ಲಿನ ಜನರನ್ನು ಅತೃಪ್ತಿಯಿಂದ ಇರಿಸುವುದಿಲ್ಲ. ಪ್ರತಿ ಕ್ಷಣವೂ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುತ್ತದೆ. 

ಮೂರನೆಯ ಮತ್ತು ಅತಿ ಮುಖ್ಯವಾದ ವಿಷ್ಯ ಏನೆಂದರೆ ನಿಮ್ಮ ದೇಶವನ್ನು ಹೇಗೆ ನಡೆಸಲಾಗುತ್ತದೆ ಎಂಬುದು ನಿಮ್ಮ ಸಂತೋಷದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ದೇಶದಲ್ಲಿ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧತೆ ಇದ್ದರೆ, ನಿಮ್ಮ ಮುಖದಲ್ಲಿ ನಿರಾಶೆಯ ಭಾವನೆ ಇರುತ್ತದೆ. ಅರಾಜಕತೆಯು ಸಾಮಾಜಿಕ ಅಥವಾ ರಾಜಕೀಯವಾಗಿರಲಿ, ಅಥವಾ ಆರ್ಥಿಕವಾಗಿರಲಿ ಎಲ್ಲವೂ ಜನರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ದೇಶದಲ್ಲಿ ಶಾಂತಿ ನೆಲೆಸಬೇಕು. ಇದು ಸಂತೋಷದ ಮುಖ್ಯ ಅಡಿಪಾಯ ಆಗಿದೆ.

ಫಿನ್ಲ್ಯಾಂಡ್ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು (health fecilities) ಹೊಂದಿದೆ. ಸಾರ್ವಜನಿಕ ಸಾರಿಗೆ ಸಾಕಷ್ಟು ವಿಶ್ವಾಸಾರ್ಹ ಮತ್ತು ಅಗ್ಗವಾಗಿದೆ. ಹೆಚ್ಚಿನ ಗಳಿಕೆ ಮಾಡುವವರು ಮತ್ತು ಕಡಿಮೆ ಗಳಿಸುವವರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಜನರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಮತ್ತು ಕಡಿಮೆ ಭ್ರಷ್ಟಾಚಾರವಿದೆ. ಇದು ಇಲ್ಲಿನ ಜನರ ಮುಖದಲ್ಲಿ ಮತ್ತು ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತಲೇ ಇರುತ್ತದೆ. 
 

Latest Videos

click me!